ಸಮಗ್ರ ನ್ಯೂಸ್: ಇತಿಹಾಸ ಪ್ರಸಿದ್ದ ಐವರ್ನಾಡು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಪ್ರತಿಷ್ಠಾ ವಾರ್ಷಿಕೋತ್ಸವವು ಬ್ರಹ್ಮಶ್ರೀ ವೇದಮೂರ್ತಿ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ವಿವಿಧ ಧಾರ್ಮಿಕ , ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ ನಡೆಯುತ್ತಿದೆ. ಇಂದು ಬೆಳಿಗ್ಗೆ ಕೊಯಿಲ ಉಳ್ಳಾಕುಲು ದೈವಗಳ ಭಂಡಾರ ಆಗಮನದ ಬಳಿಕ ಶ್ರೀ ದೇವರ ಬಲಿ ಹೊರಟು ಉತ್ಸವ ನಡೆಯಿತು.ಬಳಿಕ ದರ್ಶನ ಬಲಿ ,ಬಟ್ಟಲು ಕಾಣಿಕೆ ನಡೆಯಿತು.
ದರ್ಶನಬಲಿ ಬಳಿಕ ಶುದ್ಧಿ ಕಲಶ,ಮಹಾಪೂಜೆ,ವೈದಿಕ ಮಂತ್ರಾಕ್ಷತೆ, ಪ್ರಸಾದ ವಿತರಣೆ,ಭಕ್ತಾದಿಗಳಿಗೆ ಅನ್ನಸಂತರ್ಪಣೆ ನಡೆಯಿತು. ಇಂದು(ಫೆ.10) ರಾತ್ರಿ ಗಂಟೆ 10.00 ರಿಂದ ಕ್ಷೇತ್ರದ ಪರಿವಾರ ದೈವಗಳ ನರ್ತನಸೇವೆ ನಡಾವಳಿ ನಡೆಯಲಿದೆ

















