ಮಂಗಳೂರು: ದೇಶದ ಮೊದಲ ಕೋಮುಹಿಂಸೆ ನಿಗ್ರಹ ಪಡೆ ಉದ್ಘಾಟನೆ

ಸಮಗ್ರ ನ್ಯೂಸ್: ರಾಜ್ಯಸರ್ಕಾರದ ನೆಮ್ಮದಿ ಕೆಡಿಸಿದ್ದ ಇತ್ತೀಚಿನ ಸರಣಿ ಕೊಲೆಗಳು ಹಾಗೂ ಕೋಮು ಹಿಂಸಾಚಾರವನ್ನು ಹತ್ತಿಕ್ಕಲು ದೇಶದಲ್ಲೇ ಮೊದಲ ಬಾರಿಗೆ ಕರಾವಳಿ ಹಾಗೂ ಮಲೆನಾಡಿನ ಮೂರು ಜಿಲ್ಲೆಗಳಿಗೆ ಸೀಮಿತವಾಗಿ ಕೋಮು ಹಿಂಸೆ ನಿಗ್ರಹ ವಿಶೇಷ ಕಾರ್ಯಪಡೆಯನ್ನು ಗೃಹಸಚಿವ ಡಾ.ಜಿ.ಪರಮೇಶ್ವರ್‌ ಮಂಗಳೂರಿನಲ್ಲಿ ಲೋಕಾರ್ಪಣೆ ಮಾಡಿದರು.

. Ad Widget . Ad Widget

ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್‌ ಗುಂಡೂರಾವ್‌, ವಿಧಾನಪರಿಷತ್‌ ಸದಸ್ಯರಾದ ಮಂಜುನಾಥ್‌ ಭಂಡಾರಿ, ಐವಾನ್‌ ಡಿಸೋಜ, ಪುತ್ತೂರು ಕ್ಷೇತ್ರದ ಶಾಸಕ ಅಶೋಕ್‌ ರೈ, ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ್‌, ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಜೋಕಿನ್‌, ಮಾಜಿ ಸಂಸದ ಅಜಯ್‌ ಸರ್‌ ನಾಯಕ್‌, ಮಾಜಿ ಸಚಿವ ವಿನಯ್‌ಕುಮಾರ್‌ ಸೊರಕೆ, ರಾಜ್ಯದ ಪೊಲೀಸ್‌‍ ಮಹಾ ನಿರ್ದೇಶಕ ಎಂ.ಎ.ಸಲೀಂ, ಜಿಲ್ಲಾಧಿಕಾರಿ ಮುಲೈಮುಹಿಲನ್‌, ಎಡಿಜಿಪಿ ಎಸ್‌‍.ಮುರುಘನ್‌, ಪಶ್ಚಿಮ ವಲಯ ಐಜಿಪಿ ಅಜಿತ್‌ ಸಿಂಗ್‌, ಮಂಗಳೂರು ನಗರ ಪೊಲೀಸ್‌‍ ಆಯುಕ್ತ ಸುಧೀರ್‌ರೆಡ್ಡಿ, ಮೂರು ಜಿಲ್ಲೆಗಳ ಎಸ್ಪಿಗಳು ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.

. Ad Widget . . Ad Widget . Ad Widget

ಇದೇ ವೇಳೆ ಮಾತನಾಡಿದ ಪರಮೇಶ್ವರ್‌ ಅವರು, ಆರು ತಿಂಗಳ ಹಿಂದೆ ಮಂಗಳೂರಿನಲ್ಲಿ ಒಂದು ಕೊಲೆಯಾಗಿತ್ತು. ಸ್ವಾಭಾವಿಕವಾಗಿ ಆತಂಕ, ಭಯದ ವಾತಾವರಣ ನಿರ್ಮಾಣವಾಗಿತ್ತು. ಆ ವೇಳೆ ಶಾಂತಿ ಸಹಬಾಳ್ವೆಯ ಪರಿಸ್ಥಿತಿಯನ್ನು ನಾನು ನೋಡಲೇ ಇಲ್ಲ. ರಾಜ್ಯದಲ್ಲಿ ಕಲೆ, ಸಂಸ್ಕೃತಿ, ಸಾಹಿತ್ಯ ಉಳಿದಿದ್ದರೆ ಅದಕ್ಕೆ ಕರಾವಳಿ ಜಿಲ್ಲೆಗಳ ಕೊಡುಗೆ ಅಪಾರವಾಗಿದೆ. ಇಲ್ಲಿನ ಕಾರ್ಯವೈಖರಿಯೇ ವಿಶೇಷವಾಗಿದೆ. ರಾಜ್ಯದಲ್ಲೇ ಮೊದಲ ಖಾಸಗಿ ವೈದ್ಯಕೀಯ ಕಾಲೇಜುಗಳು ಮಂಗಳೂರಿನಲ್ಲಿ ಆರಂಭಿಸಲಾಗಿತ್ತು. ನಾಡಿನ ಅಭಿವೃದ್ಧಿಯಲ್ಲೂ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯ ಕೊಡುಗೆ ಅಪಾರವಾಗಿದೆ ಎಂದರು.

Leave a Comment

Your email address will not be published. Required fields are marked *