May 2026

ಹವಾಮಾನ ವರದಿ| ರಾಜ್ಯಾದ್ಯಂತ ಬಿರುಗಾಳಿ ಸಹಿತ ಪೂರ್ವ ಮುಂಗಾರು| ಹಲವು ಜಿಲ್ಲೆಗಳಿಗೆ ಅಲರ್ಟ್ ಘೋಷಣೆ

ಸಮಗ್ರ ನ್ಯೂಸ್: ರಾಜ್ಯದಲ್ಲಿ ಇಂದೂ ಸಹ ಮಳೆಯ ಅಬ್ಬರ ಮುಂದುವರಿಯಲಿದ್ದು, ಹಲವೆಡೆ ಯೆಲ್ಲೋ ಮತ್ತು ಆರೆಂಜ್ ಅಲರ್ಟ್ ಘೋಷಿಸಲಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಉತ್ತರ ಹಾಗೂ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಗುಡುಗು-ಮಿಂಚು ಸಹಿತ ಬಿರುಗಾಳಿ ಮಳೆಯಾಗುವ ಸಾಧ್ಯತೆ ಇದೆ ಎಂದು ಮುನ್ಸೂಚನೆ ನೀಡಲಾಗಿದೆ. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೋಲಾರ, ತುಮಕೂರು, ಚಿಕ್ಕಬಳ್ಳಾಪುರ ಹಾಗೂ ರಾಮನಗರ ಜಿಲ್ಲೆಗಳ ಕೆಲವೆಡೆ ಗಂಟೆಗೆ 50-60 ಕಿ.ಮೀ ವೇಗದ ಗಾಳಿಯೊಂದಿಗೆ ಮಳೆಯಾಗುವ ನಿರೀಕ್ಷೆಯಿದೆ. ಬಳ್ಳಾರಿ, ವಿಜಯನಗರ, ಚಿತ್ರದುರ್ಗ, ಮೈಸೂರು, ಮಂಡ್ಯ, […]

ಹವಾಮಾನ ವರದಿ| ರಾಜ್ಯಾದ್ಯಂತ ಬಿರುಗಾಳಿ ಸಹಿತ ಪೂರ್ವ ಮುಂಗಾರು| ಹಲವು ಜಿಲ್ಲೆಗಳಿಗೆ ಅಲರ್ಟ್ ಘೋಷಣೆ Read More »

ಕೇರಳಂ ವಿಧಾನಸಭೆಯಲ್ಲಿ ಮೊಳಗಿದ ಕನ್ನಡ ‌ಡಿಂಡಿಮ| ಮಂಜೇಶ್ವರ ಶಾಸಕ‌ ಎ.ಕೆ ಎಂ. ಅಶ್ರಫ್ ರಿಂದ ಕನ್ನಡದಲ್ಲಿ ಪ್ರಮಾಣವಚನ

ಸಮಗ್ರ ನ್ಯೂಸ್: ಕೇರಳಂ ರಾಜ್ಯದ ವಿಧಾನಸಭೆಯಲ್ಲಿ ಕನ್ನಡ ಡಿಂಡಿಮ ಮೊಳಗಿದೆ. ಮಲಯಾಳಂ ಅಧಿಕೃತ ಭಾಷೆಯಾದ ಕೇರಳದ ವಿಧಾನಸಭೆಯಲ್ಲಿ ಗುರುವಾರ ಯುಡಿಎಫ್ ಶಾಸಕ ಎಂಕೆಎಂ ಆಶ್ರಫ್ ಕನ್ನಡದಲ್ಲೇ ಪ್ರಮಾಣ ವಚನ ಸ್ವೀಕರಿಸುವ ಮೂಲಕ ಗಮನ ಸೆಳೆದಿದ್ದಾರೆ. ಗುರುವಾರ ಕೇರಳಂ ವಿಧಾನಸಭೆಯ ಅಧಿವೇಶನದಲ್ಲಿ ಅಶ್ರಫ್ ಶಾಸಕರಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ. ‘ಎ.ಕೆ.ಎಂ ಅಶ್ರಫ್ ಎಂಬವನಾದ ನಾನು ವಿಧಾನಸಭೆಯ ಸದಸ್ಯನಾಗಿ ಚುನಾಯಿತನಾಗಿ ಕಾನೂನು ಮೂಲಕ ಸ್ಥಾಪಿತವಾದ ಭಾರತದ ಸಂವಿಧಾನದ ವಿಷಯದಲ್ಲಿ ನಿಜವಾದ ಶೃದ್ದೆ ಮತ್ತು ನಿಷ್ಠೆಯನ್ನು ಹೊಂದಿರುತ್ತೇನೆಂದು ಭಾರತದ ಸಾರ್ವಭೌಮತ್ವ

