ಬೆಳ್ಳಾರೆ ಮೂಲದ ಸಾಪ್ಟ್ ವೇರ್ ಉದ್ಯೋಗಿ ಬೆಂಗಳೂರಿನಲ್ಲಿ ಅಪಘಾತದಲ್ಲಿ ಸಾವು

ಬೆಳ್ಳಾರೆ: ಬೆಂಗಳೂರಿನಲ್ಲಿ ಸಾಫ್ಟ್‌ವೇರ್ ಉದ್ಯೋಗಿಯಾಗಿದ್ದ ಬೆಳ್ಳಾರೆಯ ಯುವಕ ಸೂರಜ್ ರೈ (27) ಅವರು ರಸ್ತೆ ಅಪಘಾತದಲ್ಲಿ ಸಂಭವಿಸಿದ ತೀವ್ರ ಗಾಯಗಳಿಂದಾಗಿ ಇಂದು (ಮೇ 22) ಮುಂಜಾನೆ ಚಿಕಿತ್ಸೆ ಫಲಿಸದೆ ನಿಧನರಾದರು.

Ad Widget . Ad Widget . Ad Widget . Ad Widget . Ad Widget .

ಬೆಳ್ಳಾರೆಯ ನಿವಾಸಿ, ಖ್ಯಾತ ಯಕ್ಷಗುರು ವಾಸುದೇವ ರೈ ಮತ್ತು ಶರ್ಮಿಳಾ ವಿ. ರೈ ದಂಪತಿಯ ಪುತ್ರರಾಗಿರುವ ಸೂರಜ್ ರೈ ಅವರು ಮೇ 15ರಂದು ರಾತ್ರಿ ತಮ್ಮ ಬೈಕ್‌ನಲ್ಲಿ ಬೆಂಗಳೂರಿಗೆ ಪ್ರಯಾಣಿಸುತ್ತಿದ್ದರು. ಈ ವೇಳೆ ಕುಣಿಗಲ್ ಬಳಿ ಇವರ ಬೈಕ್ ಮತ್ತು ಕೋಳಿ ಸಾಗಾಟದ ವಾಹನದ ನಡುವೆ ಅಪಘಾತ ಸಂಭವಿಸಿದೆ. ಅಪಘಾತದ ರಭಸಕ್ಕೆ ಸೂರಜ್ ಅವರ ತಲೆಗೆ ತೀವ್ರ ಸ್ವರೂಪದ ಗಾಯಗಳಾಗಿದ್ದವು.

Ad Widget . Ad Widget .

ತೀವ್ರವಾಗಿ ಗಾಯಗೊಂಡಿದ್ದ ಅವರನ್ನು ಕೂಡಲೇ ಕುಣಿಗಲ್‌ನ ಬಿಜಿಎಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಳೆದ ಕೆಲವು ದಿನಗಳಿಂದ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದ ಅವರು, ಚಿಕಿತ್ಸೆ ಫಲಕಾರಿಯಾಗದೆ ಇಂದು ಮುಂಜಾನೆ ಕೊನೆಯುಸಿರೆಳೆದಿದ್ದಾರೆ.

ಮೃತರು ತಂದೆ ವಾಸುದೇವ ರೈ, ತಾಯಿ ಶರ್ಮಿಳಾ ರೈ, ಪತ್ನಿ ಸ್ನೇಹ, ಸಹೋದರ ಸುದೀಪ್ ರೈ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

Leave a Comment

Your email address will not be published. Required fields are marked *