ವಿಜಯಪುರ:ಮೋದಿ ಮೋಡಿಯಿಂದ ಹೊರ ಬನ್ನಿ – ರಾಜು ಆಲಗುರ

ಸಮಗ್ರ ನ್ಯೂಸ್ : ಮೋದಿ ಮೋಡಿಯಿಂದ ದೇಶ ಹೊರ ಬರಬೇಕು ಎಂದು ಕಾಂಗ್ರೆಸ್ ಪಕ್ಷದ ಲೋಕಸಭೆ ಅಭ್ಯರ್ಥಿ ಪ್ರೊ. ರಾಜು ಆಲಗೂರ ಕರೆ ನೀಡಿದರು.

Ad Widget ... ..

ಅವರು ಬಸವನ ಬಾಗೇವಾಡಿ ತಾಲೂಕಿನ ವಡವಡಗಿಯಲ್ಲಿ ನಡೆದ ಬೃಹತ್ ಪ್ರಚಾರ ಸಭೆಯಲ್ಲಿ ದೇಶ ಹಾಗೂ ವಿಜಯಪುರ ಲೋಕಸಭೆ ಕ್ಷೇತ್ರದ ಇಂದಿನ ಸ್ಥಿತಿ-ಗತಿ ಕುರಿತು ಮತದಾರರಿಗೆ ಮನವರಿಕೆ ಮಾಡಿ ಮಾತನಾಡಿದರು.

Ad Widget

ಮೋದಿಯವರ ಮೋಡಿಯಿಂದ ಹೊರ ಬಂದು ಕಾಂಗ್ರೆಸ್‌ನ್ನು ಬೆಂಬಲಿಸಿದರೆ ನೀವು ನಿಜವಾದ ಪ್ರಗತಿ ಹೊಂದಲು ಸಾಧ್ಯ. ಸುಳ್ಳಿನ ಭರವಸೆಗಳಿಂದ ಮೋಸ ಹೋಗಬೇಡಿ. ಸಭೆಯಲ್ಲಿ ನೂರಾರು ಸಂಖ್ಯೆಯ ಮಹಿಳೆಯರು ಭಾಗವಹಿಸಿದ್ದರು. ಅವರನ್ನು ಉದ್ದೇಶಿಸಿ, ಸಿದ್ದರಾಮಯ್ಯರ ರಾಜ್ಯ ಸರಕಾರದ ಗ್ಯಾರಂಟಿ ಯೋಜನೆಗಳಿಂದ ಹೆಣ್ಣುಮಕ್ಕಳು ತೃಪ್ತರಾಗಿದ್ದು, ಅವರೆಲ್ಲ ಕಾಂಗ್ರೆಸ್ ಪರವಾದ ಒಲುವು ವ್ಯಕ್ತಪಡಿಸುತ್ತಿದ್ದಾರೆ. ಮುಂದೆ ಕೇಂದ್ರದಲ್ಲೂ ಕಾಂಗ್ರೆಸ್ ಅಧಿಕಾರ ಹಿಡಿದರೆ ಅಲ್ಲಿಯೂ ಗ್ಯಾರಂಟಿಗಳ ಭಾಗ್ಯ ಜಾರಿಯಾಗಿ ಜನಸಾಮಾನ್ಯರ ಬದುಕು ಹಗುರವಾಗಲಿದೆ ಎಂದು ಭರವಸೆ ನೀಡಿದರು.

ಮಾಜಿ ಶಾಸಕ ಶರಣಪ್ಪ ಸುಣಗಾರ, ಮುಖಂಡರಾದ ಬಿ.ಎಸ್. ಪಾಟೀಲ ಯಾಳಗಿ, ಬಾಪೂಗೌಡ. ಎಂ. ಪಾಟೀಲ, ಆನಂದ ದೊಡ್ಡಮನಿ, ಡಾ. ಪ್ರಭುಗೌಡ. ಪಾಟೀಲ, ಸೋಮನಾಥ್ ಕಳ್ಳಿಮನಿ, ರಮೀಜಾ ನದಾಫ್, ಗೌರಮ್ಮ ಮುತ್ತತ್ತಿ, ಸುಜಾತ ಕಳ್ಳಿಮನಿ, ಸರಿತಾ ನಾಯಕ್, ಸಾಯಿಕುಮಾರ್ ಬಿಸನಾಳ, ಸಂಗನಗೌಡ. ಹಾರನಾಳ, ಬಶೀರ್ ಬೇಪಾರಿ, ಬಾಳಾಸಾಹೇಬಗೌಡ ಪಾಟೀಲ ಬುದ್ನಿ, ಮುಜಾವರ ರಮ್ಜಾನ್, ಪ್ರಕಾಶ ಗುಡಿಮನಿ ಅನೇಕರಿದ್ದರು.

Leave a Comment

Your email address will not be published. Required fields are marked *