September 2025

ಧರ್ಮಸ್ಥಳ ಪ್ರಕರಣದಲ್ಲಿ ವಿದೇಶದಿಂದ ಫಂಡಿಂಗ್!? ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ ಎಂಟ್ರಿ ಸಾಧ್ಯತೆ

ಸಮಗ್ರ ನ್ಯೂಸ್: ಧರ್ಮಸ್ಥಳ ಗ್ರಾಮದಲ್ಲಿ ಶವಹೂತ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ ಐಟಿ ತನಿಖೆ ನಡೆಯುತ್ತಿರುವಾಗಲೇ ಇದೀಗ ಕೇಂದ್ರ ತನಿಖಾ ಸಂಸ್ಥೆ ಇಡಿ ಎಂಟ್ರಿ ಕೊಟ್ಟಿದೆ. ಧರ್ಮಸ್ಥಳದ ವಿರುದ್ದ ನಡೆದ ಷಡ್ಯಂತ್ರದ ಕುರಿತಂತೆ ವಿದೇಶಿ ದೇಣಿಗೆಯ ಬಗ್ಗೆ ಇಡಿ ತನಿಖೆ ನಡೆಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಧರ್ಮಸ್ಥಳ ಪ್ರಕರಣದ ತನಿಖೆ ನಡೆಯುತ್ತಿರುವ ನಡುವೆ ಈ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ ( Enforcement Directorate (ED) ತನಿಖೆಗೆ ಎಂಟ್ರಿಯಾಗಿದೆ. ವಿದೇಶಿ NGO ಗಳಿಂದ ಹಣ ಫಂಡಿಂಗ್ ಆಗಿದೆಯಾ ಎಂಬ […]

ಧರ್ಮಸ್ಥಳ ಪ್ರಕರಣದಲ್ಲಿ ವಿದೇಶದಿಂದ ಫಂಡಿಂಗ್!? ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ ಎಂಟ್ರಿ ಸಾಧ್ಯತೆ Read More »

ಧರ್ಮಸ್ಥಳ ಪ್ರಕರಣ| ಎಸ್ಐಟಿ ಕಚೇರಿಗೆ ಹಾಜರಾದ ಉದಯ ಜೈನ್

ಸಮಗ್ರ ನ್ಯೂಸ್: ಧರ್ಮಸ್ಥಳ ಪ್ರಕರಣದ ಕುರಿತು ತನಿಖೆ ನಡೆಸುತ್ತಿರುವ ವಿಶೇಷ ತನಿಕಾ ತಂಡದ (ಎಸ್‌ಐಟಿ) ಬೆಳ್ತಂಗಡಿ ಕಚೇರಿಗೆ ಧರ್ಮಸ್ಥಳದ ಉದಯ್ ಜೈನ್ ಬುಧವಾರ ಹಾಜರಾದರು. ಸುದ್ದಿಗಾರರ ಜೊತೆ ಮಾತನಾಡಿದ ಉದಯ್ ಜೈನ್, ‘ಬುಧವಾರ 11 ಗಂಟೆಗೆ ಕಚೇರಿಗೆ ಹಾಜರಾಗುವಂತೆ ಎಸ್ಐಟಿ ಅಧಿಕಾರಿಯೊಬ್ಬರು ನಿನ್ನೆ ದೂರವಾಣಿ ಕರೆ ಮಾಡಿ ತಿಳಿಸಿದ್ದರು. ಹಾಗಾಗಿ ಇಲ್ಲಿಗೆ ಬಂದಿದ್ದೇನೆ’ ಎಂದು ಹೇಳಿದರು. ಸೌಜನ್ಯ ಕೊಲೆ ಪ್ರಕರಣದ ಎಫ್‌ಐಆರ್ ನಲ್ಲಿ ನಮ್ಮ ಹೆಸರು ಇರಲಿಲ್ಲ. ಆದರೂ ನಮ್ಮನ್ನು ಆರೋಪಿಗಳನ್ನಾಗಿಸುವ ಷಡ್ಯಂತ್ರ ನಡೆದಿತ್ತು. ಸಿಬಿಐ ಮತ್ತು

ಧರ್ಮಸ್ಥಳ ಪ್ರಕರಣ| ಎಸ್ಐಟಿ ಕಚೇರಿಗೆ ಹಾಜರಾದ ಉದಯ ಜೈನ್ Read More »

