ಜೈಪುರ: ಭಾರತ ಭೂ ಪ್ರದೇಶದೊಳಗೆ ಚೀನಾ ನುಗ್ಗುತ್ತಿರುವಾಗ ಮೋದಿ ನಿದ್ರಿಸುತ್ತಿದ್ದಾರೆ; ಖರ್ಗೆ

ಸಮಗ್ರ ನ್ಯೂಸ್‌ : ಭಾರತದ ಭೂ ಪ್ರದೇಶದೊಳಗೆ ಚೀನಾ ನುಗ್ಗುತ್ತಿರುವ ಹೊತ್ತಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ನಿದ್ರಿಸುತ್ತಿದ್ದಾರೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದ್ದಾರೆ.

Ad Widget ... ..

ಅವರು ರಾಜಸ್ಥಾನದ ಚಿತ್ತೋರಗಢದಲ್ಲಿ ನಡೆದ ಚುನಾವಣಾ ರ‍್ಯಾಲಿಯಲ್ಲಿ ಮಾತನಾಡಿ, ಮೋದಿ ಸುಳ್ಳಿನ ಸರದಾರ ಅವರು 56 ಇಂಚಿನ ಎದೆ ಹೊಂದಿರುವುದಾಗಿ ಹಾಗೂ ಯಾರಿಗೂ ಹೆದರುವುದಿಲ್ಲ ಎಂದು ಹೇಳುತ್ತಾರೆ. ಹೆದರಲ್ಲ ಎಂದಮೇಲೆ, ನಮ್ಮ ಬಹುದೊಡ್ಡ ಭೂ ಭಾಗವನ್ನು ಚೀನಾಗೆ ಬಿಟ್ಟುಕೊಟ್ಟಿರುವುದು ಏಕೆ? ಅವರು ಒಳಗೆ ನುಗ್ಗುತ್ತಿದ್ದಾರೆ. ನೀವು ನಿದ್ರಿಸುತ್ತಿದ್ದೀರಿ. ನಿದ್ರೆ ಮಾತ್ರೆ ತೆಗೆದುಕೊಂಡಿದ್ದೀರಾ?’ ಎಂದರು,

Ad Widget

1989ರಿಂದ ಗಾಂಧಿ ಕುಟುಂಬದ ಯಾರೊಬ್ಬರೂ ಪ್ರಧಾನಿಯಾಗಿಲ್ಲ. ಗಾಂಧಿ ಕುಟುಂಬದ ವಿರುದ್ಧ ಮೋದಿ ಅವರು ಕುಟುಂಬ ರಾಜಕಾರಣದ ಆರೋಪ ಮಾಡುತ್ತಾರೆ. ಮೋದಿ ಅವರು ವಿದೇಶಗಳನ್ನು ಸುತ್ತಿದ್ದಾರೆ, ಲೋಕಸಭೆ ಚುನಾವಣೆ ಹೊತ್ತಿನಲ್ಲಿ ದೇಶದಾದ್ಯಂತ ಸಂಚರಿಸುತ್ತಿದ್ದಾರೆ. ವ್ಯಾಪಕ ಹಿಂಸಾಚಾರಕ್ಕೆ ಸಾಕ್ಷಿಯಾದ ಮಣಿಪುರಕ್ಕೆ ಹೋಗಲು ಅವರಿಗೆ ಸಾಧ್ಯವಾಗಿಲ್ಲ ಎಂದರು.

Leave a Comment

Your email address will not be published. Required fields are marked *