September 2025

ಚಾಲಕನ ನಿಯಂತ್ರಣ ತಪ್ಪಿ ಟ್ರಾನ್ಸ್ ಫರ್ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಕಾರು 

ಸಮಗ್ರ ನ್ಯೂಸ್: ಚಿಕ್ಕಮಗಳೂರು ಜಿಲ್ಲೆಯ ಕೊಟ್ಟಿಗೆಹಾರ ದ ಮೂಡಿಗೆರೆ ತಾಲೂಕಿನ ಬಣಕಲ್ ಸಮೀಪದ ವೆಟರ್ನರಿ ಆಸ್ಪತ್ರೆ ಬಳಿ ಚಾಲಕನ ನಿಯಂತ್ರಣ ತಪ್ಪಿದ ಕಾರು ನೇರವಾಗಿ ಟ್ರಾನ್ಸ್ ಫರ್ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಭೀಕರ ಅಪಘಾತ ಸೆ.5 ರಂದು ನಡೆದಿದೆ.  ಕಾರಿನಲ್ಲಿದ್ದ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದೆ.ಅಪಘಾತದ ತೀವ್ರತೆಯಿಂದಾಗಿ ಎರಡು ವಿದ್ಯುತ್ ಕಂಬಗಳು ಮುರಿದಿದೆ. ಕಂಬಗಳು ಸಂಪೂರ್ಣವಾಗಿ ಬಿದ್ದುಹೋಗಿದ್ದರೆ ಭಾರೀ ಅನಾಹುತ ಸಂಭವಿಸುವ ಸಾಧ್ಯತೆ ಇತ್ತು ಆದರೆ ಕೂದಲೆಳೆ ಅಂತರದಲ್ಲಿ ಭಾರೀ ಅನಾಹುತ […]

ಚಾಲಕನ ನಿಯಂತ್ರಣ ತಪ್ಪಿ ಟ್ರಾನ್ಸ್ ಫರ್ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಕಾರು  Read More »

ಉಪ್ಪಿನಂಗಡಿ: ಗಬ್ಬದ ದನವನ್ನು ಕದ್ದು ಮಾಲೀಕನ ಜಮೀನಿನಲ್ಲಿ ಮಾಂಸ ಮಾಡಿದ ಕಟುಕರು

ಸಮಗ್ರ ನ್ಯೂಸ್: ದನದ ಕೊಟ್ಟಿಗೆಯಿಂದ ಗಬ್ಬದ ದನವನ್ನು ಕದ್ದು , ಬಳಿಕ ಕಟುಕರು ದನದ ಮಾಲೀಕನ ಜಮೀನಿನಲ್ಲಿಯೇ ಹತ್ಯೆ ಮಾಡಿ ಅದನ್ನು ಮಾಂಸ ಮಾಡಿ ಸಾಗಿಸಿದ ಘಟನೆ ಉಪ್ಪಿನಂಗಡಿ ಪೊಲೀಸ್‌ ಠಾಣೆ ವ್ಯಾಪ್ತಿಯ ಪೆರ್ನೆ ಗ್ರಾಮದ ಕಡಂಬು ಎಂಬಲ್ಲಿ ನಡೆದಿದೆ. ದೇಜಪ್ಪ ಮೂಲ್ಯ ಅವರ ಹಟ್ಟಿಯಿಂದ ಗಬ್ಬದ ದನವನ್ನು ಕದ್ದೊಯ್ದ ಕಟುಕರು ಅವರ ಜಮೀನಿನಲ್ಲಿಯೇ ಹತ್ಯೆ ಮಾಡಿ ಮಾಂಸವನ್ನು ಸಾಗಿಸಿದ್ದಾರೆ. ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾರೆ. ಗುರುವಾರ ನಸುಕಿನ 2.30ರ ವೇಳೆಗೆ ಹಸು ಹಟ್ಟಿಯಲ್ಲಿಯೇ ಇರುವುದನ್ನು

