ಉಜಿರೆ: ಬಸ್ ಗೆ ಕಾಯುತ್ತಿದ್ದವರ ಮೇಲೆ ಹರಿದ ಯಮಸ್ವರೂಪಿ ಲಾರಿ| ಇಬ್ಬರು ಸ್ಥಳದಲ್ಲೇ ಸಾವು

ಸಮಗ್ರ ನ್ಯೂಸ್: ಬಸ್ ಗೆ ಕಾಯುತ್ತಿದ್ದ ಇಬ್ಬರ ಮೇಲೆ ಲಾರಿಯೊಂದು ಹರಿದ ಪರಿಣಾಮ ಇಬ್ಬರು ಸ್ಥಳದಲ್ಲೇ ಸಾವನಪ್ಪಿದ ಘಟನೆ ಬೆಳ್ತಂಗಡಿ ತಾಲೂಕಿನ ಉಜಿರೆ ಸಮೀಪದ ಗಾಂಧಿ ನಗರ ಬಳಿ ನಡೆದಿದೆ.

. Ad Widget . Ad Widget

ಉಜಿರೆ ಸಮೀಪದ ಗಾಂಧಿ ನಗರ ತಿರುವು ಬಳಿ ಬಸ್ ಗಾಗಿ ಪುರುಷ ಹಾಗೂ ಮಹಿಳೆ ರಸ್ತೆ ಬದಿ ನಿಂತಿದ್ದ ವೇಳೆ ಉಜಿರೆ ಕಡೆಯಿಂದ ತಿರುವಿನಲ್ಲಿ ಅತೀ ವೇಗವಾಗಿ ಬಂದ ಲಾರಿ ಇಬ್ಬರಿಗೆ ಡಿಕ್ಕಿ ಹೊಡೆದದ್ದಲ್ಲದೆ ವಿದ್ಯುತ್ ಕಂಬ ಸಮೀಪದ ಕಟ್ಟಡಕ್ಕೆ ಹಾನಿಯುಂಟಾಗಿದೆ.

. Ad Widget . . Ad Widget . Ad Widget

ಮೃತಪಟ್ಟ ಪುರುಷ ವ್ಯಕ್ತಿಯನ್ನು ಉಜಿರೆ ನಿವಾಸಿ ಕಿಟ್ಟು ಎನ್ನಲಾಗಿದ್ದು, ಉಳಿದಂತೆ ಮತ್ತೋರ್ವನ ಮಾಹಿತಿ ತಿಳಿದುಬಂದಿಲ್ಲ.

Leave a Comment

Your email address will not be published. Required fields are marked *