ಪ್ರೀತಿ, ಕಾಳಜಿಯ ಪ್ರತೀಕ ‘ರಕ್ಷಾ ಬಂಧನ’

ಸಮಗ್ರ ನ್ಯೂಸ್: ಪರಸ್ಪರ ನಿರಪೇಕ್ಷ ಪ್ರೀತಿ, ಕಾಳಜಿ, ಜವಾಬ್ದಾರಿ ಹಾಗೂ ಸಹೋದರ – ಸಹೋದರಿಯ ಉತ್ತಮ ಸಂಬಂಧವನ್ನು ನಿರ್ಮಾಣ ಮಾಡುವ ಹಬ್ಬ ರಕ್ಷಾ ಬಂಧನ. ಸನಾತನ ಧರ್ಮದಲ್ಲಿ ರಕ್ಷಾಬಂಧನ ಹಬ್ಬವನ್ನು ಶ್ರಾವಣ ಹುಣ್ಣಿಮೆಯಂದು ಆಚರಿಸಲಾಗುತ್ತದೆ.

. Ad Widget . Ad Widget

ಈ ದಿನ ಸಹೋದರಿಯರು ತಮ್ಮ ಸಹೋದರರಿಗೆ ಆರತಿ ಬೆಳಗಿ, ಪ್ರೀತಿಯ ಪ್ರತೀಕವೆಂದು ರಾಖಿ ಕಟ್ಟುತ್ತಾರೆ. ಸಹೋದರರು ಏನಾದರೂ ಒಂದು ವಸ್ತುವನ್ನು ಉಡುಗೊರೆಯಾಗಿ ನೀಡಿ ಆಶೀರ್ವಾದವನ್ನೂ ನೀಡುತ್ತಾರೆ. ಇದರ ಹಿಂದೆ ಸಹೋದರನ ಏಳಿಗೆಯಾಗಬೇಕು ಮತ್ತು ಸಹೋದರನು ಸಹೋದರಿಯ ರಕ್ಷಣೆ ಮಾಡಬೇಕು ಎನ್ನುವ ಉದ್ದೇಶವಿರುತ್ತದೆ.

. Ad Widget . . Ad Widget . Ad Widget

ಇಂದು ಎಲ್ಲ ಕಡೆ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ, ಕಿರುಕುಳ ನಡೆಯುತ್ತಿರುವ ಈ ಸಂದರ್ಭದಲ್ಲಿ ರಕ್ಷಾಬಂಧನವು ಯುವಕ-ಯುವತಿಯರಿಗೆ ಇದರಿಂದ ಹೊರಬರಲು ಇರುವ ಒಂದು ವ್ರತವಿದ್ದಂತೆ. ಸಹೋದರಿಯು ಸಹೋದರನಿಗೆ ರಾಖಿಯನ್ನು ಕಟ್ಟುವುದಕ್ಕಿಂತ, ಯಾರಾದರೊಬ್ಬ ಯುವಕನು ಯಾರಾದರೊಬ್ಬ ತರುಣಿಯಿಂದ ರಾಖಿಯನ್ನು ಕಟ್ಟಿಸಿಕೊಳ್ಳುವುದು ಹೆಚ್ಚು ಮಹತ್ವದ್ದಾಗಿದೆ. ಇದರಿಂದ ಯುವತಿಯ ಕಡೆಗೆ ನೋಡುವ ವಿಶೇಷವಾಗಿ ಯುವಕರ ಮತ್ತು ಪುರುಷರ ದೃಷ್ಟಿಕೋನವು ಬದಲಾಗುತ್ತದೆ.

ಸಹೋದರ-ಸಹೋದರಿಯ ಈ ಪವಿತ್ರ ಬಂಧನವು ಯುವ ಜನರನ್ನು ಲೈಂಗಿಕ ವಿಕಾರಗಳ ಕೂಪದಲ್ಲಿ ಬೀಳುವುದರಿಂದ ತಪ್ಪಿಸಲು ಸಮರ್ಥವಾಗಿದೆ. ಈ ನಿರ್ಮಲ ಪ್ರೇಮದ ಮುಂದೆ ಕಾಮ-ಕ್ರೋಧವು ಶಾಂತವಾಗುತ್ತದೆ. ಹೀಗೆ ರಕ್ಷಾಬಂಧನ ಹಬ್ಬವು ಸಮಾಜವನ್ನು ಒಗ್ಗೂಡಿಸುವ ಒಂದು ಸಂಧಿಯಾಗಿದೆ.

Leave a Comment

Your email address will not be published. Required fields are marked *