Health Tips:ಹಲಸಿನ ಹಣ್ಣು ಅಂದರೆ ನಿಮಗೆ ಇಷ್ಟನಾ? ಹಾಗಿದ್ರೆ ತಿನ್ನುವ ಮೊದಲು ಇದನ್ನು ಓದಿ.

ಸಮಗ್ರ ನ್ಯೂಸ್: ದೇಶದಲ್ಲಿ ಸಾಕಷ್ಟು ಮಂದಿ ಮಧುಮೇಹ ಕಾಯಿಲೆಗೆ ಬಲಿಯಾಗುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಳೆ ಇದೆ. ಮಧುಮೇಹ ರೋಗಿಗಳ ರಕ್ತದಲ್ಲಿನ ಸಕ್ಕರೆಯ ಮಟ್ಟವು ಹೆಚ್ಚಾಗುತ್ತದೆ. ಇದರಿಂದ ದೇಹದ ವಿವಿಧ ಅಂಗಗಳು, ಕಣ್ಣಿನಿಂದ ಹಿಡಿದು ಹೃದಯ, ಮೂತ್ರಪಿಂಡಗಳು ಸೇರಿದಂತೆ ಕೆಲ ಭಾಗಗಳು ಹಾನಿಗೊಳಗಾಗುತ್ತವೆ.

Ad Widget ... ..

ಭಾರತದ ಜನಸಂಖ್ಯೆಯಲ್ಲಿ ಶೇ. 8.7 ರಷ್ಟು ಜನರು ಮಧುಮೇಹದಿಂದ ಬಳಲುತ್ತಿದ್ದಾರೆ. ಅದರಲ್ಲಿಯೂ 20 ರಿಂದ 70 ವರ್ಷ ವಯಸ್ಸಿನವರು ಮಧುಮೇಹದಿಂದ ಬಳಲುತ್ತಿದ್ದಾರೆ ಎಂಬುದನ್ನು ಇತ್ತೀಚಿಗೆ ವಿಶ್ವ ಆರೋಗ್ಯ ಸಂಸ್ಥೆ ಬಹಿರಂಗಪಡಿಸಿದೆ.

Ad Widget

ಮಧುಮೇಹ ಬಂದಾಗ ಆಹಾರವನ್ನು ನಿಯಂತ್ರಣದಲ್ಲಿಡಲು ವೈದ್ಯರು ಸಲಹೆ ನೀಡುತ್ತಾರೆ. ಅನೇಕ ಇಷ್ಟವಾದ ಹಣ್ಣುಗಳು ಮತ್ತು ಸಿಹಿತಿಂಡಿಗಳನ್ನು ಜೀವನದಿಂದ ದೂರವಿಡಬೇಕಾಗುತ್ತದೆ. ಆದರೆ ಮಳೆಗಾಲದ ಈ ಸಮಯದಲ್ಲಿ ಹಲವರು ಹಲಸಿನ ಹಣ್ಣು ತಿನ್ನುವುದನ್ನು ಇಷ್ಟಪಡುತ್ತಾರೆ. ಹಲಸಿನ ಹಣ್ಣಿನ ವಾಸನೆಗೆ ಮೈ ಮರೆತು ಮಧುಮೇಹಿಗಳು ಹಲಸಿನ ಹಣ್ಣನ್ನು ತಿನ್ನಲು ಇಚ್ಚಿಸುತ್ತಾರೆ.

ಆದರೆ ಹಲಸಿನ ಹಣ್ಣು ತಿನ್ನುವುದು ಉತ್ತಮವೇ? ಎಂಬ ಪ್ರಶ್ನೆಗೆ ಮುಂಬೈನ ಅಪೋಲೊ ಸ್ಪೆಕ್ಟ್ರಾ ಆಸ್ಪತ್ರೆಯ ಡಯೆಟಿಷಿಯನ್ ಡಾ.ಜಿಂದಾಲ್ ಪಟೇಲ್ ಅವರು ಕೆಲ ಮಾಹಿತಿ ನೀಡುತ್ತಾರೆ. ಹಸಿಯಾಗಿ ತಿಂದರೂ ದಿನಕ್ಕೆ ಅರ್ಧ ಕಪ್ ಅಥವಾ ಸರಿಸುಮಾರು 75 ಗ್ರಾಂ ಮಾತ್ರ ಹಲಸಿನ ಹಣ್ಣನ್ನು ತಿನ್ನಬಹುದು. ಈ ಹಣ್ಣಿನಲ್ಲಿರುವು ನಾರಿನಂಶವು ದೇಹಕ್ಕೆ ಸೂಕ್ತವಾಗಿದೆ. ಹಸಿ ಹಲಸು ತಿನ್ನುವುದು ಮಧುಮೇಹಿಗಳಿಗೆ ಒಳ್ಳೆಯದು. ಹಾಗೆಂದು ಹೆಚ್ಚು ತಿನ್ನುವುದು ಸಹ ಒಳ್ಳೆಯದಲ್ಲ ಎಂದು ತಿಳಿಸಿದ್ದಾರೆ.

Leave a Comment

Your email address will not be published. Required fields are marked *