ಕರ್ನಾಟಕ ಹಾಗೂ ದೆಹಲಿ ಮಟ್ಟದಲ್ಲಿ ವಕ್ಫ್ ವಿರುದ್ಧ ಹೋರಾಟ| ಮಹಾರಾಷ್ಟ್ರದಲ್ಲಿ ವಕ್ಫ್ ಗೆ 10 ಕೋಟಿ ಅನುದಾನ| ಕಾಂಗ್ರೆಸ್ ಗೆ ಅಸ್ತ್ರವಾಗಲಿದೆಯಾ ಬಿಜೆಪಿಯ ದ್ವಂದ್ವ ನೀತಿ!

ಸಮಗ್ರ ನ್ಯೂಸ್: ಕರ್ನಾಟಕದಲ್ಲಿ ವಕ್ಫ್ ವಿಚಾರಕ್ಕೆ ಸಂಬಂಧಪಟ್ಟಂತೆ ಈಗಾಗಲೇ ಬಿಜೆಪಿ ಹೋರಾಟ ಮತ್ತು ಪ್ರತಿಭಟನೆ ಮಾಡಿದೆ ಇದೀಗ ಬಿಜೆಪಿ ಇನ್ನೊಂದು ಟೀಮ್ ಆದಂತಹ ಶಾಸಕ ಬಸನಗೌಡ ಪಾಟೀಲ ಮತ್ತೊಂದು ಟೀಮ್ ರಾಜ್ಯ ಸರ್ಕಾರದ ವಿರುದ್ಧ ಹೋರಾಟ ನಡೆಸುತ್ತಿದೆ. ರಾಜ್ಯ ಹಾಗೂ ದೆಹಲಿ ಮಟ್ಟದಲ್ಲೂ ಬಿಜೆಪಿ ವಕ್ಫ್ ಮಂಡಳಿ ವಿರುದ್ಧ ಹೋರಾಟ ನಡೆಸುತ್ತಿದ್ದರೆ ಅತ್ತ ಮಹಾರಾಷ್ಟ್ರದಲ್ಲಿ ಮಹಾಯುತಿಯು ವಕ್ಫ್ ಮಂಡಳಿಗೆ 10 ಕೋಟಿ ರೂಪಾಯಿ ಅನುದಾನ ನೀಡಿದೆ.

. Ad Widget . Ad Widget

ಮಹಾರಾಷ್ಟ್ರದಲ್ಲಿ ಮಹಾಯುತಿಯು ವಕ್ಫ್ ಮಂಡಳಿಗೆ 10 ಕೋಟಿ ರೂಪಾಯಿ ಅನುದಾನ ಘೋಷಣೆ ಮಾಡಿದೆ. 10 ಕೋಟಿ ರೂಪಾಯಿ ಅನುದಾನ ನೀಡಲು ಮಹಾಯುತಿ ನಿರ್ಧಾರಿಸಿದೆ. ಇತ್ತ ಕರ್ನಾಟಕ ದೆಹಲಿ ಸೇರಿದಂತೆ ಹಲವಡೆ ವಕ್ಫ್ ವಿರುದ್ಧ ಪ್ರತಿಭಟಿಸುತ್ತಿರುವ ಬೆನ್ನಲ್ಲೇ ಮಹಾರಾಷ್ಟ್ರದಲ್ಲಿ ಅನುದಾನ ಘೋಷಣೆ ಮಾಡಲಾಗಿದೆ.

. Ad Widget . . Ad Widget . Ad Widget

ಬಿಜೆಪಿಯ ನೇತೃತ್ವದ ಮಹಾಯುತಿ ಅನುದಾನ ಘೋಷಿಸಿದೆ. ಮಹಾರಾಷ್ಟ್ರದಲ್ಲಿ ಈ ಒಂದು ನಿರ್ಧಾರವು ಕಾಂಗ್ರೆಸ್ ಗೆ ಪ್ರಬಲ ಅಸ್ತ್ರ ವಾಗುವ ಸಾಧ್ಯತೆ ಇದೆ ಎನ್ನಲಾಗಿದೆ ಏಕೆಂದರೆ ಕರ್ನಾಟಕ ಸಿರಿದಂತೆ ದೆಹಲಿ ಮಟ್ಟದವರೆಗೂ ಬಿಜೆಪಿ ನಾಯಕರು ವಕ್ಫ್ ವಿರುದ್ಧ ಪ್ರಬಲವಾದಂತಹ ಹೋರಾಟ ಮಾಡುತ್ತಿದೆ ಹಾಗಾಗಿ ಮಹಾರಾಷ್ಟ್ರದಲ್ಲಿ ಈ ಒಂದು ನಿರ್ಧಾರ ಕಾಂಗ್ರೆಸ್ ಗೆ ಪ್ರಬಲ ಅಸ್ತ್ರವಾಗುವ ಸಾಧ್ಯತೆ ಇದೆ.

Leave a Comment

Your email address will not be published. Required fields are marked *