ಕೆ.ವಿ.ಜಿ.ಪಾಲಿಟೆಕ್ನಿಕ್ : ಕನ್ನಡ ರಾಜ್ಯೋತ್ಸವ “ಕರ್ನಾಟಕ ಸುವರ್ಣ ಸಂಭ್ರಮ”ದ ಆಚರಣೆ

ಸುಳ್ಯದ ಕೆ.ವಿ.ಜಿ.ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಕನ್ನಡ ರಾಜ್ಯೋತ್ಸವ “ಕರ್ನಾಟಕ ಸುವರ್ಣ ಸಂಭ್ರಮ” ಆಚರಣೆಯು ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.
ಕಾಲೇಜಿನ ಪ್ರಾಂಶುಪಾಲ ಜಯಪ್ರಕಾಶ ಕೆ.ಯವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು.
ವೇದಿಕೆಯಲ್ಲಿ ವಿಭಾಗ ಮುಖ್ಯಸ್ಥರುಗಳಾದ ದೇವರಾಜ್ ಜಿ.ಕೆ, ರಮಾದೇವಿ, ಯತೀಶ್ ಕೆ.ಎನ್, ಬಿಂದು ಕೆ.ವಿ.ವಿದ್ಯಾರ್ಥಿ ಕ್ಷೇಮಾಧಿಕಾರಿ ಸುನಿಲ್ ಕುಮಾರ್ ಎನ್.ಪಿ ಉಪಸ್ಥಿತರಿದ್ದರು. ಸಿವಿಲ್ ವಿಭಾಗದ ಶಿಕ್ಷಕ ನಾರಾಯಣ ಪಾಟಾಳಿ ಕಾರ್ಯಕ್ರಮ ಸಂಘಟಿಸಿ, ನಿರೂಪಿಸಿದರು. ಎನ್.ಎಸ್.ಎಸ್ ಕಾರ್ಯಕ್ರಮಾಧಿಕಾರಿ ಚಂದ್ರಶೇಖರ ಬಿಳಿನೆಲೆ ಸಂಘಟನೆಗೆ ಸಹಕರಿಸಿದರು.
ವಿದ್ಯಾರ್ಥಿಗಳಿಂದ ಕನ್ನಡ ಗೀತ ಗಾಯನ ಹಾಗೂ ಭಾಷಣ ಕಾರ್ಯಕ್ರಮ ನಡೆಯಿತು.

. Ad Widget . Ad Widget

Leave a Comment

Your email address will not be published. Required fields are marked *