ಸಮಗ್ರ ನ್ಯೂಸ್: ನಾಡಿಗೆ ಬಂದಿದ್ದ ಕಾಡುಕೋಣವೊಂದು ಆಯತಪ್ಪಿ ಬಾವಿಗೆ ಬಿದ್ದು ಮೃತಪಟ್ಟ ಘಟನೆ ಪುತ್ತೂರು ತಾಲ್ಲೂಕಿನ ನರಿಮೊಗರು ಗ್ರಾಮದ ಐಟಿಐ ಮೈದಾನದ ಬಳಿ ನಡೆದಿದೆ.
ನರಿಮೊಗರು ಐಟಿಐ ಸಮೀಪದ ನಿವಾಸಿ ಪ್ರಕಾಶ್ ಎಂಬುವರ ಜಾಗದಲ್ಲಿರುವ ಬಾವಿಯಲ್ಲಿ ಸುಮಾರು 5 ವರ್ಷದ ಕಾಡುಕೋಣದ ಕಳೇಬರ ಶನಿವಾರ ಬೆಳಿಗ್ಗೆ ಪತ್ತೆಯಾಗಿದೆ.
ಸ್ಥಳೀಯರು ನೀಡಿದ ಮಾಹಿತಿಯಂತೆ ಸ್ಥಳಕ್ಕೆ ಭೇಟಿ ನೀಡಿದ್ದು, ಕ್ರೇನ್ ಬಳಸಿ ಕಳೇಬರ ಮೇಲೆತ್ತಲಾಗಿದೆ ಎಂದು ಅರಣ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಪುತ್ತೂರು ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸುಬ್ಬಯ್ಯ ನಾಯ್ಕ, ವಲಯ ಅರಣ್ಯಾಧಿಕಾರಿ ಕಿರಣ್, ಉಪ ವಲಯ ಅರಣ್ಯಾಧಿಕಾರಿಗಳಾದ ಕುಮಾರಸ್ವಾಮಿ, ಪ್ರಸಾದ್ ಕೆ.ಜೆ., ಬೀಟ್ ಫಾರೆಸ್ಟ್ ಸತ್ಯನ್ ಡಿ.ಜಿ., ದೀಪಕ್, ಚಿದಾನಂದ, ಅರಣ್ಯ ವೀಕ್ಷಕ ಶೀನಪ್ಪ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಯಿತು.



























