ಆರ್ ಸಿಬಿ ಆಟಕ್ಕೆ ಡೆಲ್ಲಿ ಕ್ಯಾಪಿಟಲ್ಸ್ ಚೆಲ್ಲಾಪಿಲ್ಲಿ

ಸಮಗ್ರ ನ್ಯೂಸ್: ಇಂಡಿಯನ್ ಪ್ರೀಮಿಯರ್ ಲೀಗ್‌ನ (ಐಪಿಎಲ್‌) ಇಂದಿನ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ಗೆಲುವು ಸಾಧಿಸಿದೆ.

Ad Widget . Ad Widget . Ad Widget . Ad Widget . Ad Widget .

ಡೆಲ್ಲಿ ವಿರುದ್ಧ ಟಾಸ್‌ ಗೆದ್ದ ಆರ್‌ಸಿಬಿ, ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಭುವನೇಶ್ವರ್ ಕುಮಾರ್ (5ಕ್ಕೆ3) ಮತ್ತು ಜೋಶ್ ಹೇಝಲ್‌ವುಡ್‌ (12ಕ್ಕೆ4) ಅವರ ಸ್ವಿಂಗ್ ಮತ್ತು ವೇಗದ ದಾಳಿಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಅಗ್ರ ಬ್ಯಾಟರ್‌ಗಳು ತರಗೆಲೆಗಳಂತೆ ಉದುರಿದರು. ಮಾರಕ ಬೌಲಿಂಗ್ ದಾಳಿಗೆ ಡೆಲ್ಲಿ ಕೇವಲ 74 ರನ್ ಗಳಿಸಲಷ್ಟೇ ಶಕ್ತವಾಯಿತು.

Ad Widget . Ad Widget .

ಪದಾರ್ಪಣೆ ಪಂದ್ಯವಾಡಿದ ಆರಂಭಿಕ ಬ್ಯಾಟ‌ರ್ ಸಾಹಿಲ್ ಪ್ರಕಾಶ್ ಸೊನ್ನೆ ಸುತ್ತಿದರೆ, ಕಳೆದ ಪಂದ್ಯದಲ್ಲಿ ಶತಕ ಸಿಡಿಸಿದ್ದ ಕೆ.ಎಲ್.ರಾಹುಲ್ ಕೇವಲ 1 ರನ್‌ ಗಳಿಸಿ ಪೆವಿಲಿಯನ್‌ ಸೇರಿದರು. ನಂತರ ಬಂದ ನಿತೀಶ್ ರಾಣ (1), ಟ್ರಿಸ್ಟನ್ ಸ್ಟಬ್ (5) ಹೆಚ್ಚು ಹೊತ್ತು ನಿಲ್ಲಿಲಿಲ್ಲ. ಸಮೀರ್ ರಿಜ್ಜಿ ಮತ್ತು ನಾಯಕ ಅಕ್ಷರ್‌ಗೂ ಖಾತೆ ತೆರೆಯಲಾಗಲಿಲ್ಲ.

7, 8 ಮತ್ತು 9ನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಇಳಿದ ಅಭಿಷೇಕ್ ಪೊರೇಲ್ (30), ಡೇವಿಡ್ ಮಿಲ್ಲರ್ (19) ಹಾಗೂ ಕೇಲ್ ಜೇಮಿಸನ್ (12) ಹೊರತುಪಡಿಸಿ ಉಳಿದವರ್ಯಾರು ಎರಡಂಕಿ ಮೊತ್ತ ಕಲೆಹಾಕಲಿಲ್ಲ. ಅಂತಿಮವಾಗಿ ತನ್ನ ತವರು ನೆಲದ ಅಭಿಮಾನಿಗಳ ಎದುರೇ ಡೆಲ್ಲಿ ಕೇವಲ 75 ರನ್‌ಗಳಿಗೆ ಸರ್ವಪತನ ಕಂಡಿತು.

ಗೆಲುವಿಗೆ ಬೇಕಿದ್ದ 75 ರನ್‌ಗಳನ್ನು
ಹಾಲಿ ಚಾಂಪಿಯನ್ ತಂಡ 6.3 ಓವರುಗಳಲ್ಲೇ (1 ವಿಕೆಟ್‌ಗೆ 77) ಗಳಿಸಿತು. ‘ದೆಹಲಿಯ ಹುಡುಗ’ ವಿರಾಟ್ ಕೊಹ್ಲಿ (ಔಟಾಗದೇ 23, 15 ಎಸೆತ) ಮತ್ತು ದೇವದತ್ತ ಪಡಿಕ್ಕಲ್ (ಔಟಾಗದೇ 34, 13 ಎಸೆತ) ಔಪಚಾರಿಕತೆ ಪೂರೈಸಿದರು. ಜೇಕಬ್ ಬೆಥೆಲ್ (20) ಬೌಂಡರಿ ಲೈನ್‌ ಬಳಿ ನಟರಾಜನ್ ಹಿಡಿದ ಅಮೋಘ ಕ್ಯಾಚಿಗೆ ನಿರ್ಗಮಿಸಿದ್ದರು.

ಗೆಲುವಿಗೆ ಬೇಕಿದ್ದ 75 ರನ್‌ಗಳನ್ನು ಹಾಲಿ ಚಾಂಪಿಯನ್ ತಂಡ 6.3 ಓವರುಗಳಲ್ಲೇ (1 ವಿಕೆಟ್‌ಗೆ 77) ಗಳಿಸಿತು. ಇದರೊಂದಿಗೆ ಡೆಲ್ಲಿ ವಿರುದ್ಧ ಆರ್‌ಸಿಬಿ 9 ವಿಕೆಟ್‌ ಅಂತರದಿಂದ ಗೆಲುವು ಸಾಧಿಸಿತು.

Leave a Comment

Your email address will not be published. Required fields are marked *