March 2026

ಹವಾಮಾನ ವರದಿ| ರಾಜ್ಯದ ವಿವಿಧ ಭಾಗಗಳಲ್ಲಿ ಮಳೆ ನಿರೀಕ್ಷೆ

ಸಮಗ್ರ ನ್ಯೂಸ್: ರಾಜ್ಯದ ವಿವಿಧ ಭಾಗಗಳಲ್ಲಿ ಮುಂದಿನ ಮೂರ್ನಾಲ್ಕು ದಿನ ಭಾರಿ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಮಾರ್ಚ್ 16 ರಿಂದ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಮಾ. 21ರಂದು ದಕ್ಷಿಣ ಕನ್ನಡ, ಉಡುಪಿ, ಮೈಸೂರು, ಚಿಕ್ಕಮಗಳೂರು ಮತ್ತು ಬಾಗಲಕೋಟೆ ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆಯಿದೆ. ಕೊಪ್ಪಳ, ವಿಜಯಪುರ ಮತ್ತು ದಾವಣಗೆರೆ ಜಿಲ್ಲೆಗಳಲ್ಲಿ ಮಳೆಯ ಮುನ್ಸೂಚನೆ ಇದ್ದು, ಮುಂದಿನ 2 ದಿನಗಳು ಕೊಡಗು ಮತ್ತು ಹಾಸನ ಜಿಲ್ಲೆಗಳಲ್ಲಿ ಮಳೆಯಾಗಲಿದೆ. […]

ಹವಾಮಾನ ವರದಿ| ರಾಜ್ಯದ ವಿವಿಧ ಭಾಗಗಳಲ್ಲಿ ಮಳೆ ನಿರೀಕ್ಷೆ Read More »

ದ್ವಾದಶ ರಾಶಿಗಳ ವಾರಭವಿಷ್ಯ

ಸಮಗ್ರ ನ್ಯೂಸ್: ಮಾರ್ಚ್ ತಿಂಗಳ ಮೂರನೇ ವಾರ ಪ್ರಾರಂಭವಾಗಿದೆ. ಈ ವಾರ ಯಾವ ರಾಶಿಗಳ ಫಲ ಹೇಗಿರಲಿದೆ ಎಂದು ತಿಳಿದುಕೊಳ್ಳುವ ಕುತೂಹಲ ಪ್ರತಿಯೊಬ್ಬರಿಗೂ ಇರುತ್ತದೆ. ಹಾಗಾದರೆ 12 ರಾಶಿಗಳ ಸುಖ, ದುಃಖ, ಆರೋಗ್ಯ, ಹಣಕಾಸು, ಪ್ರೇಮ, ಕೌಟುಂಬಿಕ, ಸಾಮಾಜಿಕ ಹಾಗೂ ವೃತ್ತಿ ಜೀವನ ಹೇಗಿರಲಿದೆ ಎನ್ನುವ ಸಂಪೂರ್ಣ ವಿವರ ಈ ಲೇಖನದಲ್ಲಿ ತಿಳಿಯೋಣ. ಮೇಷ ರಾಶಿ:ಮೇಷ ರಾಶಿಯವರು ಈ ವಾರ ತಮ್ಮ ಕೆಲಸದಲ್ಲಿ ಬಹಳ ವ್ಯವಸ್ಥಿತವಾಗಿರಬೇಕು ಮತ್ತು ಸವಾಲುಗಳಿಗೆ ಸಿದ್ಧರಾಗಿರಬೇಕು. ವಾರದ ಆರಂಭದಲ್ಲಿ ನೀವು ಹೆಚ್ಚುವರಿ ಕೆಲಸದ

ದ್ವಾದಶ ರಾಶಿಗಳ ವಾರಭವಿಷ್ಯ Read More »

