ಸುಮಲತಾ ಪರ ಈ ಬಾರಿಯು ದರ್ಶನ್ ಪ್ರಚಾರ​: ಹೆತ್ತ ತಾಯಿನ ಬಿಟ್ಟು ಕೊಡೋಕಾಗುತ್ತಾ ಎಂದ ದರ್ಶನ

ಸಮಗ್ರ ನ್ಯೂಸ್: ಇಂದು ದಕ್ಷಿಣಕನ್ನಡ ಜಿಲ್ಲೆಯ ಕುತ್ತಾರುವಿನ ಕೊರಗಜ್ಜ ಕ್ಷೇತ್ರಕ್ಕೆ ನಟ ದರ್ಶನ್ ಭೇಟಿ ಕೊಟ್ಟಿದ್ದಾರೆ. ದರ್ಶನ್ ಅವರು ಕೊರಗಜ್ಜನ ಆದಿಸ್ಥಳ ಕುತ್ತಾರುವಿಗೆ ಇದೇ ಮೊದಲಬಾರಿಗೆ ಭೇಟಿ ಕೊಟ್ಟಿರುವುದು ವಿಶೇಷವಾಗಿದೆ. ಈ ವೇಳೆ ಮಾತನಾಡಿದ ಅವರು, ಮಂಗಳೂರಿಗೆ ಸುಮಾರು ಸಲ ಬಂದಿದ್ದೆ ಆದರೆ ಕುತ್ತಾರಿಗೆ ಬರಲು ಆಗಿರಲಿಲ್ಲ. ಕುತ್ತಾರು ಏನು ಡಿಫರೆನ್ಸ್ ಇಲ್ಲ ಎಲ್ಲ ದೇವಸ್ಥಾನ ಒಂದೇ. ಎಲ್ಲರು ಈ ಕ್ಷೇತ್ರದ ಬಗ್ಗೆ ಹೇಳುತ್ತಿದ್ದರು. ಹೀಗಾಗಿ ಭೇಟಿ ನೀಡಿ ಪ್ರಾರ್ಥಿಸಿದ್ದೇನೆ. ನಾನು ಭೇಟಿ ನೀಡಿದಕ್ಕೆ ಯಾವುದೇ XYZ ಕಾರಣ ಇಲ್ಲ ಎಂದರು.

. Ad Widget . Ad Widget

ಇದೇ ಸಂಧರ್ಭದಲ್ಲಿ ರಾಜಕೀಯ ವಿಚಾರವಾಗಿ ಮಾತನಾಡಿದ ನಟ ದರ್ಶನ್ ಹೆತ್ತ ತಾಯಿನ ಬಿಟ್ಟು ಕೊಡೋಕಾಗುತ್ತಾ ಎಂದು ಹೇಳುವ ಮೂಲಕ ಸಂಸದೆ ಸುಮಲತಾ ಅಂಬರೀಶ್ ಪರವಾಗಿ ಪ್ರಚಾರ ಮಾಡುತ್ತೇನೆ ಎಂದು ಪರೋಕ್ಷವಾಗಿ ಹೇಳಿದರು. ಮೊನ್ನೆವರೆಗೂ ಸುಮಲತಾ ಅಮ್ಮನ ಜೊತೆ ಇದ್ದೆ. ಈಗ ಅಮ್ಮನ ಕೈಬಿಟ್ಟರೆ ಆಗುತ್ತಾ ಎಂದು ಮಾಧ್ಯಮಗಳ ಜೊತೆ ಹೇಳಿಕೆ ನೀಡಿದ್ದಾರೆ.

. Ad Widget . . Ad Widget . Ad Widget

Leave a Comment

Your email address will not be published. Required fields are marked *