ರಾಜ್ಯಾದ್ಯಂತ ಸೆ.8ರವರೆಗೂ ಮಳೆ ಮುಂದುವರಿಕೆ

ಸಮಗ್ರ ನ್ಯೂಸ್: ರಾಜ್ಯದ ಹಲವು ಭಾಗಗಳಲ್ಲಿ ಭಾರೀ ಮಳೆ, ಗುಡುಗು ಮತ್ತು ಗಾಳಿಯೊಂದಿಗೆ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ರಾಜ್ಯದ ಕರಾವಳಿ, ಮಲೆನಾಡು ಮತ್ತು ಒಳನಾಡಿನ ಜಿಲ್ಲೆಗಳಲ್ಲಿ ವಾರದವರೆಗೆ ಮಳೆ ಮುಂದುವರೆಯಲಿದೆ. ಇಂದು(ಸೆ.3) ಕರ್ನಾಟಕದಾದ್ಯಂತ ಮಳೆಯಾಗುವ ಸಾಧ್ಯತೆ ಇದೆ. ಕರಾವಳಿ ಜಿಲ್ಲೆಗಳಾದ ಮಂಗಳೂರು, ಉಡುಪಿ ಮತ್ತು ಕಾರವಾರ ಹಾಗೂ ಮಲೆನಾಡು ಪ್ರದೇಶಗಳಲ್ಲಿ ಭಾರೀ ಮಳೆಯಾಗುವ ನಿರೀಕ್ಷೆಯಿದೆ. ಒಳನಾಡಿನ ಜಿಲ್ಲೆಗಳಲ್ಲಿ ಮಳೆಯ ಜೊತೆಗೆ ಗುಡುಗು ಸಹಿತ ಭಾರೀ ಮಳೆ ಮತ್ತು ಗಾಳಿ ಬೀಸುವ

ರಾಜ್ಯಾದ್ಯಂತ ಸೆ.8ರವರೆಗೂ ಮಳೆ ಮುಂದುವರಿಕೆ Read More »

ಬಿಸ್ಲೆ ಘಾಟ್ ನಲ್ಲಿ ಗುಡ್ಡ ಕುಸಿತ| ರಸ್ತೆ ಸಂಚಾರ ಬಂದ್

ಸಮಗ್ರ ನ್ಯೂಸ್: ಭಾರೀ ಮಳೆ ಹಿನ್ನೆಲೆಯಲ್ಲಿ ಕುಕ್ಕೆ ಸುಬ್ರಹ್ಮಣ್ಯ ಸಂಪರ್ಕಿಸುವ ಬಿಸ್ಲೆ ಘಾಟ್ ರಸ್ತೆಯಲ್ಲಿ ಗುಡ್ಡ ಕುಸಿತ ಉಂಟಾಗಿದ್ದು ರಸ್ತೆ ಸಂಚಾರ ಬಂದ್ ಆಗಿದೆ. ಬಿಸಿಲೆ‌ ಘಾಟ್ ರಸ್ತೆಯ ಗಡಿ ಚಾಮುಂಡೇಶ್ವರಿ ಗುಡಿಯ ಸಮೀಪದಲ್ಲಿ ರಸ್ತೆಗೆ ಗುಡ್ಡ ಕುಸಿದಿದ್ದು ವಾಹನ ಸಂಚಾರ ಬಂದ್ ಆಗಿದೆ. ಇದರಿಂದಾಗಿ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿದೆ.

ಬಿಸ್ಲೆ ಘಾಟ್ ನಲ್ಲಿ ಗುಡ್ಡ ಕುಸಿತ| ರಸ್ತೆ ಸಂಚಾರ ಬಂದ್ Read More »

ಮಂಗಳೂರು: ಸೋಶಿಯಲ್ ಮೀಡಿಯಾದಲ್ಲಿ ಪರಿಚಯವಾದ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ| ಏಳು ಮಂದಿ‌ ಆರೋಪಿಗಳ‌ ಬಂಧನ

ಸಮಗ್ರ ನ್ಯೂಸ್: ಸೋಶಿಯಲ್ ಮಿಡಿಯಾದಲ್ಲಿ ಪರಿಚಯವಾದ ವಿಧ್ಯಾರ್ಥಿನಿಯ ಲೈಂಗಿಕವಾಗಿ ಬಳಸಿಕೊಂಡು ಅದರ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಏಳು ಮಂದಿ ಯುವಕರನ್ನು ಬಜ್ಪೆ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಕಾರ್ತಿಕ್, ರಾಕೇಶ್‌ ಸಲ್ಡಾನ, ಜೀವನ್‌, ಸಂದೀಪ್‌, ರಕ್ಷಿತ್, ಶ್ರವಣ್, ಸುರೇಶ್ ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ. ಕಾಲೇಜೊಂದರಲ್ಲಿ ಪ್ರಥಮ ಪಿಯುಸಿ ಕಲಿಯುತ್ತಿರುವ ವಿದ್ಯಾರ್ಥಿನಿಗೆ ಎರಡು ತಿಂಗಳ ಹಿಂದೆ ಕಾರ್ತಿಕ್ ಎಂಬಾತ ಇನ್‌ಸ್ಟಾ ಗ್ರಾಂನಲ್ಲಿ ಪರಿಚಯವಾಗಿದ್ದ. ಪರಿಚಯ ಪ್ರೀತಿಗೆ ತಿರುಗಿದ್ದು ಕಳೆದ ಜೂನ್‌ ತಿಂಗಳಲ್ಲಿ