ಅಮೇರಿಕಾದ ದಾಳಿ ನಂತರವೂ ಖರ್ಗ್ ದ್ವೀಪದಲ್ಲಿ ತೈಲ‌ ಕಾರ್ಯಾಚರಣೆ ನಿರಂತರ – ಇರಾನ್

ಸಮಗ್ರ ನ್ಯೂಸ್: ಇರಾನ್‌ನ ಆರ್ಥಿಕ ಜೀವನಾಡಿ ಹಾಗೂ ಕಿರೀಟ ರತ್ನ ಎಂದೇ ಕರೆಯಲಾಗುವ ಖಾರ್ಗ್‌ ದ್ವೀಪದ ಮೇಲೆ ಅಮೆರಿಕ ಬಾಂಬ್ ದಾಳಿ ನಡೆಸಿದ ನಂತರವೂ ತೈಲ “ರಫ್ತು ಮತ್ತು ಆಮದು ಕಾರ್ಯಾಚರಣೆಗಳು ಹಾಗೂ ದ್ವೀಪವನ್ನು ಆಧರಿಸಿದ ಕಂಪನಿಗಳ ಚಟುವಟಿಕೆಗಳು ಎಂದಿನಂತೆ ನಡೆಯುತ್ತಿವೆ” ಎಂದು ಇರಾನ್ ಹೇಳಿದೆ. ಅಮೆರಿಕ ದಾಳಿಯ ನಂತರವೂ ತೈಲ ಕಾರ್ಯಾಚರಣೆ ಎಂದಿನಂತೆ ಮುಂದುವರೆದಿದೆ ಎಂದು ಬುಶೆಹರ್ ಪ್ರಾಂತ್ಯದ ಉಪ ಗವರ್ನರ್ ಎಹ್ಸಾನ್ ಜಹಾನಿಯನ್ ಅವರು ಹೇಳಿರುವುದಾಗಿ ನೂರ್ನ್ಯೂಸ್ ವರದಿ ಮಾಡಿದೆ. ದೈನಂದಿನ ಜೀವನ ಚಟುವಟಿಕೆಗಳು

ಅಮೇರಿಕಾದ ದಾಳಿ ನಂತರವೂ ಖರ್ಗ್ ದ್ವೀಪದಲ್ಲಿ ತೈಲ‌ ಕಾರ್ಯಾಚರಣೆ ನಿರಂತರ – ಇರಾನ್ Read More »

ಬಂಟ್ವಾಳ: ಬೈಕ್ ಗಳ ನಡುವೆ ಡಿಕ್ಕಿ| ಮಗಳ ಬರ್ತ್ ಡೇ‌ ಸಂಭ್ರಮದಲ್ಲಿದ್ದ ಛಾಯಾಗ್ರಾಹಕ‌ ದುರ್ಮರಣ

ಸಮಗ್ರ ನ್ಯೂಸ್: ಪಾಣೆಮಂಗಳೂರು ಎಂಬಲ್ಲಿ ನಡೆದ ಎರಡು ಬೈಕ್‌ಗಳ ನಡುವಿನ ಭೀಕರ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಯುವ ಛಾಯಾಗ್ರಾಹಕ ರಕ್ಷಿತ್ ಶೆಟ್ಟಿ (43) ಇಂದು ಚಿಕಿತ್ಸೆ ಫಲಕಾರಿಯಾಗದೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಶಂಭೂರು ನಿವಾಸಿಯಾದ ರಕ್ಷಿತ್ ಶೆಟ್ಟಿ ಅವರು ದಕ್ಷಿಣ ಕನ್ನಡ ಜಿಲ್ಲಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ ಬಂಟ್ವಾಳ ವಲಯದ ಸಕ್ರಿಯ ಸದಸ್ಯರಾಗಿದ್ದರು. ಅತ್ಯುತ್ತಮ ವಿಡಿಯೋಗ್ರಾಫರ್ ಆಗಿ ಗುರುತಿಸಿಕೊಂಡಿದ್ದರು.ರಕ್ಷಿತ್ ಅವರ ಮುದ್ದಿನ ಮಗಳ 10ನೇ ವರ್ಷದ ಹುಟ್ಟುಹಬ್ಬ ನಾಳೆ (ಮಾರ್ಚ್ 15) ಇತ್ತು. ಮನೆಯಲ್ಲಿ ಮಗಳ ಬರ್ತ್‌ಡೇ

ಬಂಟ್ವಾಳ: ಬೈಕ್ ಗಳ ನಡುವೆ ಡಿಕ್ಕಿ| ಮಗಳ ಬರ್ತ್ ಡೇ‌ ಸಂಭ್ರಮದಲ್ಲಿದ್ದ ಛಾಯಾಗ್ರಾಹಕ‌ ದುರ್ಮರಣ Read More »

