ಐಷಾರಾಮಿ ಬಸ್ ಬೆಂಕಿಗಾಹುತಿ| ಓರ್ವ ಸಜೀವ ದಹನ

ಸಮಗ್ರ ನ್ಯೂಸ್: ಖಾಸಗಿ ಟ್ರಾವೆಲ್ಸ್ ಗೆ ಸೇರಿದ ಐಷಾರಾಮಿ ಬಸ್ ಭಸ್ಮಗೊಂಡ ಘಟನೆ ಆಂಧ್ರ ಪ್ರದೇಶದ ನಲ್ಲಗೊಂಡ-ಮರಿಗೂಡ ಬೈಪಾಸ್ ರಸ್ತೆ ಬಳಿ ಸಂಭವಿಸಿದೆ.

. Ad Widget . Ad Widget . Ad Widget .

ಶಾಕ್ ಸರ್ಕ್ಯೂಟ್‌ನಿಂದ ಬೆಂಕಿ ಕಾಣಿಸಿಕೊಂಡಿದೆ ಎನ್ನಲಾಗಿದೆ. ಬೆಂಕಿಗೆ ಆಹುತಿಯಾದ ಬಸ್ ಶ್ರೀ ಕೃಷ್ಣ ಟ್ರಾವೆಲ್ಸ್ ಗೆ ಎಂಬ ಖಾಸಾಗಿ ಕಂಪೆನಿಗೆ ಸೇರಿದ್ದು ಎಂದು ಪೊಲೀಸರು ತಿಳಿಸಿದ್ದಾರೆ. ದುರ್ಘಟನೆಯಲ್ಲಿ ಒಬ್ಬ ಪ್ರಯಾಣಿಕ ಪ್ರಾಣ ಕಳೆದುಕೊಂಡಿದ್ದು, ದುರ್ಘಟನೆ ಸಂದರ್ಭ ಬಸ್ಸಿನಲ್ಲಿ 40 ಪ್ರಯಾಣಿಕರಿದ್ದರು ಎನ್ನಲಾಗಿದೆ.

. Ad Widget . Ad Widget . Ad Widget . Ad Widget . Ad Widget . Ad Widget . . Ad Widget . Ad Widget . Ad Widget . Ad Widget .

ಬೆಂಕಿಯ ಕೆನ್ನಾಲಿಗೆಗೆ ವಸ್ತುಗಳು, ಪ್ರಮುಖ ದಾಖಲೆಗಳು ಸುಟ್ಟು ಕರಕಲಾಗಿದೆ. ಸಹಾಯಕ್ಕಾಗಿ ಮೂರು ಗಂಟೆಗಳ ಕಾಲ ರಸ್ತೆಯಲ್ಲಿ ಪ್ರಯಾಣಿಕರು ಪರದಾಡಿದ್ದೂ, ಬಸ್ ಮಾಲೀಕರು ಪ್ರಯಾಣಿಕರ ಬಗ್ಗೆ ತಲೆಕೆಡಿಸಿಕೊಂಡಿಲ್ಲ ಎಂದು ಬಸ್ಸಿನಲ್ಲಿದ್ದವರು ದೂರಿದ್ದಾರೆ. ಹೈದರಾಬಾದ್‌ನಿಂದ ಚಿರಾಲಗೆ ಹೋಗುತ್ತಿದ್ದಾಗ ಈ ದುರ್ಘಟನೆ ನಡೆದಿದೆ ಎಂದು ಪ್ರಯಾಣಿಕರು ತಿಳಿಸಿದ್ದಾರೆ.

ಘಟನೆ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. ಶಾರ್ಟ್ ಸರ್ಕ್ಯೂಟ್‌ನಿಂದ ಅಪಘಾತ ಸಂಭವಿಸಿದೆಯೇ ಅಥವಾ ಚಾಲಕ ಮತ್ತು ಟ್ರಾವೆಲ್ಸ್​​ ಮಾಲೀಕರ ತಪ್ಪೇ ಎಂಬುದರ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Leave a Comment

Your email address will not be published. Required fields are marked *