ಫೈನಲ್ ನಲ್ಲಿ ಆರ್‌ಸಿಬಿ vs ಗುಜರಾತ್ ಟೈಟಾನ್ಸ್ | ಅಚ್ಚರಿ ಮೂಡಿಸಿದ ಗಿಣಿ ಶಾಸ್ತ್ರ

ಸಮಗ್ರ ನ್ಯೂಸ್ : ಇಂದು ಐಪಿಎಲ್ ಫೈನಲ್ ಪಂದ್ಯ ನಡೆಯಲಿದ್ದು, ರಾಜ್ಯದಲ್ಲಿ ಆರ್‌ಸಿಬಿ ಅಭಿಮಾನಿಗಳು ಪಂದ್ಯದ ಪ್ರತಿ ಎಸೆತ ಸಂಭ್ರಮಿಸಲು ಎಲ್ಲಾ ತಯಾರಿ ಮಾಡಿಕೊಂಡಿದ್ದಾರೆ. ಇತ್ತ ಹಲವು ಅಭಿಮಾನಿಗಳು ಅಹಮ್ಮದಾಬಾದ್ ಪ್ರಯಾಣ ಮಾಡಿದ್ದು, ಕ್ರೀಡಾಂಗಣದಲ್ಲಿ ಪಂದ್ಯ ವೀಕ್ಷಿಸಲು ಸಜ್ಜಾಗಿದ್ದಾರೆ.
ಇದೀಗ ಗಿಣಿ ಶಾಸ್ತ್ರದ ಮೂಲಕ ಈ ಬಾರಿ ಟ್ರೋಫಿ ವಿನ್ನರ್ ತಿಳಿದುಕೊಳ್ಳುವ ಪ್ರಯತ್ನ ಮಾಡಲಾಗಿದೆ. ಗಿಣಿ ಹೆಕ್ಕಿದ ಲೋಗೋ ಹಲವರಿಗೆ ಅಚ್ಚರಿ ನೀಡಿದೆ.

. Ad Widget . Ad Widget . Ad Widget .

ಗಿಣಿ ಹೇಳಿದ ಐಪಿಎಲ್ 2026 ಫೈನಲ್ ಭವಿಷ್ಯ
ಐಪಿಎಲ್ ಫೈನಲ್ ಪಂದ್ಯದಲ್ಲಿ ಆರ್‌ಸಿಬಿ ಹಾಗೂ ಗುಜರಾತ್ ಎರಡೂ ಬಲಿಷ್ಠ ತಂಡ. ತಂಡಗಳ ಲೋಗೋ ಮುಂದಿಟ್ಟು, ಗಿಣಿ ಬಳಿ ಒಂದು ಕಾರ್ಡ್ ಆಯ್ಕೆ ಮಾಡಲು ಸೂಚಿಸಲಾಗಿದೆ. ಪಂಜರದಿಂದ ಹೊರಬಂದ ಗಿಣಿ ನೇರವಾಗಿ ಒಂದು ಕಾರ್ಡ್ ಆಯ್ಕೆ ಮಾಡಿ ಮಾಲೀಕನಿಗೆ ನೀಡಿದೆ. ಕಾರ್ಡ್ ತೆಗೆದು ಒಳ ನೋಡಿದರೆ ಅದು ಗುಜರಾತ್ ಟೈಟಾನ್ಸ್ ಲೋಗೋ. ಈ ಗಿಣಿ ಶಾಸ್ತ್ರದ ಪ್ರಕಾರ ಗುಜರಾತ್ ಟೈಟಾನ್ಸ್ ಈ ಫೈನಲ್ ಪಂದ್ಯ ಗೆಲ್ಲಲಿದೆ ಎಂದು ಭವಿಷ್ಯ ನುಡಿದಿದೆ.

. Ad Widget . Ad Widget . Ad Widget . Ad Widget . Ad Widget . Ad Widget . . Ad Widget . Ad Widget . Ad Widget . Ad Widget .

ಆದರೆ ಹೈದರಾಬಾದ್ ಮೂಲಕ ಈ ಗಿಣಿ ಹಾಗೂ ಗಿಣಿ ಶಾಸ್ತ್ರ ನುಡಿಯುವ ಚಿಲಕಮ್ಮನಿಗೆ ಅಭಿಮಾನಿಗಳು ಕ್ಲಾಸ್ ತೆಗೆದುಕೊಂಡಿದ್ದಾರೆ. ಚಿಲಕಮ್ಮ ಮೊನ್ನೆ ಹೈದರಾಬಾದ್ ಗೆಲ್ಲುತ್ತೆ ಎಂದು ಭವಿಷ್ಯ ನುಡಿದ್ದದರು. ಆದರೆ ಹೈದರಾಬಾದ್ ಸೋಲು ಕಂಡ ಟೂರ್ನಿಯಿಂದ ಹೊರಬಿತ್ತು. ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ಗೆಲ್ಲುತ್ತೆ ಎಂದಿದ್ದೀರಿ, ಆದರೆ ಸೋಲು ಕಂಡಿತ್ತು. ಇದೀದ ಫೈನಲ್ ಪಂದ್ಯದಲ್ಲಿ ಗುಜರಾತ್ ಗೆಲ್ಲುತ್ತೆ ಎಂದಿದ್ದೀರಿ. ಧನ್ಯವಾದ ಖಂಡಿತ ಆರ್‌ಸಿಬಿ ಗೆಲ್ಲಲಿದೆ ಎಂದು ಹಲವು ಅಭಿಮಾನಿಗಳು ಟ್ರೋಲ್ ಮಾಡಿದ್ದಾರೆ.

Leave a Comment

Your email address will not be published. Required fields are marked *