ಕುಮಾರ ಪರ್ವತ ಚಾರಣಕ್ಕೆ ಹೊಸ ನಿಯಮ ಜಾರಿ| ಸಚಿವ ಈಶ್ವರ ಖಂಡ್ರೆ ಹೇಳಿಕೆ

ಸಮಗ್ರ ನ್ಯೂಸ್: ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯದಿಂದ ಕುಮಾರ ಪರ್ವತ ಚಾರಣಕ್ಕೆ ಹೋಗುವವರು ಕಡ್ಡಾಯವಾಗಿ ಆನ್‌ಲೈನ್‌ ಮೂಲಕ ಟಿಕೆಟ್ ಪಡೆದುಕೊಳ್ಳಬೇಕು. ಚಾರಣಿಗರ ಅನುಕೂಲಕ್ಕಾಗಿ ಚಾರಣ ಆರಂಭಿಕ ಸಮಯವನ್ನು ಬೆಳಗ್ಗೆ 5.30ರಿಂದಲೇ ಪ್ರಾರಂಭಿಸಲಾಗುವುದು ಎಂದು ಅರಣ್ಯ, ಸಚಿವ ಈಶ್ವರ ಖಂಡ್ರೆ ತಿಳಿಸಿದರು. ಪ್ರಶ್ನೋತ್ತರ ಕಲಾಪದಲ್ಲಿ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಅವರ ಪ್ರಶ್ನೆಗೆ ಸಚಿವರು ಉತ್ತರಿಸಿದರು. ಚಾರಣದಾರರ ಸುರಕ್ಷತೆ ದೃಷ್ಟಿಯಿಂದ ಮತ್ತು ವನ್ಯಜೀವಿಧಾಮದೊಳಗೆ ಮೂಲ ಸೌಲಭ್ಯ ಇಲ್ಲದ ಕಾರಣ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ ನಿರ್ದೇಶನದಂತೆ ವನ್ಯಜೀವಿಧಾಮದೊಳಗೆ

ಕುಮಾರ ಪರ್ವತ ಚಾರಣಕ್ಕೆ ಹೊಸ ನಿಯಮ ಜಾರಿ| ಸಚಿವ ಈಶ್ವರ ಖಂಡ್ರೆ ಹೇಳಿಕೆ Read More »

ಅಡುಗೆ ಅನಿಲ ಬಗ್ಗೆ ಗಾಬರಿ ಬೇಡ – ಡಿಸಿ ದರ್ಶನ್ ಎಚ್.ವಿ

ಸಮಗ್ರ ನ್ಯೂಸ್: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗೃಹ ಬಳಕೆಯ ಅಡುಗೆ ಅನಿಲ (LPG) ಪೂರೈಕೆಯಲ್ಲಿ ಯಾವುದೇ ವ್ಯತ್ಯಯ ಉಂಟಾಗಿಲ್ಲ ಮತ್ತು ಮುಂದೆಯೂ ಆಗುವುದಿಲ್ಲ ಎಂದು ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ಸ್ಪಷ್ಟಪಡಿಸಿದ್ದಾರೆ. ಪ್ರಸ್ತುತ ಜಾರಿಯಲ್ಲಿರುವ 25 ದಿನಕ್ಕೊಂದು ಸಿಲಿಂಡರ್ ಪೂರೈಕೆಯ ನಿಯಮದಂತೆಯೇ ವಿತರಣೆ ನಡೆಯುತ್ತಿದೆ. ಹೀಗಾಗಿ ಸಾರ್ವಜನಿಕರು ಆತಂಕಕ್ಕೆ ಒಳಗಾಗಿ ಏಕಕಾಲಕ್ಕೆ ಎರಡೆರಡು ಸಿಲಿಂಡರ್ ಬುಕ್ ಮಾಡುವ ಅಗತ್ಯವಿಲ್ಲ, ಅದಕ್ಕೆ ನಿಯಮಾವಳಿಗಳಲ್ಲಿ ಅವಕಾಶವೂ ಇಲ್ಲ ಎಂದು ಅವರು ತಿಳಿಸಿದ್ದಾರೆ. ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಸಾರ್ವಜನಿಕರ ಗೊಂದಲಗಳಿಗೆ ಅವರು

ಅಡುಗೆ ಅನಿಲ ಬಗ್ಗೆ ಗಾಬರಿ ಬೇಡ – ಡಿಸಿ ದರ್ಶನ್ ಎಚ್.ವಿ Read More »

