ಪುತ್ತೂರು: ಅಶೋಕ ಜನಮನ ಕಾರ್ಯಕ್ರಮದಲ್ಲಿ ಜನ ಅಸ್ವಸ್ಥಗೊಂಡ ಪ್ರಕರಣ| ಜನತೆಯ ಕ್ಷಮೆ ಕೋರಿದ ಶಾಸಕ ಅಶೋಕ್ ರೈ

ಸಮಗ್ರ ನ್ಯೂಸ್: ಸೋಮವಾರ ಪುತ್ತೂರಿನ ಕೊಂಬೆಟ್ಟು ಕಾಲೇಜು ಬಳಿಯ ಮೈದಾನದಲ್ಲಿ ನಡೆದ ಅಶೋಕ ಜನಮನ ದೀಪಾವಳಿ ವಸ್ತ್ರ ವಿತರಣಾ ಕಾರ್ಯಕ್ರಮದಲ್ಲಿ ಜನಸ್ತೋಮದ ನಡುವೆ ಸಿಲುಕಿ‌ ಕೆಲವರು ಅಸ್ವಸ್ಥಗೊಂಡ ಘಟನೆಗೆ ಸಂಬಂಧಿಸಿ ಶಾಸಕ ಅಶೋಕ್ ರೈ ಕ್ಷಮೆ ಕೋರಿದ್ದಾರೆ.

Ad Widget . Ad Widget . Ad Widget . Ad Widget . Ad Widget . Ad Widget .

‘ನಿರೀಕ್ಷಿಸಿದಕ್ಕಿಂತ ಹೆಚ್ಚು ಜನರು ಕಾರ್ಯಕ್ರಮಕ್ಕೆ ಬಂದಿದ್ದರು.‌ ಮಧ್ಯಾಹ್ನ ಮಳೆಯೂ ಬಂತು. ಹೀಗಾಗಿ ಜನಸ್ತೋಮದಲ್ಲಿ ಸಿಲುಕಿ ಕೆಲವು ಮಂದಿ ಅಸ್ವಸ್ಥರಾದರು. ಕೂಡಲೇ ಅವರಿಗೆ ಚಿಕಿತ್ಸೆ ಕೊಡಿಸಲಾಗಿದೆ’ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget .

‘ಎಲ್ಲ ಬಗೆಯ ವ್ಯವಸ್ಥೆ ಮಾಡಿದ್ದರೂ ಜನಸಂದಣಿಯಿಂದಾಗಿ ವ್ಯತ್ಯಯ ಆಯಿತು. ಈ ವೇಳೆ ಕೆಲವರ ಮನಸ್ಸಿಗೆ ನೋವಾಗಿದೆ. ಇದು ಕೂಡ ನನಗೆ ಬೇಸರ ತಂದಿದೆ. ರಾತ್ರಿ 9.30ರವರೆಗೂ ಉಡುಗೊರೆ ವಿತರಣೆ ನಡೆದಿದೆ’ ಎಂದು ಅವರು ತಿಳಿಸಿದ್ದಾರೆ.

Leave a Comment

Your email address will not be published. Required fields are marked *