‘ಮಹಾನಟಿ’ಯಾಗಿ‌ ಮೈಸೂರಿನ ಪ್ರಿಯಾಂಕ| ರನ್ನರ್ ಅಪ್ ಆದ‌ ಧನ್ಯಶ್ರೀ

ಸಮಗ್ರ ನ್ಯೂಸ್: ಡ್ರಾಮಾ ಜೂನಿಯರ್ಸ್‌, ಕಾಮಿಡಿ ಕಿಲಾಡಿಗಳು, ಡಿಕೆಡಿ, ಭರ್ಜರಿ ಬ್ಯಾಚುಲರ್ಸ್‌ ಮತ್ತು ಸರಿಗಮಪ ಮೂಲಕ ಈಗಾಗಲೇ ಸಾಕಷ್ಟು ನಟ ನಟಿಯರು, ಗಾಯಕ ಗಾಯಕಿಯರು ಹಾಗೂ ಕೊರಿಯೋಗ್ರಾಫರ್‌ಗಳನ್ನು ಕರುನಾಡಿಗೆ ನೀಡಿರುವ ಜೀ ಕನ್ನಡ, ಇದೀಗ ಮಹಾನಟಿ ಶೋ ಮೂಲಕ ಹೊಸ ಪ್ರತಿಭೆಗಳನ್ನು ನೀಡಿದೆ.

. Ad Widget . Ad Widget

ಇದೀಗ ಮೂರುವರೆ ತಿಂಗಳಿಂದ ಎಲ್ಲರನ್ನು ರಂಜಿಸಿದ ಈ ಶೋ ಕೊನೆಗೊಂಡಿದೆ. ಅದ್ಧೂರಿ ಗ್ರ್ಯಾಂಡ್‌ ಫಿನಾಲೆಯಲ್ಲಿ ಮೈಸೂರಿನಲ್ಲಿ ಪ್ರಿಯಾಂಕಾ ಮಹಾನಟಿ ಸೀಸನ್‌ 1ರ ವಿಜೇತೆಯಾಗಿ ಹೊರಹೊಮ್ಮಿದ್ದಾರೆ. ತರೀಕೆರೆಯ ಧನ್ಯಶ್ರೀ ರನ್ನರ್‌ ಅಪ್‌ ಆಗಿದ್ದಾರೆ.

. Ad Widget . . Ad Widget . Ad Widget

ವಿಜೇತರಿಗೆ 15 ಲಕ್ಷ ಮೌಲ್ಯದ ಚಿನ್ನದ ಕಿರೀಟ ಮುಡಿಗೇರಿದರೆ, ಎರಡನೇ ಸ್ಥಾನ ಪಡೆದ ಧನ್ಯಶ್ರೀಗೆ 10 ಲಕ್ಷ ನಗದು ಬಹುಮಾನ ಸಿಕ್ಕಿದೆ. ಮೂರನೇ ಸ್ಥಾನ ಪಡೆದ ಚಿತ್ರದುರ್ಗದ ಗಗನ, ನಾಲ್ಕನೇ ಸ್ಥಾನ ಪಡೆದ ಆರಾಧನಾ ಭಟ್‌, ಐದನೇ ಸ್ಥಾನ ಶ್ವೇತಾ ಭಟ್‌ಗೆ ತಲಾ ಒಂದು ಲಕ್ಷ ಬಹುಮಾನ ನೀಡಲಾಯಿತು.

Leave a Comment

Your email address will not be published. Required fields are marked *