ಕೇರಳಂ ವಿಧಾನಸಭೆಯಲ್ಲಿ ಮೊಳಗಿದ ಕನ್ನಡ ‌ಡಿಂಡಿಮ| ಮಂಜೇಶ್ವರ ಶಾಸಕ‌ ಎ.ಕೆ ಎಂ. ಅಶ್ರಫ್ ರಿಂದ ಕನ್ನಡದಲ್ಲಿ ಪ್ರಮಾಣವಚನ Read More »

ಧರ್ಮಸ್ಥಳ: ಮತ್ತೆ ತಲೆಬುರುಡೆ ಪ್ರಕರಣ ಮುನ್ನಲೆಗೆ| ಎಸ್ಐಟಿ, ಸೋಕೊ ತಂಡದಿಂದ ಬಂಗ್ಲೆಗುಡ್ಡದಲ್ಲಿ ತನಿಖೆ

ಸಮಗ್ರ ನ್ಯೂಸ್: ದೇಶದಲ್ಲಿಯೇ ಸಂಚಲನ ಮೂಡಿಸಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳ ಗ್ರಾಮದಲ್ಲಿ ನೂರಾರು ಶವ ಹೂತಿಡಲಾಗಿದೆ ಎಂಬ ಪ್ರಕರಣ ಈಗ ಮತ್ತೆ ಮುನ್ನೆಲೆಗೆ ಬಂದಿದೆ. ಪ್ರಕರಣದ ಕೇಂದ್ರಬಿಂದುವಾಗಿರುವ ಬಂಗ್ಲೆಗುಡ್ಡೆ ಪರಿಸರಕ್ಕೆ ಗುರುವಾರ ಮಧ್ಯಾಹ್ನ ಬೆಂಗಳೂರಿನಿಂದ ಅಗಮಿಸಿದ ಎಫ್‌ಎಸ್‌ಎಲ್ ತಜ್ಞರು ಮತ್ತು ಸೋಕೋ ತಂಡದವರ ಜೊತೆ ಎಸ್‌ಐಟಿ ಅಧಿಕಾರಿಗಳು ಭೇಟಿ ನೀಡಿದ್ದು, ನೇತ್ರಾವತಿ ನದಿತಟದಲ್ಲಿ ಮತ್ತೆ ಮಹಜರು ಕಾರ್ಯ ಆರಂಭಿಸಿದ್ದಾರೆ. ನಾಲ್ಕು ತಿಂಗಳ ಹಿಂದೆ ಸುಮಾರು ಏಳು ಶವಗಳ ಅವಶೇಷ ಪತ್ತೆಯಾಗಿದೆ ಎಂಬ ಸ್ಥಳದಲ್ಲಿ ಈ ತಂಡ

ಧರ್ಮಸ್ಥಳ: ಮತ್ತೆ ತಲೆಬುರುಡೆ ಪ್ರಕರಣ ಮುನ್ನಲೆಗೆ| ಎಸ್ಐಟಿ, ಸೋಕೊ ತಂಡದಿಂದ ಬಂಗ್ಲೆಗುಡ್ಡದಲ್ಲಿ ತನಿಖೆ Read More »

ಬೆಂಗಳೂರು: ಏರ್ ಇಂಡಿಯಾ ವಿಮಾನ ಲ್ಯಾಂಡಿಂಗ್ ವೇಳೆ ಅವಘಡ| ಕೂದಲೆಳೆ ಅಂತರದಲ್ಲಿ ತಪ್ಪಿದ ಭಾರೀ ದುರಂತ

