ತಮಿಳುನಾಡಿಗೆ ಕಳ್ಳತನದಿಂದ ಕಾವೇರಿ ನೀರು ರಿಲೀಸ್: ಬಿಜೆಪಿಯಿಂದ ಕಿಡಿ

ಸಮಗ್ರ ನ್ಯೂಸ್: ರಾಜ್ಯದಲ್ಲಿ ಕುಡಿಯುವ ನೀರಿನ ಸಮಸ್ಯೆ ಬಹಳ ಇದ್ದು. ರಾಜ್ಯದ ಜನರು ತತ್ತರಿಸಿ ಹೋಗಿದ್ದಾರೆ. ಈ ಸಮಸ್ಯೆಯಿದ್ದರೂ ರಾಜ್ಯ ಸರ್ಕಾರ ತಮಿಳುನಾಡಿಗೆ ಕಳ್ಳತನದಿಂದ ಕಾವೇರಿ ನೀರು ಹರಿಸುತ್ತಿದೆ ಎಂದು ಪ್ರತಿಪಕ್ಷ ಬಿಜೆಪಿ ಕಿಡಿಕಾರಿದೆ. ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ವಿಡಿಯೋ ಹಂಚಿಕೊಂಡಿರುವ ಬಿಜೆಪಿ, ಬೆಂಗಳೂರಿನಲ್ಲಿ ಕುಡಿಯುವ ಹನಿ ನೀರು ಕೂಡಾ ಸಿಗುತ್ತಿಲ್ಲ. ಆದರೆ ನಾಡದ್ರೋಹಿ ಕಾಂಗ್ರೆಸ್ ತಮಿಳುನಾಡಿಗೆ ಮಾತ್ರ ಕಳ್ಳತನದಿಂದ ಕಾವೇರಿ ನೀರು ಹರಿಸುತ್ತಿದೆ ಎಂದು ಟೀಕಿಸಿದೆ.

. Ad Widget . Ad Widget . Ad Widget

ತಮಿಳುನಾಡಿನ ಮೆಟ್ಟೂರು ಜಲಾಶಯ ತುಂಬಿ ತುಳುಕುತ್ತಿದ್ದರೂ, ಬೆಂಗಳೂರಿನಲ್ಲಿ ಟ್ಯಾಂಕರ್ ಮಾಫಿಯಾವನ್ನು ಯಶಸ್ವಿಗೊಳಿಸಲು ಇರುವ ಕಾವೇರಿಯ ಒಡಲನ್ನು ಬಗೆಯುತ್ತಿದೆ ನಾಡ ದ್ರೋಹಿ ಕಾಂಗ್ರೆಸ್. ಮಜಾವಾದಿ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಅವರೇ ಇದೇನಾ ನೀವು ಕನ್ನಡಿಗರಿಗೆ ಕೊಡುತ್ತಿರುವ ನಾಡ ದ್ರೋಹದ ಗ್ಯಾರಂಟಿ ಎಂದು ಪ್ರಶ್ನಿಸಿದೆ.

. Ad Widget .

Leave a Comment

Your email address will not be published. Required fields are marked *