ಪಾರಾದೀಪ್ ಪಾಸ್ಪೇಟ್ಸ್ ಲಿಮಿಟೆಡ್ ಪಣಂಬೂರು ಇವರ ವತಿಯಿಂದ ಜಸ್ಟಿಸ್ ಕೆ ಎಸ್ ಹೆಗ್ಡೆ ಹಾಸ್ಪಿಟಲ್ ದೇರಳ ಕಟ್ಟೆ , ಮಾತೃಭೂಮಿ ಯುವ ವೇದಿಕೆ ಮಾಣಿಲ ಸಂಘದ ಸಹಯೋಗದಲ್ಲಿ ಉಚಿತ ನೇತ್ರ ತಪಾಸಣಾ ಶಿಬಿರ 

ಸಮಗ್ರ ನ್ಯೂಸ್: ಪಾರಾದೀಪ್ ಪಾಸ್ಪೇಟ್ಸ್ ಲಿಮಿಟೆಡ್ ಪಣಂಬೂರು, ಮಂಗಳೂರು ಇವರ ವತಿಯಿಂದ ಜಸ್ಟಿಸ್ ಕೆ ಎಸ್ ಹೆಗ್ಡೆ ಹಾಸ್ಪಿಟಲ್ ದೇರಳ ಕಟ್ಟೆ ಮತ್ತು ಮಾತೃಭೂಮಿ ಯುವ ವೇದಿಕೆ (ರಿ.) ಮಾಣಿಲ ಸಂಘದ ಸಹಯೋಗದಲ್ಲಿ ಆ.4 ರಂದು ಉಚಿತ ನೇತ್ರ ತಪಾಸಣಾ ಶಿಬಿರವು ಮಾಣಿಲ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಮುರುವ ಇಲ್ಲಿ ಯಶಸ್ವಿಯಾಗಿ ನಡೆಯಿತು. 

. Ad Widget . Ad Widget . Ad Widget

. Ad Widget .

ಶಿಬಿರವನ್ನು ಮಾಣಿಲ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಮುರುವ ಇಲ್ಲಿನ ಶಾಲಾ ಸಂಚಾಲಕರಾದ ನಡುಮನೆ ಶ್ರೀ ಮಹಾಬಲ ಭಟ್ ಉದ್ಘಾಟಿಸಿದರು. ಪಾರಾದೀಪ್ ಪಾಸ್ಪೇಟ್ಸ್ ಲಿಮಿಟೆಡ್ ಪಣಂಬೂರು, ಮಂಗಳೂರು ಸಂಸ್ಥೆಯ ಸಮಾಜ ಸೇವೆಯನ್ನು ಶ್ಲಾಘಿಸಿ  ಜಸ್ಟಿಸ್ ಕೆ ಎಸ್ ಹೆಗ್ಡೆ ಹಾಸ್ಪಿಟಲ್ ದೇರಳ ಕಟ್ಟೆ ಇವರು ಶಿಬಿರವನ್ನು ನಡೆಸಿಕೊಡುವುದರ ಬಗ್ಗೆ ಅಭಿನಂದಿಸಿದರು. 

ಈ ಸಂದರ್ಭದಲ್ಲಿ  ಕೆಎಸ್ ಹೆಗ್ಡೆ ಆಸ್ಪತ್ರೆ ದೇರಳಕಟ್ಟೆ ಇದರ ಕಣ್ಣಿನ ವಿಭಾಗದ ಮುಖ್ಯಸ್ಥರಾದ ಶ್ರೀ ರಿಷಿಕೇಶ್ ಅಮೀನ್, ಪಾರಾದೀಪ್ ಪಾಸ್ಪೇಟ್ಸ್ ಲಿಮಿಟೆಡ್ (ಪಣಂಬೂರು) ಮಂಗಳೂರು ಇದರ ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥರಾದ ಶ್ರೀ ಚೇತನ್ ಮೆಂಡೋನ್ಜಾ ಹಾಗೂ ಮಾಣಿಲ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಮುರುವ ಇಲ್ಲಿನ ಮುಖ್ಯೋಪಾಧ್ಯಾಯರಾದ ಶ್ರೀ ದಯಾನಂದ ನಾಯಕ್ ಉಪಸ್ಥಿತರಿದ್ದರು.

ಪಾರಾದೀಪ್ ಪಾಸ್ಪೇಟ್ಸ್ ಲಿಮಿಟೆಡ್  (ಪಣಂಬೂರು) ಮಂಗಳೂರು ಇದರ ವೈದ್ಯಾಧಿಕಾರಿ ಡಾ ಯೋಗೀಶ್ ಭಟ್ ಅವರು ನೇತ್ರ ತಪಾಸಣಾ ಶಿಬಿರದ ಮಾಹಿತಿಯನ್ನು ನೀಡಿ ಸ್ವಾಗತಿಸಿದರು, ರಂಜಿತ್ ಕುಮಾರ್ ಕೆ ಕಾರ್ಯಕ್ರಮವನ್ನು ನಿರೂಪಿಸಿದರು.

Leave a Comment

Your email address will not be published. Required fields are marked *