ಮಂಗಳೂರು: ಸೋಶಿಯಲ್ ಮೀಡಿಯಾದಲ್ಲಿ ಪರಿಚಯವಾದ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ| ಏಳು ಮಂದಿ‌ ಆರೋಪಿಗಳ‌ ಬಂಧನ Read More »

ಅಫ್ಘಾನಿಸ್ತಾನ ಭೂಕಂಪ| ಸಾವಿನ ಸಂಖ್ಯೆ 1400+ ಏರಿಕೆ

ಸಮಗ್ರ ನ್ಯೂಸ್: ಹಿಂದು ಕುಶ್‌ ಪರ್ವತ ಶ್ರೇಣಿಗಳು, ಕುನಾರ್‌ ಕಣಿವೆಯ ಸೊಬಗಿನ ಪೂರ್ವ ಅಫ್ಗಾನಿಸ್ತಾನವು ಭಾನುವಾರ ತಡರಾತ್ರಿ ಸಂಭವಿಸಿದ ಭೀಕರ ಭೂಕಂಪಕ್ಕೆ ತತ್ತರಿಸಿದೆ. ಭೂಕಂಪದಲ್ಲಿ ಜೀವ ಕಳೆದುಕೊಂಡವರ ಸಂಖ್ಯೆ 1,400ಕ್ಕೂ ಹೆಚ್ಚು. 3 ಸಾವಿರಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಅಪಾರ ಸಂಖ್ಯೆಯ ಜನರು ನಿರಾಶ್ರಿತರಾಗಿದ್ದಾರೆ. ರಾತ್ರಿ ಜನರು ನಿದ್ರಿಸುತ್ತಿದ್ದ ವೇಳೆ ಭೂಕಂಪ ಸಂಭವಿಸಿದ್ದರಿಂದ ಅಪಾಯದ ಮುನ್ಸೂಚನೆ ತಿಳಿಯ ದಾಯಿತು. ಮನೆಗಳಿಂದ ಹೊರಗೆ ಓಡಿಬಂದು ಜೀವ ಉಳಿಸಿ ಕೊಳ್ಳಲು ಹೆಚ್ಚಿನ ಜನರಿಗೆ ಆಗಲಿಲ್ಲ. ಹೀಗಾಗಿ ದೊಡ್ಡ ಸಂಖ್ಯೆಯಲ್ಲಿ ಸಾವು-ನೋವು

ಅಫ್ಘಾನಿಸ್ತಾನ ಭೂಕಂಪ| ಸಾವಿನ ಸಂಖ್ಯೆ 1400+ ಏರಿಕೆ Read More »

ಧರ್ಮಸ್ಥಳ ಪ್ರಕರಣಕ್ಕೆ ಮತ್ತೊಂದು ತಿರುವು| ಹತ್ಯೆಗೀಡಾದವರ ಸಮಾಧಿ ತೋರಿಸಲು ಸಿದ್ದ ಎಂದು ಎಸ್ಐಟಿ ಗೆ ಪತ್ರ ಬರೆದ ಗ್ರಾಮಸ್ಥರು