ಗುಂಡ್ಯ: ಬಸ್ – ಕಾರು ನಡುವೆ ಭೀಕರ ಅಪಘಾತ; ಮೂವರು ದುರ್ಮರಣ

ಸಮಗ್ರ ನ್ಯೂಸ್: ಕೆಎಸ್ಸಾರ್ಟಿಸಿ ರಾಜಹಂಸ ಬಸ್ ಮತ್ತು ಸ್ವಿಫ್ಟ್ ಡಿಸೈರ್ ಕಾರು ಮಧ್ಯೆ ಅಪಘಾತ ಸಂಭವಿಸಿದ ಪರಿಣಾಮ ಕಾರಿನಲ್ಲಿದ್ದ ಮೂವರು ಸ್ಥಳದಲ್ಲೇ ಮೃತಪಟ್ಟ ದಾರುಣ ಘಟನೆ ಶುಕ್ರವಾರ ಅಪರಾಹ್ನ ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಗುಂಡ್ಯ ಸಮೀಪ ನಡೆದಿದೆ. ಬೆಂಗಳೂರು ಕಡೆಗೆ ತೆರಳುತ್ತಿದ್ದ ಕಾರು ಮತ್ತು ವಿರುದ್ಧ ದಿಕ್ಕಿನಿಂದ ಸಾಗುತ್ತಿದ್ದ ಬಸ್ ನಡುವೆ ಗುಂಡ್ಯ ಗಡಿ ದೇವಸ್ಥಾನದ ಸಮೀಪ ಅಪಘಾತ ಸಂಭವಿಸಿದ್ದು, ಕಾರಿನಲ್ಲಿದ್ದ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸಕಲೇಶಪುರದಿಂದ ಕೊಕ್ಕಡ ಕಡೆಗೆ ಬರುತ್ತಿದ್ದ ಶಿಶಿಲ ಗ್ರಾಮದ

ಗುಂಡ್ಯ: ಬಸ್ – ಕಾರು ನಡುವೆ ಭೀಕರ ಅಪಘಾತ; ಮೂವರು ದುರ್ಮರಣ Read More »

ಗ್ಯಾಸ್ ಬುಕ್ಕಿಂಗ್ ಅವಧಿ ಮತ್ತೆ 45 ದಿನಕ್ಕೆ ವಿಸ್ತರಿಸಿದ ಕೇಂದ್ರ

ಸಮಗ್ರ ನ್ಯೂಸ್: ಇರಾನ್ ಬಿಕ್ಕಟ್ಟು ಮತ್ತು ದೇಶಾದ್ಯಂತ ಎಲ್‌ಪಿಜಿ ಸಿಲಿಂಡರ್‌ಗಳ ಕೊರತೆಯಿಂದಾಗಿ, ಹೆಚ್ಚುತ್ತಿರುವ ಬೇಡಿಕೆಯಿಂದಾಗಿ ಬುಕಿಂಗ್ ಅವಧಿಯನ್ನು ಮತ್ತೆ ವಿಸ್ತರಿಸಲಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಎಲ್‌ಪಿಜಿ ಸಿಲಿಂಡರ್‌ಗಳ ಬುಕಿಂಗ್ ಅವಧಿಯನ್ನು ಈಗ 45 ದಿನಗಳಿಗೆ ವಿಸ್ತರಿಸಲಾಗಿದೆ. ಈ ಹಿಂದೆ, ಈ ಪ್ರದೇಶಗಳಲ್ಲಿ ಸಿಲಿಂಡರ್‌ಗಳು 25 ದಿನಗಳ ಒಳಗೆ ಲಭ್ಯವಿದ್ದವು. ಆದಾಗ್ಯೂ, ನಗರ ಪ್ರದೇಶಗಳಲ್ಲಿ ಸಿಲಿಂಡರ್ ಬುಕಿಂಗ್ ಕುರಿತು ಯಾವುದೇ ಹೊಸ ಆದೇಶಗಳನ್ನು ನೀಡಲಾಗಿಲ್ಲ. ಗ್ರಾಮೀಣ ಪ್ರದೇಶಗಳಲ್ಲಿ ಈಗ 45 ದಿನಗಳಲ್ಲಿ ಗ್ಯಾಸ್ ಬುಕಿಂಗ್ ಮಾಡಬಹುದಾದರೂ, ನಗರ ಪ್ರದೇಶಗಳಲ್ಲಿ 25

ಗ್ಯಾಸ್ ಬುಕ್ಕಿಂಗ್ ಅವಧಿ ಮತ್ತೆ 45 ದಿನಕ್ಕೆ ವಿಸ್ತರಿಸಿದ ಕೇಂದ್ರ Read More »