ಉಪ್ಪಿನಂಗಡಿ: ಗಬ್ಬದ ದನವನ್ನು ಕದ್ದು ಮಾಲೀಕನ ಜಮೀನಿನಲ್ಲಿ ಮಾಂಸ ಮಾಡಿದ ಕಟುಕರು Read More »

ಶಿಕ್ಷಣ ಸೊರಗದಿರಲಿ, ಶಿಕ್ಷಕ ಬಲಿಷ್ಠನಾಗಲಿ| ಶಿಕ್ಷಕರ ದಿನಾಚರಣೆಯ ಶುಭಾಶಯಗಳು – ಡಾ| ಮುರಲೀ ಮೋಹನ್ ಚುಂತಾರು

ಕಲ್ಲು ಕಲ್ಲೆಂದರೆ ಕಲ್ಲಲ್ಲಿಹುದೇ ದೈವ| ಕಲ್ಲಲ್ಲಿ ಕಲೆಯ ನಿಲ್ಲಿಸಿದ ಗುರುವಿನ ಸೊಲ್ಲಲ್ಲೇ ದೈವ ಸರ್ವಜ್ಞ || ಮಗದೊಮ್ಮೆ ಶಿಕ್ಷಕರ ದಿನಾಚರಣೆ ಬಂದಿದೆ. ಮತ್ತದೇ ಹಾರ, ತುರಾಯಿ, ಬಿರುದು ಬಾವಲಿಗಳು ಒಂದಷ್ಟು ಶಿಕ್ಷಕರನ್ನು ವೇದಿಕೆಗೆ ಕರೆತಂದು ಹೊಗಳಿ ಹೊನ್ನಶೂಲಕ್ಕೆ ಏರಿಸಿ ಸನ್ಮಾನ ಮಾಡುವುದು ಸಂಪ್ರದಾಯವಾಗಿ ಬಿಟ್ಟಿದೆ. ಮರುದಿನದಿಂದ ಮತ್ತದೇ ರಾಗ, ಮತ್ತದೇ ಹಾಡು. ಶಿಕ್ಷಕರನ್ನು ಕೈ ಕಾಲು ಬಾಯಿ ಕಟ್ಟಿ ಹಾಕಿ ಪಾಠ ಮಾಡುವಂತೆ ಮಾಡುವುದು. ಶಿಕ್ಷಕರಿಗೆ ಶಾಲೆಯಲ್ಲಿ ಪಾಠಮಾಡುವುದೊಂದು ಬಿಟ್ಟು ಉಳಿದೆಲ್ಲಾ ಜವಾಬ್ದಾರಿ ಹಂಚಿ ಕೈ ತೊಳೆದುಕೊಳ್ಳುವುದು.

ಶಿಕ್ಷಣ ಸೊರಗದಿರಲಿ, ಶಿಕ್ಷಕ ಬಲಿಷ್ಠನಾಗಲಿ| ಶಿಕ್ಷಕರ ದಿನಾಚರಣೆಯ ಶುಭಾಶಯಗಳು – ಡಾ| ಮುರಲೀ ಮೋಹನ್ ಚುಂತಾರು Read More »