ಸಮಗ್ರ ನ್ಯೂಸ್: ದೆಹಲಿಯಿಂದ ಬೆಂಗಳೂರಿಗೆ ಆಗಮಿಸುತ್ತಿದ್ದ ಏರ್ ಇಂಡಿಯಾ ವಿಮಾನವೊಂದು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ಆಗುವ ವೇಳೆ ಭೀಕರ ಅಪಘಾತದಿಂದ ಕೂದಲೆಳೆ ಅಂತರದಲ್ಲಿ ಪಾರಾಗಿದೆ. ವಿಮಾನವು ರನ್‌ವೇ ಮೇಲೆ ಇಳಿಯುವಾಗ ಅದರ ಹಿಂಭಾಗವು ನೆಲಕ್ಕೆ ಅಪ್ಪಳಿಸಿದೆ. ಅದೃಷ್ಟವಶಾತ್ ವಿಮಾನದಲ್ಲಿದ್ದ ಎಲ್ಲಾ ಪ್ರಯಾಣಿಕರು ಮತ್ತು ಸಿಬ್ಬಂದಿ ಸುರಕ್ಷಿತವಾಗಿದ್ದಾರೆ. ದೆಹಲಿಯಿಂದ ಪ್ರಯಾಣಿಕರನ್ನು ಹೊತ್ತು ತರುತ್ತಿದ್ದ ಏರ್ ಇಂಡಿಯಾದ AI2651 ವಿಮಾನವು ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗಲು ಸಿದ್ಧವಾಗಿತ್ತು. ಆ ಸಮಯದಲ್ಲಿ ಅದರ ಮುಂದೆ ಚಲಿಸುತ್ತಿದ್ದ ಮತ್ತೊಂದು

ಬೆಂಗಳೂರು: ಏರ್ ಇಂಡಿಯಾ ವಿಮಾನ ಲ್ಯಾಂಡಿಂಗ್ ವೇಳೆ ಅವಘಡ| ಕೂದಲೆಳೆ ಅಂತರದಲ್ಲಿ ತಪ್ಪಿದ ಭಾರೀ ದುರಂತ Read More »

ಬಿಜೆಪಿಯನ್ನು ಬೀಟ್ ಮಾಡಿದ ‘ಕಾಕ್ರೋಚ್’| ಜಿರಳೆಗಳ ಭಯಕ್ಕೆ ಎಕ್ಸ್ ಅಕೌಂಟ್ ಭಾರತದಲ್ಲಿ ಬ್ಯಾನ್

ಸಮಗ್ರ ನ್ಯೂಸ್: ಭಾರತದ ಮುಖ್ಯ ನ್ಯಾಯಮೂರ್ತಿಗಳು ಯುವಕರ ಬಗ್ಗೆ ನೀಡಿದ ಹೇಳಿಕೆಗಳಿಗೆ ಪ್ರತಿಕ್ರಿಯೆಯಾಗಿ ಆಕ್ರೋಶ, ವ್ಯಂಗ್ಯ ಮತ್ತು ಆನ್‌ಲೈನ್ ಅಭಿಯಾನವಾಗಿ ಪ್ರಾರಂಭವಾದ ಮೀಮ್-ಉತ್ತೇಜಿತ ವಿಡಂಬನಾತ್ಮಕ ರಾಜಕೀಯ ಚಳವಳಿಯಾದ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ), ಕೇವಲ ಐದು ದಿನಗಳಲ್ಲಿ ಇನ್‌ಸ್ಟಾಗ್ರಾಮ್‌ನಲ್ಲಿ 10 ಮಿಲಿಯನ್ ಅನುಯಾಯಿಗಳನ್ನು ದಾಟಿದ್ದು, ಆನ್‌ಲೈನ್ ಯುದ್ಧಗಳಲ್ಲಿ ಭಾರತದ ಅತ್ಯಂತ ಶಕ್ತಿಶಾಲಿ ಪಕ್ಷ ಬಿಜೆಪಿಯನ್ನು ಹಿಂದಿಕ್ಕಿದೆ. ದಶಕಗಳಿಂದ ರಾಜಕೀಯ ಪ್ರಾಬಲ್ಯವನ್ನು ಎಚ್ಚರಿಕೆಯಿಂದ ಬೆಳೆಸಿಕೊಂಡು ಬಂದಿರುವ ದೇಶದಲ್ಲಿ, ಆನ್‌ಲೈನ್ ವೈರಲ್ ಪಕ್ಷವು ವ್ಯಂಗ್ಯ, ರೀಲ್‌ಗಳು ಮತ್ತು ವೈರಲ್ ಆಕ್ರೋಶದಿಂದ

