ಲೋಕಸಭಾ ಚುನಾವಣೆ ಸ್ಪರ್ಧೆ ಖಚಿತ – ಸತ್ಯಜಿತ್ ಸುರತ್ಕಲ್

ಸಮಗ್ರ ನ್ಯೂಸ್: 15 ವರ್ಷದ ಹಿಂದೆ ನನಗೆ ಬಿಜೆಪಿಯಿಂದ ಸಿಗಬೇಕಾದ ಲೋಕಸಭಾ ಟಿಕೆಟ್‌ ಕಸಿಯಲಾಗಿತ್ತು. ಈಗ ಅದನ್ನು ಮತ್ತೆ ಕೊಡಿ ಎಂದು ಕೇಳುವುದು ನನ್ನ ಹಕ್ಕು. ಈ ಸಲದ ಲೋಕಸಭಾ ಚುನಾವಣೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾರ್ಯಕರ್ತರ ಅಭಿಲಾಷೆಯಂತೆ ಸ್ಪರ್ಧಿಸುವುದು ಖಚಿತ ಎಂದು ಸತ್ಯಜಿತ್ ಸುರತ್ಕಲ್ ಹೇಳಿದ್ದಾರೆ.

. Ad Widget . Ad Widget . Ad Widget .

ಟೀಂ ಸತ್ಯಜಿತ್ ಸುರತ್ಕಲ್ ದ.ಕ. ಜಿಲ್ಲೆ ವತಿಯಿಂದ ತುಂಬೆ ಬ್ರಹ್ಮರಕೂಟ್ಲು ಬಂಟರ ಭವನದಲ್ಲಿ ಭಾನುವಾರ ನಡೆದ ಸತ್ಯಜಿತ್ ಸುರತ್ಕಲ್ ಅವರಿಗೆ ಬಿಜೆಪಿ ಲೋಕಸಭಾ ಚುನಾವಣೆಗೆ ದಕ್ಷಿಣ ಕನ್ನಡ ಜಿಲ್ಲೆಯಿಂದ ಸ್ಪರ್ಧಿಸಲು ಅವಕಾಶ ನೀಡುವಂತೆ ಆಗ್ರಹಿಸಿ ನಡೆದ ಜನಾಗ್ರಹ ಸಮಾವೇಶದಲ್ಲಿ ಅವರು ಮಾತನಾಡಿದರು.

. Ad Widget . Ad Widget . Ad Widget . Ad Widget . Ad Widget . Ad Widget . . Ad Widget . Ad Widget . Ad Widget . Ad Widget .

ನಾನು ಕಳೆದ ೩೭ ವರ್ಷದಿಂದ ಹಿಂದೂ ಸಂಘಟನೆಯಲ್ಲಿ ದುಡಿದಿದ್ದೇನೆ, ಕಾರ್ಯಕರ್ತರಲ್ಲಿ ಒಬ್ಬನಾಗಿ ದುಡಿದಿದ್ದೇನೆ, ಕಾರ್ಯಕರ್ತರನ್ನು ಬಿಟ್ಟು ಸತ್ಯಜಿತ್ ಇಲ್ಲ. ಸಂಘಟನೆಯ ಹೋರಾಟದಲ್ಲಿ ಕಾರ್ಯಕರ್ತರ ಧ್ವನಿಯಾಗಿ ಕೆಲಸವನ್ನು ಮಾಡಿದ್ದೇನೆ. ಇದರಿಂದ ನಾನು ಈ ಹಂತಕ್ಕೆ ಬಂದಿದ್ದೇನೆ. ಸತ್ಯಜಿತ್ ಭಾವನಾತ್ಮಕ ಜೀವಿಯಾಗಿದ್ದರೂ ಮುಂದೆ ಇಟ್ಟ ಹೆಜ್ಜೆ ಹಿಂದೆ ಇಡುವುದಿಲ್ಲ ಎಂದು ತಿಳಿಸಿದರು.

ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಈ ಹಿಂದೆ ನನಗೆ ಚುನಾವಣೆಯಲ್ಲಿ ನಿಲ್ಲುವ ಭರವಸೆ ನೀಡಿದ್ದರು. ಕಳೆದ ೫ ವರ್ಷದಿಂದ ಅವರಿಂದ ಯಾವುದೇ ಮಾತಿಲ್ಲ. ನನಗೆ ವೈಯಕ್ತಿಕವಾಗಿ ಯಾವುದೂ ಬೇಡ. ಈಗ ನಾನು ರಾಜಕೀಯ ಮತ್ತು ಸಾಮಾಜಿಕ ಬಲಿದಾನಕ್ಕೆ ಸಿದ್ಧನಾಗಿದ್ದೇನೆ ಎಂದು ತಿಳಿಸಿದರು.

Leave a Comment

Your email address will not be published. Required fields are marked *