ಕುಕ್ಕೆ ಸುಬ್ರಹ್ಮಣ್ಯನ ಜಾತ್ರೆಗೆ ತಯಾರಾಗುತ್ತಿದೆ ಬೆತ್ತದಿಂದ ರಥ| ಮೂಲ ನಿವಾಸಿಗಳಿಂದ‌ ಸಾಂಪ್ರದಾಯಿಕ ಶೈಲಿಯಲ್ಲಿ ನಿರ್ಮಾಣ

ಸಮಗ್ರ ನ್ಯೂಸ್: ಕುಕ್ಕೆ ಸುಬ್ರಹ್ಮಣ್ಯ ದೇವರ ಚಂಪಾಷಷ್ಠಿ ಜಾತ್ರಾ ಮಹೋತ್ಸವದಲ್ಲಿ ಮೂಲ ನಿವಾಸಿಗಳಾದ ಮಲೆಕುಡಿಯ ಜನಾಂಗದವರು ರಚಿಸುವ ಬೆತ್ತದ ರಥಗಳು ಪ್ರಧಾನವಾಗಿವೆ. ಮಲೆಕುಡಿಯ ಜನಾಂಗದವರು ತಮ್ಮ ಕೈಚಳಕದಿಂದ ತೇರನ್ನು ಸಿದ್ಧಗೊಳಿಸುವ ಕಾಯಕದಲ್ಲಿ ತೊಡಗಿಕೊಂಡಿದ್ದಾರೆ.

. Ad Widget . Ad Widget

ಯಾವುದೇ ಹಗ್ಗ ಬಳಸದೆ ಬೆತ್ತಗಳಿಂದಲೇ ವಿಶಿಷ್ಟವಾದ ರಥವನ್ನು ಅವರು ನಿರ್ಮಿಸುತ್ತಿದ್ದಾರೆ. ಇವುಗಳನ್ನು ಬೆತ್ತದಿಂದಲೇ ಎಳೆಯುವುದು ಮತ್ತೊಂದು ವಿಶೇಷ. ಸಾಲಾಂಕೃತ ರಥಗಳು ಜಾತ್ರೆಯ ಮೆರುಗನ್ನು ಇಮ್ಮಡಿಗೊಳಿಸುತ್ತದೆ. ಇದೀಗ ಮೂಲನಿವಾಸಿ ಮಲೆಕುಡಿಯ ಜನಾಂಗದವರು ಕಾಡಿನಿಂದ ಸಂಗ್ರಹಿಸಿದ ಬೆತ್ತವನ್ನು ಉಪಯೋಗಿಸಿ ರಥಗಳನ್ನು ಸಂಪ್ರದಾಯದಂತೆ ನಿರ್ಮಿಸುತ್ತಿದ್ದಾರೆ.

. Ad Widget . . Ad Widget . Ad Widget

ರಥದ ಅಟ್ಟೆಯನ್ನು ಬಿದಿರು ಹಾಗೂ ಬ್ರಹ್ಮರಥದದ ಮೆಲ್ಭಾಗವನ್ನು ಬೆತ್ತಗಳಿಂದ ರಚಿಸುತ್ತಾರೆ. ಐದು ಅಂತಸ್ತುಗಳ ಬ್ರಹ್ಮರಥಕ್ಕೆ ಹಲಗೆಯನ್ನಿಟ್ಟು ರಥದ ಕೆಲಸ ಆರಂಭಿಸಿದ್ದಾರೆ. ರಥವನ್ನು ಬಟ್ಟೆಯ ಪತಾಕೆಗಳಿಂದ ಸಿಂಗರಿಸುತ್ತಾರೆ. ಈ ಬಾರಿ ಸುಮಾರು 61 ಮಂದಿ ಹಿರಿಯರು ಮತ್ತು ಕಿರಿಯರು ರಥ ಕಟ್ಟುವ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ.

Leave a Comment

Your email address will not be published. Required fields are marked *