ಮೈಸೂರು : ಬೈಕ್ ತಡೆದು ಪರಿಶೀಲಿಸಿದ್ದಕ್ಕೆ ಸವಾರರು ಸಿಬ್ಬಂದಿಗೆ ಹೊಡೆದು ಪರಾರಿ

ಸಮಗ್ರ ನ್ಯೂಸ್‌ : ಲೋಕಸಭೆ ಚುನಾವಣೆ ಹಿನ್ನೆಲೆ ವಾಹನಗಳ ತಪಾಸಣೆ ನಡೆಸುತ್ತಿದ್ದು, ಈ ವೇಳೆ ಬೈಕ್ ಸವಾರರು ವಾಹನ ತಡೆದು ಪರಿಶೀಲನೆ ನಡೆಸಿದ್ದಕ್ಕೆ ಕೋಪಗೊಂಡು ಸಿಬ್ಬಂದಿಗೆ ಮಾರಣಾಂತಿಕ ಹಲ್ಲೆ ನಡೆಸಿರುವ ಸವಾರರು ಪರಾರಿಯಾದ ಘಟನೆ ಮೈಸೂರು ಜಿಲ್ಲೆಯ ಕೆಆರ್ ನಗರ ತಾಲೂಕಿನ ತಿಪ್ಪೂರು ಗ್ರಾಮದಲ್ಲಿ ಘಟನೆ ನಡೆದಿದೆ.

. Ad Widget . Ad Widget

ಅಬಕಾರಿ ಇಲಾಖೆ ಪೇದೆ ಸಂತೋಷ್ ಹಲ್ಲೆಗೊಳಗಾದ ಸಿಬ್ಬಂದಿ. ತಿಪ್ಪೂರು ಗ್ರಾಮದಲ್ಲಿ ಚುನಾವಣಾ ಕರ್ತವ್ಯಕ್ಕೆ ಸಂತೋಷ್‌ ಅವರನ್ನು ನಿಯೋಜಿಸಲಾಗಿತ್ತು. ಈ ವೇಳೆ ಸಂತೋಷ್‌ ಬೈಕ್‌ ತಡೆದು ಪರಿಶೀಲನೆ ನಡೆಸಲು ಮುಂದಾಗಿದ್ದಾರೆ. ತಪಾಸಣೆಗೆ ಸಹಕರಿಸದೆ ಬೈಕ್ ಸವಾರರು ಗಲಾಟೆ ಮಾಡಿದ್ದಾರೆ.

. Ad Widget . . Ad Widget . Ad Widget

ರಸ್ತೆಯಲ್ಲೇ ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ನಂತರ ಪೇದೆ ಸಂತೋಷ್‌ಗೆ ಮಾರಣಾಂತಿಕ ಹಲ್ಲೆ ಮಾಡಿ ಸವಾರರು ಪರಾರಿಯಾಗಿದ್ದಾರೆ. ಘಟ‌ನೆ ಸಂಬಂಧ ಕೆಆರ್.ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಗಾಯಾಳು ಸಂತೋಷ್‌ಗೆ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆ ಸಂಬಂಧ ನಾಲ್ವರ ವಿರುದ್ಧ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.

Leave a Comment

Your email address will not be published. Required fields are marked *