ಪುತ್ತೂರು: ಸಹಪಾಠಿಗೆ ಗರ್ಭದಾನ ಮಾಡಿದ ಕೃಷ್ಣ ಜೆ ರಾವ್ ಗೆ ಜಾಮೀನು ಮಂಜೂರು

ಸಮಗ್ರ ನ್ಯೂಸ್: ಯುವತಿಯನ್ನು ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ಬೆಳೆಸಿ ಬಳಿಕ ನಿರಾಕರಿಸಿದ ಪ್ರಕರಣದಲ್ಲಿ ಅರೆಸ್ಟ್ ಆಗಿದ್ದ ಬಿಜೆಪಿ ಮುಖಂಡನ ಪುತ್ರ ಶ್ರೀಕೃಷ್ಣ ಜೆ. ರಾವ್ ಗೆ ಇದೀಗ ಹೈಕೋರ್ಟ್ ಷರತ್ತುಬದ್ದ ಜಾಮೀನು ಮಂಜೂರು ಮಾಡಿದೆ. ತನ್ನ ಸಹಪಾಠಿ ಯುವತಿಯನ್ನು ಮದುವೆಯಾಗುವುದಾಗಿ ನಂಬಿಸಿ ಆಕೆಯ ಲೈಂಗಿಕವಾಗಿ ಬಳಸಿಕೊಂಡು , ಆಕೆ ಗರ್ಭವತಿಯಾದ ಬಳಿಕ ಮದುವೆಯಾಗಲು ನಿರಾಕರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೃಷ್ಣ ಜೆ ರಾವ್ ವಿರುದ್ದ ದ.ಕ. ಮಹಿಳಾ ಠಾಣೆಯಲ್ಲಿ ಅತ್ಯಾಚಾರ ಮತ್ತು ನಂಬಿಕೆ ದ್ರೋಹದ ಪ್ರಕರಣ ದಾಖಲಾಗಿತ್ತು.

ಪುತ್ತೂರು: ಸಹಪಾಠಿಗೆ ಗರ್ಭದಾನ ಮಾಡಿದ ಕೃಷ್ಣ ಜೆ ರಾವ್ ಗೆ ಜಾಮೀನು ಮಂಜೂರು Read More »

ಮಂಗಳೂರು: ಅತ್ಯಾಚಾರ ಸಂತ್ರಸ್ತೆಯ ಮಗು ಮಾರಾಟ| ಮೂವರು ಆರೋಪಗಳ ಬಂಧನ

ಸಮಗ್ರ ನ್ಯೂಸ್: ಅತ್ಯಾಚಾರ ಸಂತ್ರಸ್ಥೆಯ ಮಗು ಮಾರಾಟ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಡಾಕ್ಟರ್ ಸೇರಿದಂತೆ ಮೂವರನ್ನು ಬಂಧಿಸಲಾಗಿದೆ. ಬಿಸಿ ರೋಡ್‌ನ‌ ವೈದ್ಯ ಡಾ| ಸೋಮೇಶ್‌ ಸೊಲೊಮನ್‌, ಮಂಗಳೂರಿನ ಪಿಜಿ ಮಾಲಕಿ ವಿಜಯಲಕ್ಷ್ಮಿ ಆಲಿಯಾಸ್‌ ವಿಜಯ ಮತ್ತು ಅತ್ಯಾಚಾರ ಆರೋಪಿ ನವನೀತ್‌ ನಾರಾಯಣ ಬಂಧಿತರು. ಕಾಪು ತಾಲ್ಲೂಕು ಕಲ್ಲುಗುಡ್ಡೆಯ ನಿವಾಸಿ ಪ್ರಭಾವತಿ- ರಮೇಶ್ ಮೂಲ್ಯ ದಂಪತಿ ಅಂಗನವಾಡಿಗೆ ಶಿಶುವನ್ನು ಕರೆದುಕೊಂಡು ಬಂದಿದ್ದರು. ಈ ವೇಳೆ ಅಂಗನವಾಡಿ ಕಾರ್ಯಕರ್ತೆಗೆ ಇದು ಇವರ ಮಗುವಲ್ಲ ಎಂದು ತಿಳಿದು ಬಂದಿದೆ. ಅವರದಲ್ಲದ ಮಗುವಿನ

ಮಂಗಳೂರು: ಅತ್ಯಾಚಾರ ಸಂತ್ರಸ್ತೆಯ ಮಗು ಮಾರಾಟ| ಮೂವರು ಆರೋಪಗಳ ಬಂಧನ Read More »