ಸಮಗ್ರ ನ್ಯೂಸ್: ಧರ್ಮಸ್ಥಳ ಪ್ರಕರಣ ಮತ್ತೊಂದು ತಿರುವು ಪಡೆದುಕೊಳ್ಳುತ್ತಿದ್ದು, ಹತ್ಯೆಗೀಡಾದವರ ಸಮಾಧಿ ತೋರಿಸಲು ಸಿದ್ಧ ಎಂದು ಧರ್ಮಸ್ಥಳ ಗ್ರಾಮಸ್ಥರ ಗುಂಪೊಂದು ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ದಳಕ್ಕೆ ಪತ್ರ ಬರೆದಿದೆ. ಗ್ರಾಮಸ್ಥರ ಪರವಾಗಿ ಧರ್ಮಸ್ಥಳ ನಿವಾಸಿ ತುಕಾರಾಮ ಗೌಡ ಎಂಬುವವರು ಎಸ್‌ಐಟಿಗೆ ಪತ್ರ ಸಲ್ಲಿಸಿದ್ದಾರೆ. ಪ್ರಕರಣ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದ್ದು, ನಾವು ಭಯದಲ್ಲಿ ಬದುಕುವಂತಾಗಿದೆ. ಆದರೆ, ನಿಷ್ಪಕ್ಷಪಾತ ಮತ್ತು ಪಾರದರ್ಶಕ ತನಿಖೆಯನ್ನು ಖಚಿತಪಡಿಸಿಕೊಳ್ಳಲು ಸರ್ಕಾರ ಎಸ್‌ಐಟಿ ರಚಿಸಿರುವುದು ನಮ್ಮ ವಿಶ್ವಾಸ ಹೆಚ್ಚಾಗುವಂತೆ ಮಾಡಿದೆ. ಮಾಧ್ಯಮಗಳಲ್ಲಿ ತೋರಿಸಲಾಗಿರುವ

ಧರ್ಮಸ್ಥಳ ಪ್ರಕರಣಕ್ಕೆ ಮತ್ತೊಂದು ತಿರುವು| ಹತ್ಯೆಗೀಡಾದವರ ಸಮಾಧಿ ತೋರಿಸಲು ಸಿದ್ದ ಎಂದು ಎಸ್ಐಟಿ ಗೆ ಪತ್ರ ಬರೆದ ಗ್ರಾಮಸ್ಥರು Read More »

ಪುತ್ತೂರು: ಅಕ್ರಮ-ಸಕ್ರಮ ಮಂಜೂರಾತಿಗೆ ಲಂಚ ಪಡೆದ ಆರೋಪ| 47 ಜನ ಲಂಚ ನೀಡಿದವರನ್ನು ಕರೆತನ್ನಿ ಎಂದು ಶಾಸಕ ರೈಗೆ ಬಿಜೆಪಿ ಟಾಂಗ್

ಸಮಗ್ರ ನ್ಯೂಸ್: ಅಕ್ರಮ-ಸಕ್ರಮ ಮಂಜೂರಾತಿಗೆ ಮಾಜಿ ಶಾಸಕ ಲಂಚ ಪಡೆದಿದ್ದು ಮಹಾಲಿಂಗೇಶ್ವರ ದೇವಸ್ಥಾನದ ನಡೆಯಲ್ಲಿ ಹಣ ಪಡೆದಿಲ್ಲ ಎಂದು ಪ್ರಮಾಣ ಮಾಡಲಿ ಎಂದು ಸವಾಲು ಹಾಕಿದ್ದ ಪುತ್ತೂರು ಶಾಸಕ ಅಶೋಕ್ ರೈ ಹೇಳಿಕೆಗೆ ಇದೀಗ ಬಿಜೆಪಿ ಪ್ರತಿಸವಾಲು ಹಾಕಿದ್ದು, ಶಾಸಕರು ಲಂಚ ನೀಡಿದ್ದ 47 ಜನರನ್ನು ಕರೆದುಕೊಂಡು ಬರಲಿ ಎಂದಿದ್ದಾರೆ. ಪುತ್ತೂರಿನಲ್ಲಿ ಮಾತನಾಡಿದ ಬಿಜೆಪಿ ಪುತ್ತೂರು ಗ್ರಾಮಾಂತರ ಮಂಡಲ ಅಧ್ಯಕ್ಷ ದಯಾನಂದ ಉಜಿರೆಮಾರ್ ಪುತ್ತೂರು ಶಾಸಕರು ನೀಡಿದ ಸವಾಲನನ್ನು ಸ್ವೀಕರಿಸುವುದಾಗಿ ಹೇಳಿದ್ದು, ಶಾಸಕರು ಲಂಚ ನೀಡಿದ 47

ಪುತ್ತೂರು: ಅಕ್ರಮ-ಸಕ್ರಮ ಮಂಜೂರಾತಿಗೆ ಲಂಚ ಪಡೆದ ಆರೋಪ| 47 ಜನ ಲಂಚ ನೀಡಿದವರನ್ನು ಕರೆತನ್ನಿ ಎಂದು ಶಾಸಕ ರೈಗೆ ಬಿಜೆಪಿ ಟಾಂಗ್ Read More »

