ಕೊಲ್ಲಮೊಗ್ರು: ಹಣ ಪಣಕ್ಕಿಟ್ಟು ಲೂಡ ಆಟ| ಸುಬ್ರಹ್ಮಣ್ಯ ಪೊಲೀಸರ ದಾಳಿ|ಒರ್ವ ವಶಕ್ಕೆ

ಸಮಗ್ರ ನ್ಯೂಸ್: ಹಣವನ್ನು ಪಣಕ್ಕಿಟ್ಟು ಲೂಡದ ದಾಳವನ್ನು ಉಪಯೋಗಿಸಿ ಆಡುತ್ತಿದ್ದ ವೇಳೆ ಪೊಲೀಸರು ದಾಳಿ ನಡೆಸಿ ಓರ್ವನನ್ನು ವಶಕ್ಕೆ ಪಡೆದಿದ್ದು, ಮೂವರು ಪರಾರಿಯಾದ ಘಟನೆ ಸುಬ್ರಹ್ಮಣ್ಯ ಪೊಲೀಸ್ ಠಾಣಾ ವ್ಯಾಪ್ತಿಯ ಕೊಲ್ಲಮೊಗ್ರುನಲ್ಲಿ ಆ.26ರಂದು ನಡೆದಿದೆ.

. Ad Widget . Ad Widget

ಸುಳ್ಯ ತಾಲೂಕಿನ ಕೊಲ್ಲಮೊಗ್ರು ಗ್ರಾಮದ ಕೊಲ್ಲಮೊಗ್ರು ಬಸ್ಸು ನಿಲ್ದಾಣದ ಬಳಿ ಸಾರ್ವಜನಿಕ ಸ್ಥಳದಲ್ಲಿ ಹಣವನ್ನು ಪಣವಾಗಿಟ್ಟುಕೊಂಡು ಅದೃಷ್ಟ ಆಟವಾದ ಲೂಡ ದಾಳವನ್ನು ಉಪಯೋಗಿಸಿ ಜೂಜಾಟ ಆಟ ಆಡುತ್ತಿರುತ್ತಿರುವ ಖಚಿತ ಮಾಹಿತಿ ಮೇರೆಗೆ ಸುಬ್ರಹ್ಮಣ್ಯ ಠಾಣಾ ಎಸೈ ಸಿಬ್ಬಂದಿಗಳೊಂದಿಗೆ ದಾಳಿ ನಡೆಸಿದ್ದಾರೆ.

. Ad Widget . . Ad Widget . Ad Widget

ಕಿರಣ್‌ ಎಂಬಾತನನ್ನು ವಶಕ್ಕೆ ಪಡೆದಿದ್ದು. ಆಡುತ್ತಿದ್ದ ಕುಮಾರ್‌ ಗಡಿಕಲ್ಲು, ಅವಿನ್‌ ಗಡಿಕಲ್ಲು, ಲಕ್ಷ್ಮಣ ಕಡೋಡಿ ಎಂಬವರು ಪರಾರಿಯಾಗಿದ್ದಾರೆ. ಅದೃಷ್ಟದ ಆಟಕ್ಕೆ ಒಟ್ಟು ರೂಪಾಯಿ 1350 ಹಾಗೂ ಲೂಡದ ದಾಳ-1, ರಟ್ಟಿನ ತುಂಡು -1 ನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸುಬ್ರಹ್ಮಣ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Comment

Your email address will not be published. Required fields are marked *