ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ಭಾಗಿ| ಇಡಿ‌ ತಾತ್ಕಾಲಿಕ ಆದೇಶದಲ್ಲಿ ಸ್ಪೋಟಕ ಮಾಹಿತಿ ಬಹಿರಂಗ

ಸಮಗ್ರ ನ್ಯೂಸ್: ಮುಡಾ ಹಗರಣಕ್ಕೆ ಸಂಬಂಧಪಟ್ಟಂತೆ ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮತ್ತೊಂದು ಸಂಕಷ್ಟ ಎದುರಾಗಿದ್ದು, ಒಂದು ಕಡೆ ಲೋಕಾಯುಕ್ತ ಸಂಸ್ಥೆ ಇನ್ನೊಂದು ಕಡೆ ಜಾರಿ ನಿರ್ದೇಶನಾಲಯ (ED) ಸಂಸ್ಥೆ ಕೂಡ ಸಂಪೂರ್ಣ ತನಿಖೆ ನಡೆಸಿದ್ದು ಇದೀಗ ಇಡಿ ತಾತ್ಕಾಲಿಕ ಶಕ್ತಿ ಆದೇಶದಲ್ಲಿ ಸ್ಪೋಟಕವಾದ ಮಾಹಿತಿ ಬಹಿರಂಗವಾಗಿದ್ದು, ಮುಡಾದಲ್ಲಿ ಸೈಟ್ ಗಳ ಹಂಚಿಕೆಯ ಪರಿಹಾರಾರ್ಥವಾಗಿ ಅಕ್ರಮ ಹಣ ವರ್ಗಾವಣೆ ಯತ್ನದಲ್ಲಿ ಸಿಎಂ ಸಿದ್ದರಾಮಯ್ಯ ಅವರು ಭಾಗಿಯಾಗಿದ್ದಾರೆ ಎಂದು ತಿಳಿದುಬಂದಿದೆ.

. Ad Widget . Ad Widget

ಅಕ್ರಮ ಹಣ ವರ್ಗಾವಣೆ ಯತ್ನದಲ್ಲಿ ಸಿಎಂ ಸಿದ್ದರಾಮಯ್ಯ ಭಾಗಿ ಆಗಿರುವ ಬಗ್ಗೆ ಇಡಿಯು ದಾಖಲೆಗಳಲ್ಲಿ ಉಲ್ಲೇಖಿಸಿದ್ದು ಅಕ್ರಮ ಹಣ ವರ್ಗಾವಣೆ ಯತ್ನದಲ್ಲಿ ಸಿಎಂ ಸಿದ್ದರಾಮಯ್ಯ ಅವರು ಭಾಗಿಯಾಗಿದ್ದಾರೆ ಎಂದು 102 ಪುಟಗಳ ಇಡಿಯ ತಾತ್ಕಾಲಿಕ ಜಪ್ತಿ ಆದೇಶದಲ್ಲಿ ಸ್ಪೋಟಕ ಮಾಹಿತಿ ಬಹಿರಂಗವಾಗಿದೆ ಎಂದು ತಿಳಿದುಬಂದಿದೆ.

. Ad Widget . . Ad Widget . Ad Widget

ಜಮೀನನ್ನು 3,24,700 ಮುಡಾದಿಂದ ಸ್ವಾಧೀನ ಪಡೆದುಕೊಂಡಿದ್ದಾರೆ. ಜಮೀನನ್ನು ತಪ್ಪು ಮಾಹಿತಿ ಪ್ರಭಾವ ಬಳಸಿ ಡಿನೋಟಿಫಿಕೇಶನ್ ಮಾಡಲಾಗಿದೆ. ಬಿಎಂ ಮಲ್ಲಿಕಾರ್ಜುನಸ್ವಾಮಿ ಕೃಷಿ ಜಮೀನು ಎಂದು ಖರೀದಿ ಮಾಡುವ ಮೊದಲೇ ಮುಡಾ ಇಲ್ಲಿ ಬಡಾವಣೆಗಳನ್ನು ಅಭಿವೃದ್ಧಿಪಡಿಸಿತ್ತು. ನಿವೇಶನ ಹಂಚಿಕೆ ಮಾಡಿತ್ತು. ಇದಕ್ಕೆ ಯಾವ ತಕರಾರು ಎತ್ತಿಲ್ಲ ತಪ್ಪು ಸ್ಥಳ ಪರಿಶೀಲನೆ ವರದಿ ಆಧರಿಸಿ ಭೂಮಿ ಪರಿವರ್ತನೆ ಮಾಡಲಾಗಿತ್ತು.