ಒಂದೆಡೆ ಧರ್ಮಸ್ಥಳಕ್ಕೆ ಜೈ, ಮತ್ತೊಂದೆಡೆ ಸೌಜನ್ಯ ಪರ, ಬಿಜೆಪಿಯವರ ನಿಲುವೇ ದ್ವಂದ್ವ ರಾಜಕೀಯ – ಸಿಎಂ ಸಿದ್ದರಾಮಯ್ಯ

ಸಮಗ್ರ ನ್ಯೂಸ್: ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಮಾಡಿರುವುದು ಧರ್ಮಯಾತ್ರೆ ಅಲ್ಲ, ರಾಜಕೀಯ ಯಾತ್ರೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ವರದಿಗಾರರಿಗೆ ಸ್ಪಂದಿಸಿದ ಸಿಎಂ ಸಿದ್ದರಾಮಯ್ಯ, ಬಿಜೆಪಿಯವರು ಈಗ ಧರ್ಮಸ್ಥಳ ಪ್ರಕರಣವನ್ನು ಈಗ ಎನ್. ಐ. ಎ ತನಿಖೆ ಮಾಡಿಸಿ ಎಂದು ಹೇಳುತ್ತಿದ್ದಾರೆ. ಎಸ್.ಐ.ಟಿ ಅವರೂ ಪೊಲೀಸರು, ಎನ್‌.ಐ.ಎ ಅವರೂ ಪೊಲೀಸರು. ನಮ್ಮ ಪೊಲೀಸರ ಮೇಲೆ ಬಿಜೆಪಿಗೆ ನಂಬಿಕೆ ಇಲ್ಲವೇ ? ಬಿಜೆಪಿ ಮೊದಲು ತನಿಖೆ ಮಾಡಿ ಎಂದು ಹೇಳಲೇ ಇಲ್ಲ. ಉತ್ಖನನ ಕಾರ್ಯ ನಡೆದ ಮೇಲೆ

ಒಂದೆಡೆ ಧರ್ಮಸ್ಥಳಕ್ಕೆ ಜೈ, ಮತ್ತೊಂದೆಡೆ ಸೌಜನ್ಯ ಪರ, ಬಿಜೆಪಿಯವರ ನಿಲುವೇ ದ್ವಂದ್ವ ರಾಜಕೀಯ – ಸಿಎಂ ಸಿದ್ದರಾಮಯ್ಯ Read More »

‘ಡೂ ಯು ನೋ ಕನ್ನಡ?’ ಎಂದ ಸಿಎಂ ಸಿದ್ದರಾಮಯ್ಯ| ಹೃದಯ ಗೆದ್ದ ರಾಷ್ಟ್ರಪತಿ ಮುರ್ಮು ಉತ್ತರ

ಸಮಗ್ರ ನ್ಯೂಸ್: ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ನಡುವೆ ಸೋಮವಾರ ಭಾಷಾ ಜುಗಲ್ ಬಂದಿ ನಡೆಯಿತು. ಅಖಿಲ ಭಾರತ ವಾಕ್‌ ಮತ್ತು ಶ್ರವಣ ಸಂಸ್ಥೆಯಲ್ಲಿ ಸೋಮವಾರ ನಡೆದ ವಜ್ರ ಮಹೋತ್ಸವ ಸಮಾರಂಭದಲ್ಲಿ ಈ ಘಟನೆ ಜರುಗಿತು. ಮೊದಲಿಗೆ ಭಾಷಣ ಮಾಡಿದ ಸಿಎಂ ಸಿದ್ದರಾಮಯ್ಯ ಅವರು, ಭಾಷಣ ಪ್ರಾರಂಭಿಸುವ ಮುನ್ನ ‘ಯು ನೋ ಕನ್ನಡ?(ನಿಮಗೆ ಕನ್ನಡ ಬರುತ್ತದೆಯೇ?)’ ಎಂದು ರಾಷ್ಟ್ರಪತಿಗಳಿಗೆ ತಮಾಷೆಯಿಂದ ಕೇಳಿದರು. ಸಿಎಂ ಪ್ರಶ್ನೆಗೆ ರಾಷ್ಟ್ರಪತಿ ಹಾಗೂ ವೇದಿಕೆಯ ಆಹ್ವಾನಿತರು ನಕ್ಕರು. ಬಳಿಕ

‘ಡೂ ಯು ನೋ ಕನ್ನಡ?’ ಎಂದ ಸಿಎಂ ಸಿದ್ದರಾಮಯ್ಯ| ಹೃದಯ ಗೆದ್ದ ರಾಷ್ಟ್ರಪತಿ ಮುರ್ಮು ಉತ್ತರ Read More »