ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆದ ಯಮುನಾ ಶ್ರೀನಿಧಿ

ಸಮಗ್ರ ನ್ಯೂಸ್: ‘ಬಿಗ್ ಬಾಸ್ ಕನ್ನಡ ಸೀಸನ್ 11’ ಪ್ರಾರಂಭವಾಗಿ ಒಂದು ವಾರ ಕಳೆಯಿತು. ವಿವಿಧ ಟಾಸ್ಕ್ನಲ್ಲಿ ಗುದ್ದಾಡಿ ಎಲಿಮಿನೇಷನ್ನಿಂದ ಬಚಾವ್ ಆಗಲು ಎಲ್ಲರೂ ಪ್ರಯತ್ನಿಸಿದ್ದರು. ಜಗದೀಶ್, ಯಮುನಾ ಶ್ರೀನಿಧಿ, ಹಂಸಾ, ಭವ್ಯಾ, ಗೌತಮಿ, ಚೈತ್ರಾ ಕುಂದಾಪುರ, ಶಿಶಿರ್, ಮಾನಸಾ ಮತ್ತು ಮೋಕ್ಷಿತಾ ಅವರು ಈ ವಾರ ನಾಮಿನೇಟ್ ಆಗಿದ್ದರು. ಆದರೆ ಅಂತಿಮವಾಗಿ ಯಮುನಾ ಶ್ರೀನಿಧಿ ಅವರು ಎಲಿಮಿನೇಟ್ ಆಗಿದ್ದಾರೆ.

. Ad Widget . Ad Widget

ಇದು ಅವರಿಗೆ ಮಾತ್ರವಲ್ಲದೆ ಎಲ್ಲರಿಗೂ ಶಾಕ್ ಎಂದೆ ಹೇಳಬಹುದು. ಅವರು ಮೊದಲ ವಾರ ಹೆಚ್ಚು ಆ್ಯಕ್ಟೀವ್ ಆಗಿದ್ದರೂ ಆದರೂ ಎಲಿಮಿನೇಟ್ ಆಗಿದ್ದಾರೆ. ಇದಾದ ಬಳಿಕ ವೇದಿಕೆಗೆ ಬಂದ ಯಮುನಾ ಅವರು ಸುದೀಪ್ ಜತೆ ಎಲಿಮಿನೇಷನ್ ಬಗ್ಗೆ ಮಾತನಾಡಿದರು. ‘ಇದನ್ನು ನಾನು ನಿರೀಕ್ಷಿಸಿರಲ್ಲ, ಇನ್ನಷ್ಟು ದಿನ ಇರುವಷ್ಟು ಸಾಮರ್ಥ್ಯ ನನ್ನಲ್ಲಿ ಇತ್ತು ಅನಿಸುತ್ತೆ. ಶಿಶಿರ್, ಧರ್ಮ, ತ್ರಿವಿಕ್ರಮ್ ಅವರು ಟಾಪ್ 3 ಸ್ಪರ್ಧಿಗಳಾಗಿರುತ್ತಾರೆ’ ಎಂದು ಹೇಳಿ ಬಿಗ್ ಬಾಸ್ ಆಟಕ್ಕೆ ಯಮುನಾ ವಿದಾಯ ಹೇಳಿದರು. ಅಷ್ಟೇ ಅಲ್ಲದೆ ಯಮುನಾ ಶ್ರೀನಿಧಿ ಅವರಿಗೆ 1 ಲಕ್ಷ ರೂಪಾಯಿ ಚೆಕ್​ ನೀಡಲಾಯಿತು. 

. Ad Widget . . Ad Widget . Ad Widget

Leave a Comment

Your email address will not be published. Required fields are marked *