ಮಂಗಳೂರು: ಪ್ರತಿಭಾ ಕುಳಾಯಿ ಕುರಿತು ಜಾಲತಾಣಗಳಲ್ಲಿ ಅವಹೇಳನ| ಪತ್ರಕರ್ತ ಶ್ಯಾಮಸುದರ್ಶನ್ ಗೆ ನಿರೀಕ್ಷಣಾ ಜಾಮೀನು

ಸಮಗ್ರ ನ್ಯೂಸ್: ಮಂಗಳೂರು ಮಹಾನಗರ ಪಾಲಿಕೆಯ ಮಾಜಿ ಕಾರ್ಪೊರೇಟರ್, ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿಯ ಸಂಯೋಜಕಿ ಪ್ರತಿಭಾ ಕುಳಾಯಿ ಅವರ ಕುರಿತು ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಸಂದೇಶ ಹಾಕಿದ್ದ ಪ್ರಕರಣದ ಆರೋಪಿಯಾಗಿರುವ ಪುತ್ತೂರಿನ ಖಾಸಗಿ ನ್ಯೂಸ್ ಚಾನೆಲ್ ನ ಸಂಪಾದಕ ಶ್ಯಾಮಸುದರ್ಶನ್ ಭಟ್ ಹೊಸಮೂಲೆ ಅವರಿಗೆ ನ್ಯಾಯಾಲಯ ನಿರೀಕ್ಷಣಾ ಜಾಮೀನು ಮಂಜೂರು ಮಾಡಿ ನ.9ರಂದು ಆದೇಶಿಸಿದೆ.

Ad Widget ... .. Ad Widget .

ಶ್ಯಾಮಸುದರ್ಶನ ಭಟ್ ಹೊಸಮೂಲೆ ಅವರು ನಿರೀಕ್ಷಣಾ ಜಾಮೀನು ಕೋರಿ ಮಂಗಳೂರಿನ ಎರಡನೇ ಹೆಚ್ಚುವರಿ ಜಿಲ್ಲಾ ಸೆಷನ್ಸ್ ನ್ಯಾಯಾಲಯದಲ್ಲಿ ಅ.25ರಂದು ಅರ್ಜಿ ಸಲ್ಲಿಸಿದ್ದರು. ಅವರ ಅರ್ಜಿ ಪುರಸ್ಕರಿಸಿದ ನ್ಯಾಯಾಲಯ ನಿರೀಕ್ಷಣಾ ಜಾಮೀನು ನೀಡಿದೆ.

Ad Widget

Leave a Comment

Your email address will not be published. Required fields are marked *