April 2026

ಎ.29: ಧರ್ಮಸ್ಥಳದಲ್ಲಿ ಸಾಮೂಹಿಕ ವಿವಾಹ

ಸಮಗ್ರ ನ್ಯೂಸ್: ಧರ್ಮಸ್ಥಳದಲ್ಲಿ ಏ.29ರಂದು ಬುಧವಾರ ಸಂಜೆ 6.40ರ ಗೋದೂಳಿ ಲಗ್ನದಲ್ಲಿ 54ನೇ ವರ್ಷದ ಉಚಿತ ಸಾಮೂಹಿಕ ವಿವಾಹ ನಡೆಯಲಿದೆ. ಈಗಾಗಲೇ 105 ಜೋಡಿಗಳು ಹೆಸರು ನೋಂದಾಯಿಸಿದ್ದು, ಅವರು ಕೊಟ್ಟ ದಾಖಲೆಗಳ ಮೂಲ ಪ್ರತಿಗಳನ್ನು ಪರಿಶೀಲಿಸಿದ ಬಳಿಕ ಅವರಿಗೆ ಸಾಮೂಹಿಕ ವಿವಾಹದಲ್ಲಿ ಅವಕಾಶ ನೀಡಲಾಗುವುದು. ವರನಿಗೆ ಧೋತಿ, ಶಾಲು ಮತ್ತು ವಧುವಿಗೆ ಸೀರೆ, ರವಿಕೆ ಕಣ ಹಾಗೂ ಮಂಗಳಸೂತ್ರ ಮತ್ತು ಹೂವಿನಹಾರ ನೀಡಲಾಗುವುದು. ಮದುವೆಯ ಎಲ್ಲ ವೆಚ್ಚವನ್ನು ಧರ್ಮಾ ಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ಅಧ್ಯಕ್ಷರಾಗಿರುವ ಶ್ರೀಧರ್ಮಸ್ಥಳ ಮಂಜು […]

ಎ.29: ಧರ್ಮಸ್ಥಳದಲ್ಲಿ ಸಾಮೂಹಿಕ ವಿವಾಹ Read More »

ಕಲ್ಲಂಗಡಿ ತಿಂದು ಮಲಗಿದವರು ಮುಂಜಾನೆ ಹೆಣವಾದರು!!

ಸಮಗ್ರ ನ್ಯೂಸ್: ದಕ್ಷಿಣ ಮುಂಬೈನಲ್ಲಿರುವ ತಮ್ಮ ಮನೆಯಲ್ಲಿ ಊಟದ ನಂತರ ಕಲ್ಲಂಗಡಿ ಸೇವಿಸಿ ಒಂದೇ ಕುಟುಂಬದ ನಾಲ್ವರು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಏಪ್ರಿಲ್ 25ರಂದು ಜೆಜೆ ಮಾರ್ಗ್ ನಿವಾಸದಲ್ಲಿ ನಡೆದ ಕುಟುಂಬ ಭೋಜನದ ನಂತರ ಅಬ್ದುಲ್ಲಾ (40), ಪತ್ನಿ ನಸ್ರೀನ್ (35), ಪುತ್ರಿಯರಾದ ಜೈನಾಬ್ (13) ಮತ್ತು ಆಯೇಷಾ (16) ಅನಾರೋಗ್ಯಕ್ಕೆ ಒಳಗಾದರು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಕುಟುಂಬವು ಇತರ ಐದು ಅತಿಥಿಗಳೊಂದಿಗೆ ಚಿಕನ್ ಪುಲಾವ್ ತಿಂದಿದ್ದಾರೆ. ಬಳಿಕ ಮನೆಗೆ ತೆರಳಿ ಕಲ್ಲಂಗಡಿ ಸೇವಿಸಿದ್ದಾರೆ. ಬಳಿಕ

ಕಲ್ಲಂಗಡಿ ತಿಂದು ಮಲಗಿದವರು ಮುಂಜಾನೆ ಹೆಣವಾದರು!! Read More »

