ಮದುವೆ ನಡೆಯುತ್ತಿರುವಾಗಲೇ ಮಾಜಿ ಪ್ರೇಯಸಿಯ ಹೈಡ್ರಾಮ| ಬೇರೊಬ್ಬಳಿಗೆ ತಾಳಿ ಕಟ್ಟಿ ವರ ಎಸ್ಕೇಪ್

ಸಮಗ್ರ ನ್ಯೂಸ್: ತನ್ನಗೆ ಮೋಸ ಮಾಡಿ ಬೇರೊಬ್ಬಳೊಂದಿಗೆ ಮದುವೆಯಾಗುತ್ತಿದ್ದಾಗ ಕಲ್ಯಾಣ ಮಂಟಪಕ್ಕೆ ಪೊಲೀಸರೊಂದಿಗೆ ಎಂಟ್ರಿಕೊಟ್ಟ ಮಾಜಿ ಪ್ರೇಯಸಿ ಜಗಳವಾಡಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲದ ಬೀರಿ ಬಳಿ ನಡೆದಿದೆ. ಕೇರಳ ಮೂಲದ ಅಕ್ಷಯ್ ಎಂಬಾತನ ಮದುವೆ ಮಂಗಳೂರು ಮೂಲದ ಯುವತಿ ಜೊತೆ ನಡೆಯುತ್ತಿದ್ದಾಗ ಮೈಸೂರು ಮೂಲದ ಮಾಜಿ ಪ್ರೇಯಸಿ ಕಲ್ಯಾಣ ಮಂಟಪಕ್ಕೆ ಎಂಟ್ರಿಕೊಟ್ಟು ಹೈಡ್ರಾಮ ನಡೆಸಿದ್ದಾಳೆ.

. Ad Widget . Ad Widget . Ad Widget .

ಕೇರಳದ ಕೊಝಿಕ್ಕೋಡ್ ಮೂಲದ ಅಕ್ಷಯ್ ಒಂದೂವರೆ ವರ್ಷದ ಹಿಂದೆ ಮೈಸೂರಿನ ಯುವತಿಯನ್ನು ಶಾದಿ ಡಾಟ್ ಕಾಮ್ ಮೂಲಕ ಪರಿಚಯ ಮಾಡಿಕೊಂಡಿದ್ದನು. ನಂತರ ವಿವಾಹವಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ನಡೆಸಿದ್ದಾನೆ. ನಂತರ ಪ್ರೆಗ್ನೆಂಟ್ ಅಂತಾ ಗೊತ್ತಾಗಿದ್ದಾಗೆ ಮೈಸೂರಲ್ಲಿ ಅಬಾರ್ಷನ್ ಮಾಡಿಸಿದ್ದಾನೆ. ಆ ನಂತರ ವರಸೆ ಬದಲಾಯಿಸಿದ್ದಾನೆ. ಡಿಸೆಂಬರ್ 26 ರಂದು ಅಕ್ಷಯ್ ವಿರುದ್ಧ ಕೇರಳದ ಪೊಲೀಸ್ ಠಾಣೆಯಲ್ಲಿ ಅತ್ಯಾಚಾರದ ದೂರು ದಾಖಲಿಸಿದ್ದಾಳೆ. ಪ್ರಕರಣ ಸಂಬಂಧ ಅರೋಪಿ ಅಕ್ಷಯ್​ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ನ್ಯಾಯಾಲಯವು ವಜಾಗೊಳಿಸಿತ್ತು. ಈ ನಡುವೆ ಮಂಗಳೂರಿನ ಯುವತಿ ಜೊತೆ ಅಕ್ಷಯ್​ಗೆ ವಿವಾಹ ನಿಶ್ಚಯವಾಗಿದೆ. ಕರ್ನಾಟಕದ-ಕೇರಳ ಗಡಿಭಾಗ ಬೀರಿಯ ಖಾಸಗಿ ಹಾಲ್​ನಲ್ಲಿ ಮದುವೆ ನಡೆಯುತ್ತಿರುವ ವಿಚಾರ ತಿಳಿದು ಉಳ್ಳಾಲ ಪೊಲೀಸರೊಂದಿಗೆ ಆಗಮಿಸಿ ಹಾಲ್​ ಮುಂಭಾಗದಲ್ಲಿ ಹೈಡ್ರಾಮ ನಡೆಸಿದ್ದಾಳೆ.

. Ad Widget . Ad Widget . Ad Widget . Ad Widget . Ad Widget . Ad Widget . . Ad Widget . Ad Widget . Ad Widget . Ad Widget .

ಮಂಗಳೂರು ಯುವತಿಗೆ ತಾಳಿ ಕಟ್ಟಿದ ಅಕ್ಷಯ್ ಕಿಡ್ನಿ ಸ್ಟೋನ್ ಆಗಿದೆ ಆಸ್ಪತ್ರೆ ದಾಖಲಾಗ್ತಿನಿ ಎಂದು ಎಸ್ಕೇಪ್ ಆಗಿದ್ದಾನೆ.

Leave a Comment

Your email address will not be published. Required fields are marked *