ಬೆಂಗಳೂರು: ಬಿಎಂಟಿಸಿ ಬಸ್ ಹರಿದು ಬೈಕ್ ಸವಾರ ಸಾವು

ಸಮಗ್ರ ನ್ಯೂಸ್: ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್ ಹರಿದು ಬೈಕ್ ಸವಾರ ಸಾವನ್ನಪ್ಪಿರುವಂತಹ ಘಟನೆ ನಗರದ ಟಾಟಾ ಇನ್ಸ್ಸ್ಟಿಟ್ಯೂಟ್ ಮುಂಭಾಗ ನಡೆದಿದೆ. ಈತ ಫುಲ್ ಹೆಲ್ಮೆಟ್ ಧರಿಸಿದ್ದರೂ ಜೀವ ಉಳಿದಿಲ್ಲ. ಈಶ್ವರ್(43) ಮೃತ ಬೈಕ್ ಸವಾರ. ಬಿಎಂಟಿಸಿ ಬಸ್ ಚಾಲಕರ ನಿರ್ಲಕ್ಷ್ಯಕ್ಕೆ ಬೈಕ್ ಸವಾರರು ಆಕ್ರೋಶ ವ್ಯಕ್ತಪಡಿಸಿದ್ದು, ಯಶವಂತಪುರ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

. Ad Widget . Ad Widget

ಯಲಹಂಕದಿಂದ ಯಶವಂತಪುರಕ್ಕೆ ಬಿಎಂಟಿಸಿ ಬಸ್ ತೆರಳುತ್ತಿದ್ದು, ಈ ವೇಳೆ ಕಾರ್ ಗೆ ಬೈಕ್ ಟಚ್ ಆಗಿ ಕೆಳಗೆಬಿದ್ದ ಈಶ್ವರ್ ತಲೆ ಮೇಲೆ ಬಸ್ ನ ಹಿಂದಿನ ಚಕ್ರ ಹರಿದಿದೆ. ಹೀಗಾಗಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತ ವ್ಯಕ್ತಿ ಈಶ್ವರ್ ವಿದ್ಯಾರಣ್ಯಪುರ ನಿವಾಸಿಯಾಗಿದ್ದು, ಚಿನ್ನ, ಬೆಳ್ಳಿಯ ವ್ಯಾಪಾರ ಮಾಡುತ್ತಿದ್ದರು. ಇಬ್ಬರು ಗಂಡು ಮಕ್ಕಳು ಹೆಂಡತಿಯೊಂದಿಗೆ ವಾಸವಾಗಿದ್ದರು. ಒಬ್ಬ ಮಗನಿಗೆ 13 ವರ್ಷ ಮತ್ತೊಬ್ಬನಿಗೆ 10 ವರ್ಷ. ಸದ್ಯ ಈಶ್ವರ್ ಮೃತದೇಹ ಎಂ.ಎಸ್ ರಾಮಯ್ಯ ಆಸ್ಪತ್ರೆಯ ಶವಗಾರದಲ್ಲಿದೆ. ಪೋಸ್ಟ್ ಮಾರ್ಟಂ ನಂತರ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರ ಮಾಡಲಾಗುತ್ತದೆ.

. Ad Widget . . Ad Widget . Ad Widget

Leave a Comment

Your email address will not be published. Required fields are marked *