ಪಾಕಿಸ್ತಾನ ವಿಶ್ವಾಸಕ್ಕೆ ಅನರ್ಹ – ಇರಾನ್

ಸಮಗ್ರ ನ್ಯೂಸ್: ಇರಾನ್ ಮತ್ತು ಅಮೆರಿಕ ನಡುವೆ ನಡೆಯುತ್ತಿರುವ ಮಾತುಕತೆಯಲ್ಲಿ ಮಧ್ಯವರ್ತಿಯಾಗಿ ಪಾಕಿಸ್ತಾನದ ಪಾತ್ರದ ಬಗ್ಗೆ ಇರಾನ್‍ನ ಸಂಸದರು ಸಂದೇಹ ವ್ಯಕ್ತಪಡಿಸಿದ್ದು ಪಾಕಿಸ್ತಾನವು ಟ್ರಂಪ್ ಅವರ ಹಿತಾಸಕ್ತಿಯ ಪರವಿದೆ ಎಂದು ಆರೋಪಿಸಿದ್ದಾರೆ. ಪಾಕಿಸ್ತಾನವು ಅಮೆರಿಕದ ಜನರ ಇಚ್ಛೆಗೆ ವಿರುದ್ಧವಾಗಿ ಒಂದು ಮಾತನ್ನೂ ಹೇಳುವುದಿಲ್ಲ. ಯಾವಾಗಲೂ ಅಮೆರಿಕ ಅಧ್ಯಕ್ಷ ಟ್ರಂಪ್ ಅವರ ಹಿತಾಸಕ್ತಿಗೆ ಆದ್ಯತೆ ನೀಡುತ್ತದೆ ಎಂದು ಸಂಸದ ಹಾಗೂ ಇರಾನ್‍ನ ರಾಷ್ಟ್ರೀಯ ಭದ್ರತೆ ಮತ್ತು ವಿದೇಶಾಂಗ ನೀತಿ ಆಯೋಗದ ವಕ್ತಾರ ಇಬ್ರಾಹಿಂ ರೆಝಾಯಿ ಟೀಕಿಸಿದ್ದಾರೆ. ಪಾಕಿಸ್ತಾನವು ಉತ್ತಮ

ಪಾಕಿಸ್ತಾನ ವಿಶ್ವಾಸಕ್ಕೆ ಅನರ್ಹ – ಇರಾನ್ Read More »

ರಾಜ್ಯದ ಶಾಲೆಗಳಲ್ಲಿ ಅಶ್ಲೀಲ ಹಾಡುಗಳಿಗೆ ನೃತ್ಯ ಮಾಡಿಸದಂತೆ ಇಲಾಖೆಯಿಂದ ನಿರ್ಬಂಧ

ಸಮಗ್ರ ನ್ಯೂಸ್: ರಾಜ್ಯದ ಸರ್ಕಾರಿ/ಅನುದಾನಿತ/ಅನುದಾನ ರಹಿತ ಶಾಲೆಗಳಲ್ಲಿ ಅಶ್ಲೀಲ ಹಾಡುಗಳಿಗೆ ಮಕ್ಕಳಿಂದ ನೃತ್ಯ ಮಾಡಿಸುತ್ತಿರುವುದನ್ನು ನಿರ್ಬಂಧಿಸುವ ಕುರಿತು ಶಿಕ್ಷಣ ಇಲಾಖೆ ಆದೇಶಿಸಿದೆ. ಶಾಲೆಯು ಮಕ್ಕಳಿಗೆ ಜ್ಞಾನ ದೇಗುಲವಿದ್ದಂತೆ. ಪ್ರತಿ ಮಗುವಿನ ಬೆಳವಣಿಗೆ, ಸಂಸ್ಕಾರ, ವಿನಯತೆ, ಒಳ್ಳೆಯ ನಡತೆ, ಮಾನಸಿಕ ಸ್ಥಿತಿ, ಆರೋಗ್ಯ, ನೈತಿಕ ಮೌಲ್ಯಗಳು, ಮಗುವಿನ ಭವಿಷ್ಯದ ನಿರ್ಮಾಣ ಶಾಲೆಯಿಂದಲೇ ಪ್ರಾರಂಭವಾಗುವುದು ಹಾಗೂ ಶಾಲೆಯಿಂದಲೇ ಮಕ್ಕಳಿಗೆ ಒಂದು ಉತ್ತಮ ಭವಿಷ್ಯ ನಿರ್ಮಾಣವಾಗುವುದು. ಶಾಲೆಯಲ್ಲಿ ಕಲಿಸಿದ ಉತ್ತಮ ಶಿಕ್ಷಣದಿಂದಾಗಿ, ಇಂದಿನ ಮಕ್ಕಳೇ ನಾಳಿನ ಉತ್ತಮ ಪ್ರಜೆಗಳಾಗುವರು. ಅಂತಹ ವಿದ್ಯಾರ್ಥಿಗಳಿಂದ