GST ಕಡಿತದ ಬೆನ್ನಲ್ಲೇ ಷೇರುಪೇಟೆ ಚುರುಕು| ಸೆನ್ಸೆಕ್ಸ್ 900 ಅಂಕಗಳ ಏರಿಕೆ

ಸಮಗ್ರ ನ್ಯೂಸ್: ಜಿಎಸ್ಟಿ ರಿಲೀಫ್ ಬೆನ್ನಲ್ಲೇ ಷೇರುಪೇಟೆ ಪುಟಿದೆದ್ದಿದ್ದು. ದಿನದ ಆರಂಭದಲ್ಲೇ ಸೆನ್ಸೆಕ್ಸ್ 900 ಅಂಕ ಏರಿಕೆಯಾಗಿದೆ. ಆರಂಭಿಕ ವಹಿವಾಟಿನಲ್ಲಿ 30 ಷೇರುಗಳ ಬಿಎಸ್‌ಇ ಸೆನ್ಸೆಕ್ಸ್ 888.96 ಪಾಯಿಂಟ್ಗಳ ಏರಿಕೆಯಾಗಿ 81,456.67 ಕ್ಕೆ ತಲುಪಿದೆ. 50 ಷೇರುಗಳ ಎನ್‌ಎಸ್‌ಇ ನಿಫ್ಟಿ 265.7 ಪಾಯಿಂಟ್ಗಳ ಏರಿಕೆಯಾಗಿ 24,980.75 ಕ್ಕೆ ತಲುಪಿದೆ. ಬುಧವಾರ ಸಂಜೆ, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 2017 ರಲ್ಲಿ ಪ್ರಾರಂಭಿಸಲಾದ ಜಿಎಸ್ಟಿ ವ್ಯವಸ್ಥೆಯ ಸಂಪೂರ್ಣ ಪರಿಷ್ಕರಣೆಯನ್ನು ಘೋಷಿಸಿದರು, ಇದು ಗೃಹೋಪಯೋಗಿ ವಸ್ತುಗಳು, ಔಷಧಿಗಳು,

GST ಕಡಿತದ ಬೆನ್ನಲ್ಲೇ ಷೇರುಪೇಟೆ ಚುರುಕು| ಸೆನ್ಸೆಕ್ಸ್ 900 ಅಂಕಗಳ ಏರಿಕೆ Read More »

ಧರ್ಮಕ್ಷೇತ್ರಗಳ ವಿರುದ್ಧ ಅಫ್ರಚಾರ ತಡೆಗೆ ಹೊಸ ಕಾನೂನು| ಸ್ವಾಮೀಜಿಗಳ ನಿಯೋಗಕ್ಕೆ ಅಮಿತ್ ಷಾ ಭರವಸೆ

ಸಮಗ್ರ ನ್ಯೂಸ್: ದೇಶದಾದ್ಯಂತ ಭಾರೀ ಸದ್ದು ಮಾಡಿರುವ ಧರ್ಮಸ್ಥಳ ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ ಐಎ) ಗೆ ವಹಿಸಬೇಕೆಂದು ಒತ್ತಾಯಿಸಿ, ಕರ್ನಾಟಕದ ಸನಾತನ ಸಂತರ ನಿಯೋಗವು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರನ್ನು ದೆಹಲಿಯಲ್ಲಿ ಭೇಟಿಯಾಗಿ ಮನವಿ ಸಲ್ಲಿಸಿದೆ. ಪಂಚಮಸಾಲಿ ಲಿಂಗಾಯತ ಮಠದ ವಚನಾನಂದ ಸ್ವಾಮೀಜಿ ನೇತೃತ್ವದ ಈ ನಿಯೋಗದಲ್ಲಿ, ಮಂಗಳೂರಿನ ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಸೇರಿದಂತೆ ವಿವಿಧ ಪೀಠಗಳ ಒಟ್ಟು ಎಂಟು ಸ್ವಾಮೀಜಿಗಳು ಭಾಗವಹಿಸಿದ್ದರು. ಈ ಭೇಟಿಯ