ಬಿಜೆಪಿಯನ್ನು ಬೀಟ್ ಮಾಡಿದ ‘ಕಾಕ್ರೋಚ್’| ಜಿರಳೆಗಳ ಭಯಕ್ಕೆ ಎಕ್ಸ್ ಅಕೌಂಟ್ ಭಾರತದಲ್ಲಿ ಬ್ಯಾನ್ Read More »

ಇಂಟರ್ನೆಟ್ ನಲ್ಲಿ ಟ್ರೆಂಡ್ ಆದ “ಕಾಕ್ರೋಚ್ ಜನತಾ ಪಾರ್ಟಿ”| ಏನಿದು ಹೊಸ ಪಕ್ಷ? ಯಾಕಿಷ್ಟು ವೈರಲ್‌? ಇಲ್ಲಿದೆ ಕಂಪ್ಲೀಟ್ ಡೀಟೈಲ್ಸ್

ಸಮಗ್ರ ನ್ಯೂಸ್: ಇಂಟರ್ನೆಟ್ ಜಗತ್ತಿನಲ್ಲಿ ಪ್ರತಿದಿನ ಹೊಸ ಹೊಸ ಟ್ರೆಂಡ್‌ಗಳು ಹುಟ್ಟಿಕೊಳ್ಳುತ್ತವೆ. ಅದರಲ್ಲಿ ಕೆಲವು ಒಂದೆರಡು ದಿನದಲ್ಲಿ ಮರೆಯಾಗುತ್ತವೆ, ಇನ್ನು ಕೆಲವು ಜನರ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿದುಬಿಡುತ್ತವೆ. ಇತ್ತೀಚೆಗೆ ‘ಕಾಕ್ರೋಚ್ ಜನತಾ ಪಾರ್ಟಿ’ ಎಂಬ ಪದ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಯಿತು. ಇದು ಕೇಳಲು ವಿಚಿತ್ರವಾಗಿ ತೋರಿದರೂ, ಈ ಹೆಸರಿನ ಹಿಂದೆ ಒಂದು ರೋಚಕ ಕಥೆಯಿದೆ. ಮೊದಲು ಈ ಹೆಸರು ಹೇಗೆ ಹುಟ್ಟಿಕೊಂಡಿತು ಎಂದು ನೋಡೋಣ. ಭಾರತದ ರಾಜಕೀಯ ವ್ಯವಸ್ಥೆಯ ಬಗ್ಗೆ ಯುವ ಜನರಲ್ಲಿ ಇರುವ

ಇಂಟರ್ನೆಟ್ ನಲ್ಲಿ ಟ್ರೆಂಡ್ ಆದ “ಕಾಕ್ರೋಚ್ ಜನತಾ ಪಾರ್ಟಿ”| ಏನಿದು ಹೊಸ ಪಕ್ಷ? ಯಾಕಿಷ್ಟು ವೈರಲ್‌? ಇಲ್ಲಿದೆ ಕಂಪ್ಲೀಟ್ ಡೀಟೈಲ್ಸ್ Read More »

ಉಪ್ಪಿನಂಗಡಿ, ಬೆಳ್ತಂಗಡಿಯಲ್ಲಿ ಸರಣಿ ಕಳ್ಳತನ| ಆರೋಪಿಯ ಪತ್ತೆಗೆ ಸಹಕರಿಸಲು ಪೊಲೀಸ್ ಮನವಿ

ಸಮಗ್ರ ನ್ಯೂಸ್: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಹಾಗೂ ಉಪ್ಪಿನಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳೆದ ಎರಡು ದಿನಗಳಿಂದ ನಡೆದಿರುವ ಸರಣಿ ಮನೆಗಳ್ಳತನ ಪ್ರಕರಣಗಳಿಗೆ ಸಂಬಂಧಿಸಿದಂತೆ ಪೊಲೀಸ್ ಇಲಾಖೆಯು ಸಾರ್ವಜನಿಕರಲ್ಲಿ ಕಟ್ಟೆಚ್ಚರ ವಹಿಸುವಂತೆ ಸೂಚಿಸಿದೆ. ಜೊತೆಗೆ ತಲೆಮರೆಸಿಕೊಂಡಿರುವ ಶಂಕಿತ ಆರೋಪಿಯ ಪತ್ತೆಗೆ ಸಾರ್ವಜನಿಕರ ಸಹಕಾರ ಕೋರಿದೆ. ಕಳ್ಳತನ ಪ್ರಕರಣಗಳಿಗೆ ಸಂಬಂಧಿಸಿದಂತೆ ಕೇರಳ ರಾಜ್ಯದ ಕಣ್ಣೂರು ಜಿಲ್ಲೆಯ ತಳಿಪರಂಬು ನಿವಾಸಿಯಾಗಿರುವ ತಂಗಚ್ಚ ಯಾನೆ ಮ್ಯಾಥ್ಯೂ ಯಾನೆ ಬಶೀರ್ ಎಂಬಾತನ ಮೇಲೆ ಪೊಲೀಸರಿಗೆ ತೀವ್ರ ಅನುಮಾನ ವ್ಯಕ್ತವಾಗಿದೆ. ದಸ್ತಗಿರಿ ವಾರೆಂಟ್