ರಾಜ್ಯದ ಶಾಲೆಗಳಲ್ಲಿ ಅಶ್ಲೀಲ ಹಾಡುಗಳಿಗೆ ನೃತ್ಯ ಮಾಡಿಸದಂತೆ ಇಲಾಖೆಯಿಂದ ನಿರ್ಬಂಧ Read More »

ಆರ್ ಸಿಬಿ ಆಟಕ್ಕೆ ಡೆಲ್ಲಿ ಕ್ಯಾಪಿಟಲ್ಸ್ ಚೆಲ್ಲಾಪಿಲ್ಲಿ

ಸಮಗ್ರ ನ್ಯೂಸ್: ಇಂಡಿಯನ್ ಪ್ರೀಮಿಯರ್ ಲೀಗ್‌ನ (ಐಪಿಎಲ್‌) ಇಂದಿನ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ಗೆಲುವು ಸಾಧಿಸಿದೆ. ಡೆಲ್ಲಿ ವಿರುದ್ಧ ಟಾಸ್‌ ಗೆದ್ದ ಆರ್‌ಸಿಬಿ, ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಭುವನೇಶ್ವರ್ ಕುಮಾರ್ (5ಕ್ಕೆ3) ಮತ್ತು ಜೋಶ್ ಹೇಝಲ್‌ವುಡ್‌ (12ಕ್ಕೆ4) ಅವರ ಸ್ವಿಂಗ್ ಮತ್ತು ವೇಗದ ದಾಳಿಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಅಗ್ರ ಬ್ಯಾಟರ್‌ಗಳು ತರಗೆಲೆಗಳಂತೆ ಉದುರಿದರು. ಮಾರಕ ಬೌಲಿಂಗ್ ದಾಳಿಗೆ ಡೆಲ್ಲಿ ಕೇವಲ 74 ರನ್ ಗಳಿಸಲಷ್ಟೇ ಶಕ್ತವಾಯಿತು. ಪದಾರ್ಪಣೆ ಪಂದ್ಯವಾಡಿದ

ಆರ್ ಸಿಬಿ ಆಟಕ್ಕೆ ಡೆಲ್ಲಿ ಕ್ಯಾಪಿಟಲ್ಸ್ ಚೆಲ್ಲಾಪಿಲ್ಲಿ Read More »

ದೇಶದಲ್ಲಿ ಗಂಭೀರ ಸಮಸ್ಯೆಗೆ ಕಾರಣವಾಗಲಿದೆಯಾ ಸೂಪರ್ ಎಲ್ ನಿನೋ? ಹವಾಮಾನ ಇಲಾಖೆಯಿಂದ ಎಚ್ಚರದಿಂದಿರಲು ಸೂಚನೆ

ಸಮಗ್ರ ನ್ಯೂಸ್: ದೇಶದಲ್ಲಿ ಅವಧಿಗೂ ಮುನ್ನವೇ ಆರಂಭವಾಗಿರುವ ಭೀಕರ ಬೇಸಿಗೆಯ ನಡುವೆ, ಈ ವರ್ಷ ಭಾರತಕ್ಕೆ ಭೀಕರ ಬರಗಾಲದ ಆತಂಕ ಎದುರಾಗಿದೆ. ಪೆಸಿಫಿಕ್ ಮಹಾಸಾಗರದಲ್ಲಿ ಪ್ರಬಲಗೊಳ್ಳುತ್ತಿರುವ ‘ಸೂಪರ್ ಎಲ್ ನಿನೋ’ ವಿದ್ಯಮಾನವು ಭಾರತದ ಮುಂಗಾರು ಮಾರುತಗಳ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಹವಾಮಾನ ತಜ್ಞರು ಎಚ್ಚರಿಸಿದ್ದಾರೆ. ಈಗಾಗಲೇ ದೇಶದ ಹಲವೆಡೆ ತಾಪಮಾನ ದಾಖಲೆ ಮಟ್ಟಕ್ಕೆ ಏರಿದೆ. ದಕ್ಷಿಣ ಭಾರತದ ಕರ್ನಾಟಕ, ಆಂಧ್ರಪ್ರದೇಶ ಮತ್ತು ತಮಿಳುನಾಡಿನಲ್ಲಿ ತಾಪಮಾನ 40 ಡಿಗ್ರಿ ಸೆಲ್ಸಿಯಸ್ ದಾಟಿದ್ದರೆ, ಉತ್ತರ

