ನ್ಯೂ ಇಯರ್ ಪಾರ್ಟಿ ವೇಳೆ ಒತ್ತಿದ ಟ್ರಿಗರ್‌ಗೆ ಯುವಕ ಬಲಿ| ಶೂಟ್ ಮಾಡಿದಾತನೂ ಹೃದಯಾಘಾತದಿಂದ ಸಾವು

ಸಮಗ್ರ ನ್ಯೂಸ್: ರಾಜ್ಯಾದ್ಯಂತ ಹೊಸ ವರ್ಷವನ್ನು ಸಂಭ್ರಮ, ಸಡಗರದಿಂದ ಸ್ವಾಗತಿಸಿದ್ದಾರೆ. ಆದರೆ ಈ ಹೊಸ ವರ್ಷವನ್ನು ಬರಮಾಡಿಕೊಳ್ಳುವ ಸಂದರ್ಭದಲ್ಲಿ ಗುಂಡು ತಗುಲಿ ಓರ್ವ ಯುವಕ ಸಾವನ್ನಪ್ಪಿದ ಘಟನೆ ಶಿವಮೊಗ್ಗದ ಸಹ್ಯಾದ್ರಿ ಕಾಲೇಜು ಬಳಿ ನಡೆದಿದೆ.

Ad Widget ... ..

ಶಿವಮೊಗ್ಗದ ಪಿಡ್ಲ್ಯೂಡಿ ಕ್ವಾರ್ಟರ್ಸ್​ನಲ್ಲಿ ವಾಸವಾಗಿದ್ದ ವಿನಯ್ ಮೃತ ದುರ್ದೈವಿ. ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಕನ್ನಡ ಪಿಎಚ್​​ಡಿ ಮಾಡುತ್ತಿದ್ದ. ನಿನ್ನೆ ರಾತ್ರಿ ಮಂಜುನಾಥ್ ಒಲೇಕಾರ್ ಎಂಬುವವರ ಮನೆಯಲ್ಲಿ ನ್ಯೂ ಇಯರ್ ಪಾರ್ಟಿಗೆಂದು ಬಂದಿದ್ದ. ಈ ವೇಳೆ ಮಂಜುನಾಥ್ ಒಲೇಕಾರ್ ರಾತ್ರಿ 12ಕ್ಕೆ ನ್ಯೂ ಇಯರ್ ಸ್ವಾಗತಿಸಲು ಡಿಬಿಬಿಎಲ್ ಗನ್​ನಿಂದ ಗುಂಡು ಹಾರಿಸಿದ್ದಾರೆ. ಆದರೆ ಆಕಸ್ಮಿಕವಾಗಿ ವಿನಯ್​​ಗೆ ಹೊಟ್ಟೆಗೆ ಗುಂಡು ತಗುಲಿದೆ. ಕೂಡಲೇ ಆತನನ್ನು ಮ್ಯಾಕ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಿಸದೇ ವಿನಯ್​​ ಮೃತಪಟ್ಟಿದ್ದಾನೆ.

Ad Widget

ವಿನಯ್​ಗೆ ಗುಂಡು ತಗಲುತ್ತಿದ್ದಂತೆ ಮಂಜುನಾಥ್ ಒಲೇಕಾರ್ ಹೃದಯಾಘಾತದಿಂದ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನಾ ಸ್ಥಳಕ್ಕೆ ಕೋಟೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಕೋಟೆ ಪೊಲೀಸ್​​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Comment

Your email address will not be published. Required fields are marked *