ಧರ್ಮಕ್ಷೇತ್ರಗಳ ವಿರುದ್ಧ ಅಫ್ರಚಾರ ತಡೆಗೆ ಹೊಸ ಕಾನೂನು| ಸ್ವಾಮೀಜಿಗಳ ನಿಯೋಗಕ್ಕೆ ಅಮಿತ್ ಷಾ ಭರವಸೆ Read More »

ಬಿಸ್ಲೆ ಘಾಟ್ ರಸ್ತೆ‌ ಸಂಚಾರಕ್ಕೆ ಮುಕ್ತ

ಸಮಗ್ರ ನ್ಯೂಸ್: ಭಾರೀ ಮಳೆಯಿಂದ ಕುಕ್ಕೆ ಸುಬ್ರಹ್ಮಣ್ಯ- ಬಿಸಿಲೆ ಘಾಟಿ ರಸ್ತೆಯ ಒಂದು ಬದಿಯ ಮಣ್ಣು ಕುಸಿದು ಕೆಲಕಾಲ ವಾಹನ ಸಂಚಾರಕ್ಕೆ ಅಡಚಣೆಯಾದ ಘಟನೆ ಬುಧವಾರ ಸಂಭವಿಸಿದೆ. ಬಿಸಿಲೆ ಘಾಟಿ ರಸ್ತೆಯ ಗಡಿ ದೇವಸ್ಥಾನದಿಂದ 1 ಕಿ.ಮೀ. ದೂರದಲ್ಲಿ ರಸ್ತೆಗೆ ಮಣ್ಣು ಕುಸಿತಗೊಂಡಿದ್ದು, ಘಟನೆಯ ಕುರಿತು ಮಾಹಿತಿ ತಿಳಿಯುತ್ತಲೇ ಸಂಬಂಧಪಟ್ಟವರು ಭೇಟಿ ಇತ್ತು ರಸ್ತೆಗೆ ಕುಸಿದು ಬಿದ್ದ ಮಣ್ಣಿನ ತೆರವು ಮಾಡುವ ಕಾರ್ಯಾಚರಣೆ ನಡೆಸಿದರು. ಬಳಿಕ ವಾಹನಗಳ ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡಲಾಯಿತು.

ಬಿಸ್ಲೆ ಘಾಟ್ ರಸ್ತೆ‌ ಸಂಚಾರಕ್ಕೆ ಮುಕ್ತ Read More »

ಶೇ.5 ಮತ್ತು ಶೇ.15ರ ತೆರಿಗೆ ಸ್ಲ್ಯಾಬ್ ಗೆ ಜಿಎಸ್ಟಿ ಮಂಡಳಿ ಅನುಮೋದನೆ| ಸೆ.22ರಿಂದ ನೂತನ ತೆರಿಗೆ ಜಾರಿಗೆ

ಸಮಗ್ರ ನ್ಯೂಸ್: ಸೆಪ್ಟೆಂಬರ್ 22 ರಿಂದ ಜಾರಿಗೆ ಬರಲಿರುವ 5% ಮತ್ತು 18% ರ ಎರಡು ತೆರಿಗೆ ಸ್ಲ್ಯಾಬ್ ದರಗಳಿಗೆ GST ಮಂಡಳಿ ಅನುಮೋದನೆ ನೀಡಿದೆ. GST ದರಗಳ ತರ್ಕಬದ್ಧಗೊಳಿಸುವಿಕೆಯನ್ನು GST ಮಂಡಳಿ ಅನುಮೋದಿಸಿದೆ. ಶೇಕಡ 12 ಮತ್ತು ಶೇಕಡಾ 28 ದರಗಳನ್ನು ರದ್ದುಗೊಳಿಸಲು ಮಂಡಳಿ ಅನುಮೋದನೆ ನೀಡಿದೆ. ಷಾರಾಮಿ ಸರಕುಗಳಿಗೆ ಶೇಕಡಾ 40 ರ ಹೊಸ ಸ್ಲ್ಯಾಬ್ ಅನ್ನು ಕೌನ್ಸಿಲ್ ಅನುಮೋದಿಸಿದೆ. GST ಮಂಡಳಿಯ ನಿರ್ಧಾರವು ಸೆಪ್ಟೆಂಬರ್ 22 ರಿಂದ ಜಾರಿಗೆ ಬರಲಿದೆ: ದೆಹಲಿಯಲ್ಲಿ 56