ದೇಶದಲ್ಲಿ ಗಂಭೀರ ಸಮಸ್ಯೆಗೆ ಕಾರಣವಾಗಲಿದೆಯಾ ಸೂಪರ್ ಎಲ್ ನಿನೋ? ಹವಾಮಾನ ಇಲಾಖೆಯಿಂದ ಎಚ್ಚರದಿಂದಿರಲು ಸೂಚನೆ Read More »

ಚಾರ್ಮಾಡಿ ಘಾಟ್ ನಲ್ಲಿ ಪ್ರವಾಸಿ ಬಸ್ ಉರುಳಿ ಬಿದ್ದು ಹಲವರಿಗೆ ಗಾಯ

ಸಮಗ್ರ ನ್ಯೂಸ್: ಚಾರ್ಮಾಡಿ ಘಾಟಿಯ ನಾಲ್ಕನೇ ತಿರುವಿನಲ್ಲಿ ಭಾನುವಾರ ಮಧ್ಯಾಹ್ನ ಖಾಸಗಿ ಬಸ್ ಉರುಳಿ ಬಿದ್ದು, ಇಪ್ಪತ್ತಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಧರ್ಮಸ್ಥಳದಿಂದ ದರ್ಶನ ಮುಗಿಸಿ ತೆರಳುತ್ತಿದ್ದ ಆಂಧ್ರ ಮೂಲದ ಭಕ್ತರಿದ್ದ ಖಾಸಗಿ ಬಸ್, ಉಜಿರೆಯಿಂದ ಕೊಟ್ಟಿಗೆಹಾರದ ಕಡೆ ಹೊರಟಿದ್ದ ವೇಳೆ ಚಾರ್ಮಾಡಿ ಘಾಟಿಯ ಮೂರನೇ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಉರುಳಿ ಬಿದ್ದಿದೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಂಭೀರ ಗಾಯಗೊಂಡ ಕೆಲವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.

ಚಾರ್ಮಾಡಿ ಘಾಟ್ ನಲ್ಲಿ ಪ್ರವಾಸಿ ಬಸ್ ಉರುಳಿ ಬಿದ್ದು ಹಲವರಿಗೆ ಗಾಯ Read More »

ಪುತ್ತೂರು: ದೇವಸ್ಥಾನದ ಅಭಿವೃದ್ಧಿಗೆ ಕಠಿಣ ಹೆಜ್ಜೆ ಇರಿಸಿದ ಶಾಸಕ‌ ಅಶೋಕ್ ಕುಮಾರ್ ರೈ

ಸಮಗ್ರ ನ್ಯೂಸ್: ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ಅಭಿವೃದ್ಧಿ ಹಾಗೂ ರಥಬೀದಿ ವಿಸ್ತರಣೆಗಾಗಿ ಉಳ್ಳಾಲ್ತಿ ಕಟ್ಟೆಯ ಬಳಿಯಿರುವ ಖಾಸಗಿ ಜಾಗವನ್ನು ಯಾವುದೇ ಬೆಲೆ ತೆತ್ತಾದರೂ ವಶಪಡಿಸಿಕೊಳ್ಳಲಾಗುವುದು ಎಂದು ಶಾಸಕ ಅಶೋಕ್ ಕುಮಾರ್ ರೈ ತಿಳಿಸಿದ್ದಾರೆ. ಈ ಕುರಿತು ಮಾತನಾಡಿದ ಅವರು, “ದೇವಸ್ಥಾನಕ್ಕೆ ಆ ಜಾಗದ ಅವಶ್ಯಕತೆಯಿದೆ. ಸಂಬಂಧಪಟ್ಟವರ ಜೊತೆ ಈಗಾಗಲೇ ಮಾತುಕತೆ ನಡೆಸಲಾಗುವುದು. ಅವರು 2 ಎಕರೆ ಜಾಗವನ್ನು ದೇವಸ್ಥಾನಕ್ಕೆ ನೀಡಬೇಕು. ಅದಕ್ಕೆ ಬೇಕಾದ ಹಣವನ್ನು ದೇವಸ್ಥಾನದ ಮೂಲಕವೇ ನೀಡಲಾಗುವುದು. ಒಂದು ವೇಳೆ ಅವರು ಸಹಕರಿಸದಿದ್ದರೆ, ರಸ್ತೆ ವಿಸ್ತರಣೆಗೆ

ಪುತ್ತೂರು: ದೇವಸ್ಥಾನದ ಅಭಿವೃದ್ಧಿಗೆ ಕಠಿಣ ಹೆಜ್ಜೆ ಇರಿಸಿದ ಶಾಸಕ‌ ಅಶೋಕ್ ಕುಮಾರ್ ರೈ Read More »

