ಐಪಿಎಲ್‌ ಕ್ರಿಕೆಟ್ ಫೈನಲ್| ಎರಡನೇ ಬಾರಿ ಕಫ್ ಎತ್ತಿದ ಆರ್ ಸಿಬಿ

ಸಮಗ್ರ ನ್ಯೂಸ್: ಅಹ್ಮದಾಬಾದ್‌ನ ನರೇಂದ್ರ ಮೋದಿ ಅಂತಾರಾಷ್ಟ್ರೀಯ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2026ರ ಫೈನಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಗುಜರಾತ್ ಟೈಟನ್ಸ್ ವಿರುದ್ಧ 5 ವಿಕೆಟ್‌ಗಳ ಗೆಲುವನ್ನು ದಾಖಲಿಸುವ ಮೂಲಕ ಎರಡನೇ ಬಾರಿಗೆ ಟ್ರೋಫಿಯನ್ನು ಎತ್ತಿಹಿಡಿಯಿತು.

Ad Widget ... .. Ad Widget .

ಪಂದ್ಯದಲ್ಲಿ ಟಾಸ್ ಗೆದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಗುಜರಾತ್ ಟೈಟನ್ಸ್ ತಂಡವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿತು. ಅದರಂತೆ ಗುಜರಾತ್ ಟೈಟನ್ಸ್ ಆರ್‌ಸಿಬಿ ಬೌಲಿಂಗ್ ದಾಳಿಗೆ ತತ್ತರಿಸಿ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 155 ರನ್ ಕಲೆಹಾಕಿ 156 ರನ್‌ಗಳ ಸುಲಭ ಗುರಿ ನೀಡಿತು. ಈ ಗುರಿಯನ್ನು ಬೆನ್ನಟ್ಟಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರಾಟ್ ಕೊಹ್ಲಿ ಅರ್ಧಶತಕದ ನೆರವಿನಿಂದ 18 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 161 ರನ್ ಕಲೆಹಾಕಿತು.

Ad Widget

ಹೀಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಎರಡನೇ ಬಾರಿಗೆ ಚಾಂಪಿಯನ್ ಪಟ್ಟಕ್ಕೇರಿಸಿದ ರಜತ್ ಪಟಿದಾರ್ ಎಂಎಸ್ ಧೋನಿ ಹಾಗೂ ರೋಹಿತ್ ಶರ್ಮಾ ಬಳಿಕ ತಂಡಕ್ಕೆ ಸತತ ಎರಡು ಬಾರಿ ಟ್ರೋಫಿ ತಂದಿಟ್ಟ ನಾಯಕ ಎಂಬ ದಾಖಲೆ ಬರೆದರು.

ಸತತವಾಗಿ ಎರಡು ಕಪ್ ಗೆಲ್ಲಿಸಿ 17 ವರ್ಷ ಹೀನಾಯವಾಗಿ ಟ್ರೋಲ್ ಆಗಿದ್ದ ತಂಡವನ್ನು ಬಲಿಷ್ಠ ತಂಡವನ್ನಾಗಿ ರೂಪಿಸಿದ ರಜತ್ ಪಟಿದಾರ್‌ಗೆ ನಿನ್ನೆ ಟ್ರೋಫಿ ಗೆದ್ದ ಸಂಭ್ರಮವಾದರೆ ಇಂದು ( ಜೂನ್ 1 ) ಹುಟ್ಟುಹಬ್ಬದ ಸಂಭ್ರಮ. ಹೌದು, ಜೂನ್ 1, 1993ರಂದು ಜನಿಸಿದ ರಜತ್ ಪಟಿದಾರ್‌ ಇಂದು 33 ವಸಂತಗಳನ್ನು ಸಂಪೂರ್ಣಗೊಳಿಸಿದ್ದು, ಹುಟ್ಟುಹಬ್ಬದ ಸಂಭ್ರಮಕ್ಕೆ ಇದಕ್ಕಿಂತ ಗಿಫ್ಟ್ ಇನ್ನೇನಿದೆ ಎಂದು ಟ್ರೋಫಿ ಗೆದ್ದದ್ದರ ಡಬಲ್ ಸಂಭ್ರಮಾಚರಣೆ ಮಾಡಿದ್ದಾರೆ.

ಇನ್ನು ಪಟಿದಾರ್ ಮಾತ್ರವಲ್ಲದೇ ತಂಡದ ಬ್ಯಾಟಿಂಗ್ ಕೋಚ್ ಹಾಗೂ ಟ್ರೋಫಿ ಗೆಲ್ಲುವಂತಹ ತಂಡ ರಚಿಸುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ ದಿನೇಶ್ ಕಾರ್ತಿಕ್‌ಗೆ ಸಹ ಈ ದಿನ ಜನಮ ದಿನವಾಗಿದ್ದು, ಅವರಿಗೂ ಸಹ ಈ ಟ್ರೋಫಿ ಬರ್ತ್‌ಡೇ ಗಿಫ್ಟ್ ಎನ್ನಬಹುದು.

Leave a Comment

Your email address will not be published. Required fields are marked *