ಶೇ.5 ಮತ್ತು ಶೇ.15ರ ತೆರಿಗೆ ಸ್ಲ್ಯಾಬ್ ಗೆ ಜಿಎಸ್ಟಿ ಮಂಡಳಿ ಅನುಮೋದನೆ| ಸೆ.22ರಿಂದ ನೂತನ ತೆರಿಗೆ ಜಾರಿಗೆ Read More »

ಧರ್ಮಸ್ಥಳ ಬುರುಡೆ ಪ್ರಕರಣ| ಚಿನ್ನಯ್ಯನನ್ನು ಮತ್ತೆ ಎಸ್ಐಟಿ ಕಸ್ಟಡಿಗೆ ಒಪ್ಪಿಸಿದ ಬೆಳ್ತಂಗಡಿ ಕೋರ್ಟ್

ಸಮಗ್ರ ನ್ಯೂಸ್: ಧರ್ಮಸ್ಥಳ ಗ್ರಾಮದಲ್ಲಿ ನೂರಾರು ಶವಗಳನ್ನು ಹೂತಿಟ್ಟ ಪ್ರಕರಣದಲ್ಲಿ ಬಂಧಿತನಾಗಿರುವ ಬುರುಡೆ ಚಿನ್ನಯ್ಯನನ್ನ ಮತ್ತೆ 4 ದಿನಗಳ ಕಾಲ ಎಸ್‌ಐಟಿ ಕಸ್ಟಡಿಗೆ ನೀಡಿ ಕೋರ್ಟ್‌ ಆದೇಶಿಸಿದೆ. ಸೆ. 6ರಂದು ಚಿನ್ನಯ್ಯನನ್ನ ಕೋರ್ಟ್‌ಗೆ ಹಾಜರುಪಡಿಸುವಂತೆ ಬೆಳ್ತಂಗಡಿ ನ್ಯಾಯಾಲಯ ಆದೇಶಿಸಿದೆ. 12 ದಿನಗಳ ಎಸ್‌ಐಟಿ ಕಸ್ಟಡಿ ಇಂದು ಅಂತ್ಯಗೊಂಡಿದ್ದ ಹಿನ್ನೆಲೆ ಚಿನ್ನಯ್ಯನನ್ನ ಬೆಳ್ತಂಗಡಿ ಕೋರ್ಟ್‌ಗೆ ಹಾಜರುಪಡಿಸಲಾಗಿತ್ತು. ಬೆಳ್ತಂಗಡಿ ತಾಲೂಕು ನ್ಯಾಯಾಲಯದ ಹೆಚ್ಚುವರಿ ವ್ಯಾವಹಾರಿಕ ಮತ್ತು ಪ್ರಥಮ ದರ್ಜೆ ನ್ಯಾಯಾಧೀಶರಾದ ವಿಜಯಾನಂದ ಟಿ. ಅವರ ಎದುರು ಹಾಜರುಪಡಿಸಲಾಗಿತ್ತು. ತನಿಖಾಧಿಕಾರಿ ಎಸ್ಪಿ

ಧರ್ಮಸ್ಥಳ ಬುರುಡೆ ಪ್ರಕರಣ| ಚಿನ್ನಯ್ಯನನ್ನು ಮತ್ತೆ ಎಸ್ಐಟಿ ಕಸ್ಟಡಿಗೆ ಒಪ್ಪಿಸಿದ ಬೆಳ್ತಂಗಡಿ ಕೋರ್ಟ್ Read More »