ಸಮಗ್ರ ನ್ಯೂಸ್: ಮಾಣಿ – ಮೈಸೂರು ರಾ.ಹೆದ್ದಾರಿಯ ಸುಳ್ಯ ಸಮೀಪದ ಪೆರಾಜೆ ಬಳಿಯ ಕಲ್ಚರ್ಪೆ ಎಂಬಲ್ಲಿ ಸ್ಕೂಟಿ ಮತ್ತು ರಿಕ್ಷಾ ಮಧ್ಯೆ ಅಪಘಾತ ಸಂಭವಿಸಿ ಸ್ಕೂಟಿ ಸವಾರ ಮೃತಪಟ್ಟ ಘಟನೆ ವರದಿಯಾಗಿದೆ.
ರಿಕ್ಷಾ ಶರತ್ ಎಂಬವರದಾಗಿದ್ದು ಸ್ಕೂಟಿ ಸವಾರ ಐಟಿಐ ವಿದ್ಯಾರ್ಥಿ ನವೀನ್ ಎಂದು ತಿಳಿದುಬಂದಿದೆ. ಚೆಂಬು ಗ್ರಾಮದ ಕುದ್ರೆಪಾಯ ಬೊಳ್ಳೂರು ಆನಂದ ಎಂಬವರ ಪುತ್ರ ಮೃತಪಟ್ಟ ದುರ್ದೈವಿ.
ದ್ವಿತೀಯ ವರ್ಷದ ಐಟಿಐ ಪರೀಕ್ಷೆ ಬರೆದಿದ್ದು, ಪರೀಕ್ಷೆ ಫಲಿತಾಂಶ ಬರುವ ಮೊದಲೇ ವಿಧಿ ಬರಹ ಬೇರೆಯಾಗಿತ್ತು. ಈತ ಚೆಂಬು ಗ್ರಾಮದ ಕುದ್ರೆಪಾಯ ಬೊಳ್ಳೂರು ಆನಂದ ಎಂಬವರ ಪುತ್ರ. ನವೀನ್ ತಂದೆ,ತಾಯಿ, ಸಹೋದರ ಹಾಗೂ ಇಬ್ಬರು ಸಹೋದರಿಯರನ್ನು ಅಗಲಿದ್ದಾರೆ.



























