ಕುಡುಕ ತಂದೆಯ ಚಿತ್ರ ಹಿಂಸೆ ಅನುಭವಿಸಿದವರಿಗಷ್ಟೇ ಗೊತ್ತು: ತಂದೆಯ ಆರೋಪಕ್ಕೆ ಚೈತ್ರಾ ಕುಂದಾಪುರ ತಿರುಗೇಟು..!

ಸಮಗ್ರ ನ್ಯೂಸ್: ಪ್ರೀತಿಸಿದ ಹುಡುಗನ ಜೊತೆಗೆ ದಾಂಪತ್ಯ ಜೀವನಕ್ಕೆ ಚೈತ್ರಾ ಕುಂದಾಪುರ ಕಾಲಿಟ್ಟಿದ್ದರು. ಆದ್ರೇ ತಮ್ಮ ಮದುವೆಗೆ ಖುದ್ದು ತಂದೆಯನ್ನೇ ಕರೆದಿಲ್ಲ ಎಂಬ ಆರೋಪ ಕೇಳಿಬಂದಿದೆ. ಖುದ್ದು ಈ ಬಗ್ಗೆ ಮಾಧ್ಯಮಗಳ ಮುಂದೆ ಬಂದು ಚೈತ್ರಾ ಕುಂದಾಪುರ ತಂದೆ ಬಾಲಕೃಷ್ಣ ನಾಯ್ಕ್ ಮಗಳ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

. Ad Widget . Ad Widget

ಇದೀಗ ಈ ಪ್ರಕರಣಕ್ಕೆ ಚೈತ್ರಾ ಕುಂದಾಪುರ ಟ್ವಿಸ್ಟ್ ಹಾಕಿದ್ದಾರೆ. ತಂದೆಯ ಮಾತು ಕೇಳುತ್ತಿದ್ದಂತೆ ಚೈತ್ರಾ ಕುಂದಾಪುರ ಅವರು ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ತಂದೆ ಬಗ್ಗೆಯೇ ಹೀಗೆ ಬರೆದುಕೊಂಡು ಶೇರ್ ಮಾಡಿಕೊಂಡಿದ್ದಾರೆ. ಕುಡುಕ ತಂದೆಯ ಚಿತ್ರ ಹಿಂಸೆ ಅನುಭವಿಸಿದವರಿಗಷ್ಟೇ ಗೊತ್ತು. ಎಂತಹ ಮಕ್ಕಳಿಗೂ ಕುಡುಕ ತಂದೆ ಸಿಗಬಾರದು. ಎರಡು ಕ್ವಾಟರ್ ನಾನು ಕೊಟ್ರೆ ನನ್ನ ಮಕ್ಕಳು ದೇವರು ಅನ್ನುವವರ ಮಾತಿಗೆ ಬೆಲೆ ಕೊಡುವವರು ಮೂರ್ಖರಾಗ್ತಾರೆ ಅಂತ ಬರೆದುಕೊಳ್ಳುವ ಮೂಲಕ ತಿರುಗೇಟು ಕೊಟ್ಟಿದ್ದಾರೆ.

. Ad Widget . . Ad Widget . Ad Widget

Leave a Comment

Your email address will not be published. Required fields are marked *