ಭಾರತಕ್ಕೆ ರಾಜತಾಂತ್ರಿಕ ಗೆಲುವು| ಹಾರ್ಮೋಜ್ ಮೂಲಕ ತೆರಳಲು ಭಾರತೀಯ ಹಡಗುಗಳಿಗೆ ಇರಾನ್ ಅನುಮತಿ

ಸಮಗ್ರ ನ್ಯೂಸ್: ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆಯ ನಡುವೆಯೇ ಭಾರತಕ್ಕೆ ದೊಡ್ಡ ರಾಜತಾಂತ್ರಿಕ ಜಯ ಸಿಕ್ಕಿದೆ. ವಿದೇಶಾಂಗ ಸಚಿವ ಎಸ್. ಜೈಶಂಕರ್ ಮತ್ತು ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಘ್ಚಿ ನಡುವಿನ ಮಾತುಕತೆಯ ನಂತರ, ಆಯಕಟ್ಟಿನ ಹಾರ್ಮುಜ್ ಜಲಸಂಧಿಯ ಮೂಲಕ ಭಾರತೀಯ ತೈಲ ಹಡಗುಗಳು ಸಾಗಲು ಇರಾನ್ ಅನುಮತಿ ನೀಡಿದೆ ಎಂದು ಮೂಲಗಳು ತಿಳಿಸಿವೆ. ಪಶ್ಚಿಮ ಏಷ್ಯಾದಲ್ಲಿ ಸಂಘರ್ಷ ತೀವ್ರಗೊಂಡಿರುವ ಹಿನ್ನೆಲೆಯಲ್ಲಿ ಭಾರತದ ಕಚ್ಚಾ ತೈಲ ಮತ್ತು ಎಲ್‌ಪಿಜಿ ಪೂರೈಕೆಯಲ್ಲಿ ವ್ಯತ್ಯಯವಾಗದಂತೆ ನೋಡಿಕೊಳ್ಳುವುದು ಈ ಮಾತುಕತೆಯ ಮುಖ್ಯ ಉದ್ದೇಶವಾಗಿತ್ತು.

ಭಾರತಕ್ಕೆ ರಾಜತಾಂತ್ರಿಕ ಗೆಲುವು| ಹಾರ್ಮೋಜ್ ಮೂಲಕ ತೆರಳಲು ಭಾರತೀಯ ಹಡಗುಗಳಿಗೆ ಇರಾನ್ ಅನುಮತಿ Read More »

ರಾಜ್ಯದಾದ್ಯಂತ ಬಿಸಿಲ‌ಝಳ ಹೆಚ್ಚಳ| ಮಾ.15ರಿಂದ ಮಳೆ ನಿರೀಕ್ಷೆ

ಸಮಗ್ರ ನ್ಯೂಸ್: ಬೆಂಗಳೂರು ಸೇರಿದಂತೆ ಕರ್ನಾಟಕದಾದ್ಯಂತ ಬಿಸಿಲು ಹೆಚ್ಚಾಗುತ್ತಿದೆ. ಮುಂದಿನ ವಾರದಿಂದ ರಾಜ್ಯದಲ್ಲಿ ಬಿಸಿಲಿನ ಪ್ರಮಾಣ ಇನ್ನಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ. ಆದರೆ, ಮಾರ್ಚ್ 15ರಿಂದ ಕರ್ನಾಟಕದಲ್ಲಿ ಮಳೆ ಆಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆಯು ಮುನ್ಸೂಚನೆ ನೀಡಿದೆ. ಬಂಗಾಳಕೊಲ್ಲಿಯ ನೈಋತ್ಯ ಮತ್ತು ಶ್ರೀಲಂಕಾದ ಉತ್ತರ ಭಾಗದಲ್ಲಿ ಸರಾಸರಿ ಸಮುದ್ರ ಮಟ್ಟದಿಂದ 1.5 ಮತ್ತು 3.1 ಕಿ.ಮೀ. ಎತ್ತರದಲ್ಲಿ ಮೇಲ್ಮಟ್ಟದ ವಾಯು ಚಂಡಮಾರುತದ ಪರಿಚಲನೆ ಮುಂದುವರಿದಿದೆ. ದಕ್ಷಿಣ ಜಾರ್ಖಂಡ್ ಮತ್ತು ಛತ್ತೀಸ್‌ಗಢದ ಪಕ್ಕದಲ್ಲಿರುವ ಉತ್ತರ ಭಾಗದಿಂದ ಕರ್ನಾಟಕದ

ರಾಜ್ಯದಾದ್ಯಂತ ಬಿಸಿಲ‌ಝಳ ಹೆಚ್ಚಳ| ಮಾ.15ರಿಂದ ಮಳೆ ನಿರೀಕ್ಷೆ Read More »