ಗೀತಾ ಶಿವರಾಜ್ ಕುಮಾರ್ ರ‍್ಯಾಲಿ ವೇಳೆ ಎಲ್ಇಡಿ ಬೋರ್ಡ್ ಕುಸಿದು ನಾಲ್ವರಿಗೆ ಗಾಯ

ಸಮಗ್ರ ನ್ಯೂಸ್: ಎ. 15ರಂದು ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್ ಅವರು ನಾಮಪತ್ರ ಸಲ್ಲಿಸಿ ನಂತರ ರ‍್ಯಾಲಿ ನಡೆಸಿದರು. ಇದೇ ವೇಳೆ ಎಲ್ಇಡಿ ಡಿಸ್ಪ್ಲೇ ಬೋರ್ಡ್ ಕುಸಿದು ಬಿದ್ದು ಖಾಸಗಿ ನ್ಯೂಸ್‌ ಚಾನೆಲ್‌ ವರದಿಗಾರ, ಮಹಿಳೆ ಸೇರಿ ನಾಲ್ವರು ಗಾಯಗೊಂಡಿರುವ ಘಟನೆ ಶಿವಮೊಗ್ಗದ ಗಾಂಧಿ ಬಜಾರ್‌ನಲ್ಲಿ ನಡೆದಿದೆ.

. Ad Widget . Ad Widget

ಏಕಾಏಕಿ ಎಲ್ಇಡಿ ಡಿಸ್ಪ್ಲೇ ಬೋರ್ಡ್ ಬಿದ್ದಿದ್ದು, ಇದರಿಂದ ಮೆರವಣಿಗೆಗೆ ಆಗಮಿಸಿದ ವ್ಯಕ್ತಿಗೆ ತೀವ್ರವಾಗಿ ಪೆಟ್ಟು ಬಿದ್ದು, ತಲೆಯಿಂದ ರಕ್ತ ಸುರಿದಿದೆ. ಗಾಯಾಳುಗಳನ್ನು ಕಂಡು ಕಾಣದಂತೆ ಕಾಂಗ್ರೆಸ್ ಮುಖಂಡರು ತೆರಳಿದ್ದಾರೆ ಎನ್ನಲಾಗಿದ್ದು, ಕಣ್ಣೆದುರೇ ಅನಾಹುತ ಸಂಭವಿಸಿದರೂ ಕ್ಯಾರೆ ಎನ್ನದೆ ಕಾಂಗ್ರೆಸ್ ಮುಖಂಡರು ಮುಂದೆ ತೆರಳಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

. Ad Widget . . Ad Widget . Ad Widget

Leave a Comment

Your email address will not be published. Required fields are marked *