ಉಡುಪಿ: ಲಾರಿ ಡಿಕ್ಕಿ ಹೊಡೆದು ಸಬ್ ಇನ್ಸ್‌ಪೆಕ್ಟರ್ ಸಾವು

ಸಮಗ್ರ ನ್ಯೂಸ್: ಉಡುಪಿಯ ಹೊರ ವಲಯದ ಅಂಬಾಗಿಲಿನಲ್ಲಿ ಲಾರಿ ಡಿಕ್ಕಿ ಹೊಡೆದು ಮಂಗಳೂರು ಅಬಕಾರಿ ಇಲಾಖೆಯ ಸಬ್ ಇನ್ ಸ್ಪೆಕ್ಟರ್ ಸಾವನ್ನಪ್ಪಿರುವ ದುರ್ಘಟನೆ ಗುರುವಾರ(ಡಿ.29) ತಡರಾತ್ರಿ ನಡೆದಿದೆ.

. Ad Widget . Ad Widget

ಅಬಕಾರಿ ಇಲಾಖೆಯ ಸಬ್ ಇನ್ ಸ್ಪೆಕ್ಟರ್ ಶಂಕರ್(52) ಮೃತ ದುರ್ದೈವಿ. ಮಂಗಳೂರು ಅಬಕಾರಿ ಇಲಾಖೆಯಲ್ಲಿ ಕರ್ತವ್ಯ ಮುಗಿಸಿ ಬಸ್ಸಿನಿಂದ ಉಡುಪಿಗೆ ಬಂದಿದ್ದ ಇವರು ತಮ್ಮ ಬೈಕ್ ನಲ್ಲಿ ಉಳ್ಳೂರು ಕಡೆ ಹೋಗುತ್ತಿದ್ದಾಗ ಅತೀ ವೇಗದಿಂದ ಆಗಮಿಸಿದ ಲಾರಿ ಬೈಕ್ ಗೆ ಢಿಕ್ಕಿ ಹೊಡೆದಿತ್ತು.

. Ad Widget . . Ad Widget . Ad Widget

ಗಂಭೀರವಾಗಿ ಗಾಯಗೊಂಡಿದ್ದ ಜಿಲ್ಲಾಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.
ಶಂಕರ್ ಬ್ರಹ್ಮಾವರದ ಉಳ್ಳೂರು ನಿವಾಸಿಯಾಗಿದ್ದಾರೆ.

Leave a Comment

Your email address will not be published. Required fields are marked *