ಕಾಸರಗೋಡು: ಹಾವು ಕಡಿದು ಇಂಜಿನಿಯರ್ ಸಾವು| ದೀಪಾವಳಿ ಆಚರಣೆಗೆ ಊರಿಗೆ ಬಂದಿದ್ದಾತನ ಮನೆಯಲ್ಲಿ ಸೂತಕ

ಸಮಗ್ರ ನ್ಯೂಸ್: ದೀಪಾವಳಿ ರಜೆಯಲ್ಲಿ ಊರಿಗೆ ಬಂದಿದ್ದ ಸಾಫ್ಟ್‌ವೇರ್ ಇಂಜಿನಿಯರ್ ಯುವಕನೊಬ್ಬ ಮನೆಯ ಬಳಿ ಹಾವಿನ ಕಡಿತಕ್ಕೊಳಗಾಗಿ ಸಾವನ್ನಪ್ಪಿದ ಘಟನೆ ಕಾಸರಗೋಡಿನ ಬದಿಯಡ್ಕದಲ್ಲಿ ನಡೆದಿದೆ.

. Ad Widget . Ad Widget

ಬದಿಯಡ್ಕ ಬಳಿಯ ಪಾಟಾಜೆ ನಿವಾಸಿ ಪಿ.ವಿ. ಕೃಷ್ಣ ಕುಮಾರ್ (27) ಮೃತ ಯುವಕ. ಗೋಪಾಲಕೃಷ್ಣ ಭಟ್ ಮತ್ತು ತಿರುಮಲೇಶ್ವರಿ ದಂಪತಿಯ ಪುತ್ರನಾದ ಕೃಷ್ಣ ಕುಮಾರ್ ಚೆನ್ನೈನಲ್ಲಿ ಅಮೆರಿಕದ ಕಂಪನಿಯೊಂದರಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿದ್ದರು. ಮನೆಯವರ ಜೊತೆ ದೀಪಾವಳಿ ಆಚರಿಸಲು ಊರಿಗೆ ಬಂದಿದ್ದರು.

. Ad Widget . . Ad Widget . Ad Widget

ಮನೆಯ ಬಳಿ ನಡೆದುಕೊಂಡು ಹೋಗುತ್ತಿದ್ದಾಗ ಯಾವುದೋ ಹಾವು ಕಡಿದಿದ್ದು ಅಸ್ವಸ್ಥಗೊಂಡಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ಒಯ್ದಿದ್ದು ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ. ತೀವ್ರ ವಿಷಕಾರಿ ಹಾವು ಕಡಿದಿರುವ ಸಾಧ್ಯತೆಯಿದೆ.

Leave a Comment

Your email address will not be published. Required fields are marked *