ಉಪ್ಪಿನಂಗಡಿ, ಬೆಳ್ತಂಗಡಿಯಲ್ಲಿ ಸರಣಿ ಕಳ್ಳತನ| ಆರೋಪಿಯ ಪತ್ತೆಗೆ ಸಹಕರಿಸಲು ಪೊಲೀಸ್ ಮನವಿ Read More »

ಪೆಟ್ರೋಲ್, ಡೀಸೆಲ್ ಬಳಿಕ ರಸಗೊಬ್ಬರಗಳ ದರದಲ್ಲೂ ಭಾರೀ ಏರಿಕೆ| ರೈತ ಸಮುದಾಯಕ್ಕೆ ಬರೆ

ಸಮಗ್ರ ನ್ಯೂಸ್: ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧ ರಸಗೊಬ್ಬರ ದರದ ಮೇಲೆಯೂ ಭಾರಿ ಪರಿಣಾಮ ಬೀರಿದೆ. ರಸಗೊಬ್ಬರದ ಅಭಾವದ ಜತೆಗೆ ದರ ಏರಿಕೆ ಆಗಿರುವುದು ರೈತ ಸಮುದಾಯಕ್ಕೆ ಬರೆ ಎಳೆದಂತಾಗಿದೆ. ಯೂರಿಯಾ ಮತ್ತು ಡಿಎಪಿ ದರದಲ್ಲಿ ಭಾರಿ ಏರಿಕೆಯಾಗಿದ್ದರೂ ಕೇಂದ್ರ ಸರ್ಕಾರ ಭಾರಿ ಪ್ರಮಾಣದ ಸಬ್ಸಿಡಿ ನೀಡುವ ಮೂಲಕ ದರವನ್ನು ನಿಯಂತ್ರಣದಲ್ಲಿಟ್ಟಿದೆ. ಆದರೆ, ಪೋಟ್ಯಾಷ್ ಮತ್ತು ಕಾಂಪ್ಲೆಕ್ಸ್ ರಸಗೊಬ್ಬರದ ನಿಯಂತ್ರಣ ಇರದೇ ಇರುವುದರಿಂದ ಇವುಗಳ ದರ ತಿಂಗಳಲ್ಲಿಯೇ ಎರಡು ಬಾರಿ ಏರಿಕೆಯಾಗಿದೆ. ಕಾಂಪ್ಲೆಕ್ಸ್ ಮತ್ತು ಪೋಟ್ಯಾಷ್‌ ರಸಗೊಬ್ಬರ ಮೇ

ಪೆಟ್ರೋಲ್, ಡೀಸೆಲ್ ಬಳಿಕ ರಸಗೊಬ್ಬರಗಳ ದರದಲ್ಲೂ ಭಾರೀ ಏರಿಕೆ| ರೈತ ಸಮುದಾಯಕ್ಕೆ ಬರೆ Read More »

