ಬಂಟ್ವಾಳ: 4.65 ಲಕ್ಷ ರೂ. ಕಳೆದುಕೊಂಡ ಆಟೋ ಚಾಲಕ

ಸಮಗ್ರ ನ್ಯೂಸ್‌ : ಹೆಚ್ಚಿನ ಲಾಭ ಗಳಿಸುವ ಉದ್ದೇಶದಿಂದ ಆ್ಯಪ್‌ ಬಳಸಿ ವಿವಿಧ ಖಾತೆಗಳಿಗೆ ಹಣ ಹೂಡಿಕೆ ಮಾಡಿ ಆಟೋ ಚಾಲಕನೋರ್ವ 4.65 ಲಕ್ಷ ರೂ.ಗಳನ್ನು ಕಳೆದುಕೊಂಡ ಘಟನೆ ಸರಪಾಡಿ ಗ್ರಾಮದಲ್ಲಿ ನಡೆದಿದೆ.

. Ad Widget . Ad Widget

ಆಟೋ ರಿಕ್ಷಾ ಚಾಲಕ ಹರೀಶ್‌ಕುಮಾರ್‌ ಹಣ ಕಳೆದುಕೊಂಡ ವ್ಯಕ್ತಿ. ಅವರ ಮೊಬೈಲ್‌ಗೆ ಕಳೆದ ಡಿ. 20ರಂದು ಸೂಚನೆಯೊಂದು ಬಂದಿದ್ದು, ಅದರಂತೆ ಅವರು ನಮ್‌ಜೀನಿಯಸ್‌ ಎ1 ಆ್ಯಪ್‌ ಡೌನ್‌ಲೋಡ್‌ ಮಾಡಿದ್ದರು. ಬಳಿಕ ಆ್ಯಪ್‌ ಮೂಲಕ ಹಣ ಹೂಡಿಕೆ ಮಾಡಿ ಲಾಭ ಗಳಿಸುವ ಉದ್ದೇಶದಿಂದ ಅಪರಿಚಿತರು ವಾಟ್ಸ್‌ಆಪ್‌ನಲ್ಲಿ ಸೂಚಿಸಿದ ವಿವಿಧ ಖಾತೆಗಳಿಗೆ ಹಂತ ಹಂತವಾಗಿ ಒಟ್ಟು 5,85,200 ರೂ.ಗಳನ್ನು ವರ್ಗಾಯಿಸಿದ್ದರು.

. Ad Widget . . Ad Widget . Ad Widget

ಅದರಲ್ಲಿ ಹರೀಶ್‌ ಅವರಿಗೆ 1,20,175 ರೂ.ಗಳನ್ನು ಹಿಂದಿರುಗಿಸಲಾಗಿದ್ದು, ಉಳಿದ ಬಾಕಿ ಮೊತ್ತ 4,65,025 ರೂ.ಗಳನ್ನು ಹಿಂದಿರುಗಿಸದೇ ಮೋಸ ಮಾಡಿದ್ದಾರೆ ಎಂದು ಪೊಲೀಸ್‌ ದೂರಿನಲ್ಲಿ ತಿಳಿಸಿದ್ದಾರೆ. ಬಂಟ್ವಾಳ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ

Leave a Comment

Your email address will not be published. Required fields are marked *