ಪುತ್ತೂರು – ಮಂಗಳೂರು ತಡೆರಹಿತ ಬಸ್ ಸಂಚಾರ ಆರಂಭ

ಸಮಗ್ರ ನ್ಯೂಸ್: ಪುತ್ತೂರಿನಿಂದ ಮಂಗಳೂರು ನಡುವೆ ಹೊಸದಾಗಿ ತಡೆರಹಿತ ಸರಕಾರಿ ಬಸ್ ಓಡಾಡಕ್ಕೆ ಸೋಮವಾರ ಪುತ್ತೂರು ಬಸ್ ನಿಲ್ದಾಣದಲ್ಲಿ ಚಾಲನೆ ನೀಡಲಾಯಿತು. ಶಾಸಕ ಅಶೋಕ್ ಕುಮಾರ್ ರೈ ಅವರು ಪುತ್ತೂರು ಬಸ್ ನಿಲ್ದಾಣದಲ್ಲಿ ಹಸಿರು ನಿಶಾನೆ ತೋರಿಸಿ ತಡೆರಹಿತ ಬಸ್‍ಗೆ ಚಾಲನೆ ನೀಡಿದರು.

Ad Widget . Ad Widget . Ad Widget . Ad Widget . Ad Widget . Ad Widget .

ಪುತ್ತೂರು-ಮಂಗಳೂರು ನಡುವೆ ತಡೆರಹಿತವಾಗಿ ಪ್ರತಿದಿನ 7 ಬಸ್ಸುಗಳು 29 ಟ್ರಿಪ್‍ಗಳ ಸಂಚಾರ ನಡೆಸಲಿದೆ. ಪುತ್ತೂರು ಮಂಗಳೂರು ನಡುವೆ ಎಲ್ಲಿಯೂ ನಿಲ್ಲದೆ ನೇರ ಸಂಚರಿಸಲಿದ್ದು, ಅತಿ ಕಡಿಮೆ ಅವಧಿಯಲ್ಲಿ ತಲುಪಲಿದೆ. ಈ ಬಸ್‍ನಲ್ಲಿ ಪ್ರಯಾಣಿಸುವ ಮಹಿಳೆಯರಿಗೆ ಉಚಿತ ಪ್ರಯಾಣವಾಗಿದ್ದು ಎಲ್ಲಾ ರೀತಿಯ ಪಾಸುಗಳು ಅನ್ವಯವಾಗುತ್ತದೆ. ಈ ಸಂದರ್ಭದಲ್ಲಿ ಜಿಲ್ಲಾ ಗ್ಯಾರಂಟಿ ಸಮಿತಿ ಅಧ್ಯಕ್ಷ ಭರತ್ ಮುಂಡೋಡಿ ಮತ್ತಿತರರು ಉಪಸ್ಥಿತರಿದ್ದರು.

Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget .

Leave a Comment

Your email address will not be published. Required fields are marked *