ಸಮಗ್ರ ನ್ಯೂಸ್: ಹಿಂದುತ್ವಕ್ಕಾಗಿ ಕೆಲಸ ಮಾಡಿ ಹತ್ಯೆಗೊಳಗಾದ ಸುಹಾಸ್ ಶೆಟ್ಟಿ, ಅವರನ್ನು ರೌಡಿ ಶೀಟರ್ ಎಂದು ಬಿಂಬಿಸುವುದು ಸರಿಯಲ್ಲ. ಕೇಸ್‌ಗಳಿವೆ ಎಂಬ ಮಾತ್ರಕ್ಕೆ ಅವರನ್ನು ರೌಡಿ ಶೀಟರ್ ಎನ್ನುವುದಾದರೆ ಹಲವು ಕೇಸ್‌ಗಲಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತು ಗೃಹ ಸಚಿವ ಡಾ.ಪರಮಶ್ವರ್ ಅವರನ್ನೂ ಗೂಂಡಾ ಎನ್ನಬಹುದೇ ಎಂದು ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಪ್ರಶ್ನಿಸಿದ್ದಾರೆ.
ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ‘ ಸುಹಾಸ್ ಶೆಟ್ಟಿ ಅವರು ಆತ್ಮರಕ್ಷಣೆಗೂ ಆಯುಧ ಇರಿಸದಂತೆ ಪೊಲೀಸರು ಪದೇ ಪದೇ ತಪಾಸಣೆ ನಡೆಸಿದ್ದಾರೆ, ಪೊಲೀಸರಿಗೆ ತಿಳಿದೇ ಈ ಕೊ*ಲೆ ನಡೆದಿದೆ. ಸುಹಾಸ್ ಪ್ರಕರಣದಲ್ಲಿ ನಿಜವಾದ ಅಪರಾಧಿಗಳಿಗೆ ಶಿಕ್ಷೆ ಆಗಲಿ, ಸುಹಾಸ್ ಹತ್ಯೆ ವೇಳೆ ಸ್ಥಳದಲ್ಲಿದ್ದು ಆರೋಪಿಗಳೊಂದಿಗೆ ಮಾತನಾಡುತ್ತಿದ್ದ ಬುರ್ಖಾಧಾರಿ ಮಹಿಳೆಯರನ್ನು ಕೂಡಾ ಬಂಧಿಸಬೇಕು ಎಂದು ಭಾಗೀರಥಿ ಮುರುಳ್ಯ ಆಗ್ರಹಿಸಿದರು.
ಸ್ಪೀಕರ್ ಕೊಲೆ ಆರೋಪಿಗಳ ಪರವಾಗಿ ದನಿ ಎತ್ತಿದ್ದಾರೆ. ಮಂಗಳೂರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಗೃಹ ಸಚಿವ ಪರಮೇಶ್ವರ್ ಅವರು ಕೇವಲ ಮುಸ್ಲಿಂ ನಾಯಕರೊಂದಿಗೆ ಮಾತ್ರ ಸಭೆ ನಡೆಸಿ ಈ ಪ್ರದೇಶದ ಚುನಾಯಿತ ಪ್ರತಿನಿಧಿಗಳನ್ನು ನಿರ್ಲಕ್ಷಿಸಿದ್ದಾರೆ.ಮುಖ್ಯಮಂತ್ರಿ ಮತ್ತು ಗೃಹ ಸಚಿವರು ಪ್ರೀತಿ ಮತ್ತು ಶಾಂತಿಯ ಸಂದೇಶವನ್ನು ನೀಡಬೇಕಿತ್ತು ಆದರೆ ಮುಸ್ಲಿಂ ನಾಯಕರೊಂದಿಗೆ ಮಾತ್ರ ಮಾತನಾಡಿದರು ಪರಿಸ್ಥಿತಿಯನ್ನು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳಲು ಸಚಿವರು ಪ್ರತಿನಿಧಿಗಳನ್ನು ಸಭೆಗೆ ಕರೆಯಬೇಕಿತ್ತು ಎಂದರು.




