ಮಂಗಳೂರು ಕುಕ್ಕರ್ ಬಾಂಬ್ ಸ್ಪೋಟ ಪ್ರಕರಣ| ಆರೋಪಿ ಶಾರೀಕ್ ಗೆ 10 ವರ್ಷಗಳ ಕಠಿಣ ಶಿಕ್ಷೆ ವಿಧಿಸಿ NIA ಕೋರ್ಟ್ ಆದೇಶ

ಸಮಗ್ರ ನ್ಯೂಸ್: ಮಂಗಳೂರಿನ ಕುಕ್ಕರ್ ಬಾಂಬ್ ಬ್ಲಾಸ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಮೊಹಮ್ಮದ್ ಶಾರಿಕ್ ಗೆ 10 ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿ ಎನ್ ಐಎ ವಿಶೇಷ ನ್ಯಾಯಾಲಯ ಆದೇಶ ಹೊರಡಿಸಿದೆ. 2022ರ ನವೆಂಬರ್ 19ರಂದು ಮಂಗಳೂರಿನಲ್ಲಿ ನಡೆದಿದ್ದ ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಎನ್ ಐಎ ವಿಶೇಷ ನ್ಯಾಯಾಲಯ ಇಂದು ಅಪರಾಧಿ ಮೊಹಮ್ಮದ್ ಶಾರಿಕ್ ಗೆ 10 ವರ್ಷಗಳ ಕಠಿಣ ಜೈಲು ಶಿಕ್ಷೆ ನೀಡಿ ಆದೇಶ ಹೊರಡಿಸಿದೆ. 2024ರ ಏಪ್ರಿಲ್ ನಲ್ಲಿ

ಮಂಗಳೂರು ಕುಕ್ಕರ್ ಬಾಂಬ್ ಸ್ಪೋಟ ಪ್ರಕರಣ| ಆರೋಪಿ ಶಾರೀಕ್ ಗೆ 10 ವರ್ಷಗಳ ಕಠಿಣ ಶಿಕ್ಷೆ ವಿಧಿಸಿ NIA ಕೋರ್ಟ್ ಆದೇಶ Read More »

ಪೇಟಿಎಂ ಬ್ಯಾಂಕಿಂಗ್ ಪರವಾನಗಿ ರದ್ದುಗೊಳಿಸಿದ ಆರ್ ಬಿಐ

ಸಮಗ್ರ ನ್ಯೂಸ್: ದೇಶದ ಪ್ರಮುಖ ಫಿನ್‌ಟೆಕ್ ಸಂಸ್ಥೆಯಾದ ಪೇಟಿಎಂಗೆ ದೊಡ್ಡ ಆಘಾತ ಎದುರಾಗಿದೆ. ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಲಿಮಿಟೆಡ್‌ನ ಬ್ಯಾಂಕಿಂಗ್ ಪರವಾನಗಿಯನ್ನು ಭಾರತೀಯ ರಿಸರ್ವ್ ಬ್ಯಾಂಕ್ ಏಪ್ರಿಲ್ 24, 2026 ರಿಂದ ಜಾರಿಗೆ ಬರುವಂತೆ ತಕ್ಷಣದಿಂದ ರದ್ದುಗೊಳಿಸಿದೆ. ಆರ್‌ಬಿಐ ಆದೇಶದಂತೆ ಏಪ್ರಿಲ್ 24ರ ವ್ಯವಹಾರದ ಅಂತ್ಯದ ವೇಳೆಗೆ ಪೇಟಿಎಂ ಬ್ಯಾಂಕ್ ತನ್ನ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಬೇಕಿದೆ. ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆ 1949ರ ಸೆಕ್ಷನ್ 22(4) ರ ಅಡಿಯಲ್ಲಿ ನೀಡಲಾಗಿದ್ದ ಪರವಾನಗಿಯನ್ನು ರದ್ದುಪಡಿಸಲಾಗಿದೆ. ಬ್ಯಾಂಕ್ ನಡೆಸುತ್ತಿರುವ ವ್ಯವಹಾರದ ಶೈಲಿಯು ಠೇವಣಿದಾರರ

ಪೇಟಿಎಂ ಬ್ಯಾಂಕಿಂಗ್ ಪರವಾನಗಿ ರದ್ದುಗೊಳಿಸಿದ ಆರ್ ಬಿಐ Read More »