ಸಮಗ್ರ ನ್ಯೂಸ್: ಶ್ರೀಲಂಕಾ ಜಲಪ್ರದೇಶಕ್ಕೆ ಅಕ್ರಮ ಪ್ರವೇಶದ ಹಿನ್ನಲೆಯಲ್ಲಿ ಬಂಧಿತರಾಗಿದ್ದ ಮೀನುಗಾರರನ್ನು ಲಂಕಾ ಸರ್ಕಾರ ಬಿಡುಗಡೆ ಮಾಡಿದ್ದು, ಅವರು ಇಂದು ಚೆನ್ನೈಗೆ ಆಗಮಿಸಿದರು.
ಅಕ್ಟೋಬರ್ 28 ಹಾಗೂ ನವೆಂಬರ್ 14ರಂದು ಮೀನುಗಾರಿಕೆಗೆ ತೆರಳಿದ್ದ ಒಟ್ಟು 37 ಮಂದಿಯನ್ನು ಶ್ರೀಲಂಕಾದ ಅಧಿಕಾರಿಗಳು ಬಂಧಿಸಿದ್ದರು. ಇವರ ಬಿಡುಗಡೆಗಾಗಿ ಕೇಂದ್ರ, ರಾಜ್ಯ ಸರ್ಕಾರಗಳು ಮತ್ತು ಮೀನುಗಾರಿಕೆ ಇಲಾಖೆ ಮಧ್ಯಸ್ಥಿಕೆ ವಹಿಸಿ, ಬಿಡುಗಡೆಗೆ ಶ್ರಮವಹಿಸಿತ್ತು.
ಇಂದು ಚೆನ್ನೈಗೆ ಬಂದಿಳಿದ ಮೀನುಗಾರರನ್ನು ತಮಿಳುನಾಡು ಬಿಜೆಪಿಯ ನಾಯಕರು ಬರಮಾಡಿಕೊಂಡರು. ನಂತರ ಅವರು ರಾಮೇಶ್ವರಂಗೆ ತೆರಳಿದರು.




