ಕರಾವಳಿ ಯಾಂತ್ರೀಕೃತ ಮೀನುಗಾರಿಕೆಗೆ ಜೂ.1ರಿಂದ ಎರಡು ತಿಂಗಳು ‌ರಜೆ ಘೋಷಿಸಿದ ಡಿಸಿ

ಸಮಗ್ರ ನ್ಯೂಸ್:;ದಕ್ಷಿಣ ಕನ್ನಡ ಜಿಲ್ಲೆಯ ಕರಾವಳಿ ಪ್ರದೇಶದಲ್ಲಿ ಯಾಂತ್ರೀಕೃತ ಮೀನುಗಾರಿಕೆ ಚಟುವಟಿಕೆಗಳ ಮೇಲೆ 61 ದಿನಗಳ ನಿಷೇಧ ಹೇರಲಾಗುತ್ತಿದೆ. ಇದೇ ಜೂ.1 ರಿಂದ ಜು.31 ರವರೆಗೆ ಈ ನಿಷೇಧ ಜಾರಿಯಲ್ಲಿರಲಿದ್ದು, ಜಿಲ್ಲಾಧಿಕಾರಿಗಳು ಈ ಕುರಿತು ಆದೇಶ ಹೊರಡಿಸಿದ್ದಾರೆ. ಈ ಅವಧಿಯಲ್ಲಿ ಎಲ್ಲಾ ಯಾಂತ್ರೀಕೃತ ದೋಣಿಗಳು, ಹತ್ತು ಅಶ್ವಶಕ್ತಿಗಿಂತ ಹೆಚ್ಚು ಸಾಮರ್ಥ್ಯದ ಮೋಟಾರೀಕೃತ ದೋಣಿಗಳಲ್ಲಿ ಮೀನುಗಾರಿಕೆ, ಯಾವುದೇ ಬಲೆ, ಸಾಧನ ಬಳಸಿ ಮೀನುಗಾರಿಕೆ ನಡೆಸುವುದಕ್ಕೆ ಸಂಪೂರ್ಣ ನಿಷೇಧವಿದೆ. ಆಡಳಿತದ ಮೀನುಗಾರಿಕೆ ನಿಷೇಧ ಆದೇಶ ಉಲ್ಲಂಘಿಸುವ ಮೀನುಗಾರರು ಹಾಗೂ ಬೋಟ್

ಕರಾವಳಿ ಯಾಂತ್ರೀಕೃತ ಮೀನುಗಾರಿಕೆಗೆ ಜೂ.1ರಿಂದ ಎರಡು ತಿಂಗಳು ‌ರಜೆ ಘೋಷಿಸಿದ ಡಿಸಿ Read More »

ರಾಜ್ಯದಲ್ಲಿ ಇನ್ಮುಂದೆ ತೆರೆದ ವಾಹನಗಳಲ್ಲಿ ಸಫಾರಿ ನಿಷೇಧ – ಸಚಿವ ಖಂಡ್ರೆ

ಸಮಗ್ರ ನ್ಯೂಸ್: ರಾಜ್ಯದ ಐದು ಹುಲಿ ಸಂರಕ್ಷಿತ ಪ್ರದೇಶ ಹಾಗೂ ವನ್ಯಜೀವಿಧಾಮಗಳ ಸಫಾರಿಯಲ್ಲಿ ತೆರೆದ ಕ್ಯಾಂಪರ್ ಬದಲಿಗೆ ಸುರಕ್ಷಿತ ಬಸ್ ಬಳಕೆ ಮಾಡುವಂತೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಸೂಚನೆ ನೀಡಿದ್ದಾರೆ. ದುಬಾರೆ ಆನೆ ಶಿಬಿರದಲ್ಲಿ ನಿನ್ನೆ ಎರಡು ಸಾಕಾನೆಗಳ ಕಾಳಗದ ವೇಳೆ ಪ್ರವಾಸಿ ಮಹಿಳೆ ಮೃತಪಟ್ಟ ಆಘಾತಕಾರಿ ಘಟನೆ ಹಿನ್ನೆಲೆಯಲ್ಲಿ ಸಫಾರಿಗಳಲ್ಲಿ ಪ್ರವಾಸಿಗರ ಸುರಕ್ಷತೆಗೂ ಹೆಚ್ಚಿನ ಗಮನ ಹರಿಸುವಂತೆ ಅರಣ್ಯ ಸಚಿವರು ಮುಖ್ಯ ವನ್ಯಜೀವಿ ಪರಿಪಾಲಕರಿಗೆ ಸ್ಪಷ್ಟ ನಿರ್ದೇಶನ ನೀಡಿದ್ದಾರೆ.

ರಾಜ್ಯದಲ್ಲಿ ಇನ್ಮುಂದೆ ತೆರೆದ ವಾಹನಗಳಲ್ಲಿ ಸಫಾರಿ ನಿಷೇಧ – ಸಚಿವ ಖಂಡ್ರೆ Read More »