ಕರಾವಳಿಯಲ್ಲಿ ಮತ್ತೊಂದು ಧರ್ಮದಂಗಲ್ ಶುರು| ಲವ್ ಜಿಹಾದ್ ವಿರುದ್ದ ಹಿಂಜಾವೇ ಪೋಸ್ಟರ್ ಅಭಿಯಾನ

ಸಮಗ್ರ ನ್ಯೂಸ್: ಕರಾವಳಿಯಲ್ಲಿ ಮತ್ತೊಂದು ಧರ್ಮ ದಂಗಲ್‌ ಶುರುವಾಗಿದ್ದು, ಲವ್‌ ಜಿಹಾದ್‌ ವಿರುದ್ಧ ಹಿಂದೂ ಜಾಗರಣ ವೇದಿಕೆ ಜಾಗೃತಿ ಮೂಡಿಸಲು ಮುಂದಾಗಿದ್ದು ದೆಹಲಿ ಶ್ರದ್ಧಾ ಕೇಸ್‌ ಮುಂದಿಟ್ಟುಕೊಂಡು ಇದೀಗ ಹೊಸ ಪೋಸ್ಟರ್‌ ವಾರ್‌ ಮೂಲಕ ಕಿಚ್ಚು ಹಚ್ಚಿದ್ದಾರೆ.

. Ad Widget . Ad Widget . Ad Widget .

ಈ ಪೋಸ್ಟರ್‌ನಲ್ಲಿ ‘ಕಣ್ಣಿದ್ದು ಕುರುಡಾಗಬೇಡಿ ತಿಳಿದು ತಪ್ಪು,ಮಾಡಬೇಡಿ.. ಹಿಂದೂ ಯುವತಿಯ ಜೊತೆ ತಿರುಗಾಡಿದ್ರೆ ಹುಷಾರ್‌..! ಶವ ಯಾತ್ರೆ ಮಾಡಲಾಗುತ್ತದೆ’ ಎಂದು ಮುಸ್ಲಿಂ ಸಮುದಾಯದ ಯುವಕರಿಗೆ ಭಜರಂಗದಳ ಸಂಚಾಲಕ ಪುನೀತ್‌ ಅತ್ತಾವರ್‌ ಖಡಕ್‌ ವಾರ್ನಿಂಗ್‌ ನೀಡಿದ್ದಾರೆ.

. Ad Widget . Ad Widget . Ad Widget . Ad Widget . Ad Widget . Ad Widget . . Ad Widget . Ad Widget . Ad Widget . Ad Widget .

‘ಇನ್ನೂ ಪದೇ ಪದೇ ಹೇಳುತ್ತಿದ್ದೆವೆ ಹಿಂದು ಹುಡುಗಿಯರ ಜೊತೆ ತಿರುಗೇಡಿ ಲವ್‌ ಜಿಹಾದ್‌ ಮಾಡಿ ಹಿಂದೂ ಹುಡುಗಿಯರ ಬಾಳು ಹಾಳು ಮಾಡಬೇಡಿ. ನೀವು ಕೇಳುತ್ತಿಲ್ಲ ನಂತೂರು ಘಟನೆ ಕೇವಲ ಸ್ಯಾಂಪಲ್‌ ಮಾತ್ರ ಇನ್ನೂ ಕೂಡ ನೀವು ಲಬ್‌ ಜಿಹಾದ್‌ ನಿಲ್ಲಸದಿದ್ದರೆ ನಿಮಗೆ ಮಯ್ಯತ್‌ ಶತಸಿದ್ಧ’ ಎಂದು ಪುನೀತ್‌ ಅತ್ತಾವರ್‌ ಪೋಸ್ಟರ್‌ ಹಂಚಿಕೊಂಡಿದ್ದಾರೆ.

ಈ ಪೋಸ್ಟರ್ ವೈರಲ್ ಆಗುತ್ತಿದ್ದು, ಕರಾವಳಿಯಲ್ಲಿ ಮತ್ತೊಮ್ಮೆ ಕೋಮು ಭಾವನೆ ಕೆರಳಿಸುವ ಸಾಧ್ಯತೆ ತಳ್ಳಿ ಹಾಕುವಂತಿಲ್ಲ. ಒಟ್ಟಾರೆ ಚುನಾವಣೆ ಹತ್ತಿರವಾಗುತ್ತಿದ್ದಂತೆ ಕರಾವಳಿ ಜಿಲ್ಲೆಗಳಲ್ಲಿ ಇಂತಹ ಪೋಸ್ಟರ್ ಗಳು ಹೆಚ್ಚಾಗುತ್ತಿದ್ದು ಸಾಮರಸ್ಯ ಕದಡುವ ಮುನ್ನ ಎಚ್ಚೆತ್ತುಕೊಳ್ಳಬೇಕಿದೆ.

Leave a Comment

Your email address will not be published. Required fields are marked *