ಅರಣ್ಯ ಇಲಾಖೆಯ _E-Prahari ಸರ್ವೆಗೆ ಮತ್ತೊಬ್ಬ ಸಿಬ್ಬಂದಿ ಬಲಿ| ಭಾಗಮಂಡಲ ವಲಯದ ಅರಣ್ಯ ವೀಕ್ಷಕ ಕಾಡೊಳಗೆ ಆಯತಪ್ಪಿ ಬಿದ್ದು ಸಾವು!

ಸಮಗ್ರ ನ್ಯೂಸ್: ಕೊಡಗು ಜಿಲ್ಲೆಯ ಭಾಗಮಂಡಲ ವಲಯ ಅರಣ್ಯ ವಿಭಾಗಕ್ಕೆ ಸೇರಿದ ಪಾರೆಸ್ಟ್ ವಾಚರ್(ಅರಣ್ಯ ವೀಕ್ಷಕ) ಆಕಸ್ಮಿಕವಾಗಿ ಹೊಳೆಗೆ ಆಯತಪ್ಪಿ ಬಿದ್ದು ಮೃತಪಟ್ಟ ಘಟನೆ ಮಂಗಳವಾರ ಸಂಜೆ ದ.ಕ ಜಿಲ್ಲೆಯ ಸುಳ್ಯ ತಾಲೂಕಿನ ತೊಡಿಕಾನ ಗಡಿಭಾಗದ ಮಾವಿನಕಟ್ಟೆ ನರುವೋಳು ಮೊಟ್ಟೆ ಬಳಿ ನಡೆದಿದೆ.

. Ad Widget . Ad Widget

ಮೃತಪಟ್ಟ ಫಾರೆಸ್ಟ್ ವಾಚರ್ ಚಿನ್ನಪ್ಪ (58 ವರ್ಷ ) ಎಂದು ಗುರುತಿಸಲಾಗಿದೆ. ಇವರು ಅರಣ್ಯ ಇಲಾಖೆ ಇ-ಪ್ರಹಾರಿ ತಂತ್ರಾಂಶದಲ್ಲಿ ದಾಖಲಿಸಲು ಕೊಡಗು ಅರಣ್ಯ ಇಲಾಖೆಯಿಂದ ಭೂಮಿಯ ಸರ್ವೆಗೆ ಹೋದ ಸಂದರ್ಭ ತೊಡಿಕಾನ ಸಮೀಪದ ಮಾವಿನಕಟ್ಟೆ ನರುವೋಳು ಮೊಟ್ಟೆ ಎಂಬಲ್ಲಿ ಹೊಳೆ ಬದಿಯಲ್ಲಿ ನೀರು ಕುಡಿಯಲು ಪ್ರಯತ್ನಿಸುತ್ತಿದ್ದಾಗ ಈ ಘಟನೆ ನಡೆದಿದೆ ಎನ್ನಲಾಗಿದೆ.

. Ad Widget . . Ad Widget . Ad Widget

ಅರಣ್ಯ ಇಲಾಖೆಯ e-prahari ಅನ್ನುವ ತಂತ್ರಾಶದಿಂದ ಸರ್ವೇಗೆ ಕೊಡಗಿನ ಅರಣ್ಯ ಇಲಾಖೆಯ, ಅರಣ್ಯ ವೀಕ್ಷಕ 2ನೇ ಬಲಿಯಾಗಿದ್ದಾರೆ ಎನ್ನಲಾಗಿದ್ದು, ಸಮಗ್ರ ತನಿಖೆಯಿಂದ ಮಾಹಿತಿ ತಿಳಿದುಬರಬೇಕಿದೆ.

ಈ ಹಿಂದೆ ಕೊಡಗು‌ ಜಿಲ್ಲೆಯ ಮಾಕುಟ್ಟದಲ್ಲಿ ಕರ್ತವ್ಯ ನಿರತ ಅರಣ್ಯ ವೀಕ್ಷಕ ನಾಪತ್ತೆಯಾಗಿ ಬಳಿಕ ಶವವಾಗಿ ಪತ್ತೆಯಾಗಿದ್ದರು. ಬೀಟ್ ಗೆ ಹೋದ ಸಂದರ್ಭದಲ್ಲಿ ನದಿಗೆ ಬಿದ್ದು ಸಾವನ್ನಪ್ಪಿದ ಘಟನೆ ಮಾಸುವ ಬೆನ್ನಲ್ಲೇ ಕೊಡಗಿನಲ್ಲಿ ಮತ್ತೊಂದು ದುರ್ಘಟನೆ ಸಂಭವಿಸಿದೆ.

Leave a Comment

Your email address will not be published. Required fields are marked *