ವಿಲಕ್ಷಣ ಮೈತ್ರಿಗೆ ಮುನ್ನುಡಿ ಬರೆಯುತ್ತಾ ತಮಿಳುನಾಡು ರಾಜಕೀಯ| ಡಿಎಂಕೆ – ಎಐಡಿಎಂಕೆ ನಡುವೆ ಮೈತ್ರಿ ಮಾತುಕತೆ!?

ಸಮಗ್ರ ನ್ಯೂಸ್: ತಮಿಳುನಾಡಿನ ರಾಜಕೀಯ ಇತಿಹಾಸದಲ್ಲೇ ಹಿಂದೆಂದೂ ಕಾಣದ ಅಚ್ಚರಿಯ ಬೆಳವಣಿಗೆ ನಡೆಯಬಹುದು. ರಾಜ್ಯದಲ್ಲಿ ದಶಕಗಳಿಂದ ಪರಸ್ಪರ ಕಿತ್ತಾಡುತ್ತಿದ್ದ ಬದ್ಧ ಎದುರಾಳಿಗಳಾದ ಡಿಎಂಕೆ ಮತ್ತು ಎಐಎಡಿಎಂಕೆ ಈಗ ಪರಸ್ಪರ ಕೈಜೋಡಿಸುವ ಮುನ್ಸೂಚನೆ ಸಿಕ್ಕಿದೆ.

. Ad Widget . Ad Widget . Ad Widget .

ನಟ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ ಸರ್ಕಾರ ರಚನೆಗೆ ಕಸರತ್ತು ನಡೆಸುತ್ತಿರುವ ಹೊತ್ತಲ್ಲೇ, ಡಿಎಂಕೆ ಈಗ ಎಐಎಡಿಎಂಕೆ ಜೊತೆಗೆ ಗುಪ್ತ ಮಾತುಕತೆ ಆರಂಭಿಸಿರುವುದು ಭಾರಿ ಸಂಚಲನ ಮೂಡಿಸಿದೆ.

. Ad Widget . Ad Widget . Ad Widget . Ad Widget . Ad Widget . Ad Widget . . Ad Widget . Ad Widget . Ad Widget . Ad Widget .

ಮೂಲಗಳ ಪ್ರಕಾರ, ವಿಜಯ್ ಅವರು ಮಿತ್ರಪಕ್ಷಗಳನ್ನು ಒಟ್ಟುಗೂಡಿಸಿ ಅಧಿಕಾರ ಹಿಡಿಯುವುದನ್ನು ತಪ್ಪಿಸಲು ಡಿಎಂಕೆ ನಾಯಕತ್ವವು ಎಐಎಡಿಎಂಕೆ ಜೊತೆಗೆ ‘ಬ್ಯಾಕ್‌ಚಾನೆಲ್’ ಮಾತುಕತೆಗಳನ್ನು ನಡೆಸುತ್ತಿದೆ. ತಮಿಳುನಾಡಿನ ರಾಜಕೀಯ ಸಮೀಕರಣಗಳನ್ನೇ ಬದಲಿಸಬಲ್ಲ ಈ ಅಪರೂಪದ ಸಂಪರ್ಕದ ಬಗ್ಗೆ ಇಂಡಿಯಾ ಟುಡೇ ಟಿವಿ ವರದಿ ಮಾಡಿದೆ.

ಎಐಎಡಿಎಂಕೆ ಮೂಲಗಳು ಈ ಮಾತುಕತೆಯನ್ನು ಖಚಿತಪಡಿಸಿವೆ. ಆದರೆ, ಈವರೆಗೆ ಅಧಿಕೃತವಾಗಿ ಯಾವುದೇ ಒಮ್ಮತಕ್ಕೆ ಬಂದ ಬಗ್ಗೆ ಮಾಹಿತಿಯಿಲ್ಲ. ದಶಕಗಳಿಂದ ತಮಿಳುನಾಡು ರಾಜಕಾರಣವನ್ನು ಎರಡು ಧ್ರುವಗಳಂತೆ ಆಳುತ್ತಿದ್ದ ಈ ಎರಡು ದ್ರಾವಿಡ ಪಕ್ಷಗಳು, ಈಗ ಹೊಸ ಶಕ್ತಿ ವಿಜಯ್ ಅಬ್ಬರಕ್ಕೆ ಕಡಿವಾಣ ಹಾಕಲು ಒಂದಾಗುತ್ತವೆಯೇ ಎಂಬುದು ಸದ್ಯದ ಕುತೂಹಲ.

ಒಂದು ವೇಳೆ ಈ ಮೈತ್ರಿ ನಡೆದರೆ, ಅದು ತಮಿಳುನಾಡು ರಾಜಕೀಯದಲ್ಲಿ ಅತ್ಯಂತ ವಿಲಕ್ಷಣ ಮತ್ತು ಅಭೂತಪೂರ್ವ ಬದಲಾವಣೆಗೆ ಸಾಕ್ಷಿಯಾಗಲಿದೆ. ವಿಜಯ್ ಅವರ ಅಧಿಕಾರದ ಕನಸಿಗೆ ಅಡ್ಡಿಯಾಗಲು ದ್ರಾವಿಡ ಪಕ್ಷಗಳು ಒಟ್ಟಾಗಿ ನಿಲ್ಲುವ ಸಾಧ್ಯತೆಗಳನ್ನು ಈ ಬೆಳವಣಿಗೆ ಪುಷ್ಠೀಕರಿಸಿದೆ.

Leave a Comment

Your email address will not be published. Required fields are marked *