14 ನಿವೇಶನ ಹಂಚಿಕೆಯಾದಾಗ ಯತೀಂದ್ರ ವರುಣ ಶಾಸಕರಾಗಿದ್ದರು. ಅದೇ ಸಮಯದಲ್ಲಿ ಸಿದ್ದರಾಮಯ್ಯ ಪುತ್ರ ಯತೀಂದ್ರ ಮುಡಾ ಸದಸ್ಯರು ಆಗಿದ್ದರು. ಅಕ್ರಮ ನಿವೇಶನ ಹಂಚಿಕೆಯಾದಾಗ ಸಿದ್ದರಾಮಯ್ಯ ವಿಪಕ್ಷ ನಾಯಕರಾಗಿದ್ದರು. ಎಸ್ ಜಿ ದಿನೇಶ್ ಕುಮಾರ್ ಸಿದ್ದರಾಮಯ್ಯ ಅವರ ಸಹಾಯಕರಾನಾಗಿದ್ದರು. ಅಲ್ಲದೇ ಸಿಟಿ ಕುಮಾರ್ ಮುಡಾ ಅಧಿಕಾರಿಗಳ ಮೇಲೆ ಪ್ರಭಾವ ಬೀರಿದ್ದರು. ಸಹಿ ನಕಲು ಮಾಡಿ ಸೈಟ್ ಹಂಚಿಕೆ ಆಗುವಂತೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಅಕ್ಟೋಬರ್ 1 ಮತ್ತು 14 ಮುಡಾ ಸೈಡ್‌ಗಳನ್ನು ವಾಪಸ್ ನೀಡಿದ್ದಾರೆ. ರಾಜಕೀಯ ಪ್ರಭಾವ ಬಳಸಿ 56 ಕೋಟಿ ಮೌಲ್ಯದ ಸೈಟ್ ಗಳನ್ನು ಕಬಳಿಕೆ ಮಾಡಿದ್ದಾರೆ. ಕಾನೂನು ಪರಿಹಾರವಾಗಿ 14 ಸೈಟ್ ಗಳ ಪರಿಹಾರ ಪಡೆದಿದ್ದಾರೆ. ಸೈಟ್ ಹಿಂದಿರುಗಿಸಿದರು ಕೂಡ ಅಕ್ರಮ ಹಣ ವರ್ಗಾವಣೆ ಆಗಿದೆ. ಸಿಎಂ ಸಿದ್ದರಾಮಯ್ಯ, ಪಾರ್ವತಿ, ಮಲ್ಲಿಕಾರ್ಜುನ ಮತ್ತು ದೇವರಾಜು ಇತರೆ ಮುಡಾ ಅಧಿಕಾರಿಗಳು ಅಕ್ರಮದಲ್ಲಿ ಭಾಗಿಯಾಗಿದ್ದಾರೆ. ರಿಯಲ್ ಎಸ್ಟೇಟ್ ಉದ್ಯಮಿಗಳು ಹಾಗೂ ಪ್ರಭಾವಿಗಳು ಶಾಮೀಲು ಆಗಿದ್ದಾರೆ ತಾತ್ಕಾಲಿಕ ಜಪ್ತಿ ಆದೇಶದಲ್ಲಿ ಇಡಿ ಉಲ್ಲೇಖಿಸಿದೆ.

Leave a Comment

Your email address will not be published. Required fields are marked *