ಪುತ್ತೂರು: ಗ್ರಾಹಕರ ಸೋಗಿನಲ್ಲಿ ಬಂದು ಆಭರಣ ಕಳವು

ಸಮಗ್ರ ನ್ಯೂಸ್: ಇಬ್ಬರು ಮಹಿಳೆಯರೊಂದಿಗೆ ಬಂದ ಮೂವರ ತಂಡ ಚಿನ್ನಾಭರಣ ಖರೀದಿಸುವ ನೆಪದಲ್ಲಿ ಜ್ಯುವೆಲ್ಲರಿ ಮಳಿಗೆಯೊಂದರಿಂದ ಸುಮಾರು ₹ 3 ಲಕ್ಷ ಮೌಲ್ಯದ ಚಿನ್ನದ ಬಳೆ ಕಳವು ಮಾಡಿದ ಘಟನೆ ಪುತ್ತೂರು ನಗರದಲ್ಲಿ ನಡೆದಿದೆ.

. Ad Widget . Ad Widget . Ad Widget .

‌ನಗರದ ಹೆಗ್ಡೆ ಆರ್ಕೇಡ್‌ನಲ್ಲಿರುವ ‘ಆರ್.ಕೆ.ಜ್ಯುವೆಲ್ಲರ್ಸ್‌’ ಚಿನ್ನಾಭರಣ ಮಳಿಗೆಯಲ್ಲಿ ಕಳವು ನಡೆದಿದೆ. ಘಟನೆಗೆ ಸಂಬಂಧಿಸಿ ಮಳಿಗೆಯ ಮಾಲೀಕ ಕೃಷ್ಣತ್ ನಾಮದೇವ್ ಸುರ್ವೆ ಅವರು ಪುತ್ತೂರು ನಗರ ಠಾಣೆಯ ಪೊಲೀಸರಿಗೆ ದೂರು ನೀಡಿದ್ದಾರೆ.

. Ad Widget . Ad Widget . Ad Widget . Ad Widget . Ad Widget . Ad Widget . . Ad Widget . Ad Widget . Ad Widget . Ad Widget .

ಮಾರ್ಚ್‌ 30ರಂದು ವಿವಿಧ ವಿನ್ಯಾಸದ ಆಭರಣಗಳನ್ನು ತೋರಿಸುವಂತೆ ಮೂವರು ಅಪರಿಚಿತರು ಹೇಳಿದ್ದರು. ಅವರು ತಿಳಿಸಿದಂತೆ ಹಲವು ವಿನ್ಯಾಸದ ಬೇರೆ ಬೇರೆ ಚಿನ್ನದ ಬಳೆಗಳನ್ನು ತೋರಿಸಲಾಗಿತ್ತು. ಗ್ರಾಹಕರ ಸೋಗಿನಲ್ಲಿ ಬಂದಿದ್ದ ಅವರು ಆಭರಣ ಖರೀದಿಸದೆ ತೆರಳಿದ್ದರು. ಆ ಬಳಿಕ ಪರಿಶೀಲಿಸಿದಾಗ ಅಂದಾಜು 23 ಗ್ರಾಂ ತೂಕದ ಚಿನ್ನದ ಬಳೆಯೊಂದು ಕಳವಾಗಿರುವುದು ಗೊತ್ತಾಗಿದೆ ಎಂದು ಕೃಷ್ಣತ್ ನಾಮದೇವ್ ಸುರ್ವೆ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಪುತ್ತೂರು ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Leave a Comment

Your email address will not be published. Required fields are marked *