ಕರಾವಳಿಯಲ್ಲಿ ವಿಧ್ವಂಸಕ ಕೃತ್ಯ ನಡೆಸಲು ಸಂಚು| ಕಾಸರಗೋಡಿನಲ್ಲಿ ರೈಲು ಹಳಿ ತಪ್ಪಿಸಲು ಯತ್ನ

ಸಮಗ್ರ ನ್ಯೂಸ್: ಮಂಗಳೂರು ಗಡಿ ಭಾಗದಲ್ಲಿ ಕಿಡಿಗೇಡಿಗಳು ವಿಧ್ವಂಸಕ ಕೃತ್ಯಕ್ಕೆ ಸಂಚು ರೂಪಿಸಿದ್ದು, ಕಾಸರಗೋಡಿನ ರೈಲ್ವೆ ಹಳಿಗಳ ಮೇಲೆ ಕಾಂಕ್ರೀಟ್ ತುಂಡು ಇಟ್ಟು ರೈಲ್ವೆ ಹಳಿಗಳನ್ನು ತಪ್ಪಿಸಲು ಕಿಡಿಗೇಡಿಗಳು ಯತ್ನಿಸಿರುವ ಘಟನೆ ಬೆಳಕಿಗೆ ಬಂದಿದೆ.

. Ad Widget . Ad Widget

ಆಗಸ್ಟ್ 21 ರಂದು ಕಾಸರಗೋಡಿನ ಕೋಟಿಕುಳಂ-ಬೇಕಳ ಮಧ್ಯೆ ರೈಲ್ವೆ ಹಳಿಗಳ ಮೇಲೆ ಕಿಡಿಗೇಡಿಗಳು ಕಬ್ಬಿಣ್ಣದ ಸರಳುಗಳು, ಕಾಂಕ್ರೀಟ್ ಇಟ್ಟು ರೈಲು ಹಳಿಗಳನ್ನು ತುಂಡು ಮಾಡಲು ಯತ್ನಿಸಿರುವ ಘಟನೆ ನಡೆದಿದೆ. ರೈಲ್ವೆ ಗಾರ್ಡ್ ಸಮಯ ಪ್ರಜ್ಞೆಯಿಂದ ಭಾರೀ ದುರಂತ ತಪ್ಪಿದೆ. ಹಳಿ ಮೇಲೆ 35 ಕೆಜಿ ಕಾಂಕ್ರೀಟ್ ತುಂಡು ಪತ್ತೆಯಾಗಿದೆ.

. Ad Widget . . Ad Widget . Ad Widget

ರೈಲ್ವೆ ಪೊಲೀಸರು ಮತ್ತು ಸ್ಥಳೀಯ ಪೊಲೀಸರು ಘಟನೆ ಸಂಬಂಧ ತನಿಖೆ ನಡೆಸುತ್ತಿದ್ದಾರೆ. ಕಳೆದ ಶನಿವಾರವೂ ಇಂತಹುದೇ ಕೃತ್ಯ ನಡೆದಿದ್ದು, ಚಿತ್ತಾರಿ ಎಂಬಲ್ಲಿ ಕೊಯಂಬತ್ತೂರು ಮಂಗಳೂರು ರೈಲಿನ ಮೇಲೆ ಕಿಡಿಗೇಡಿಗಳು ಕಲ್ಲೆಸೆದು ಪರಾರಿಯಾಗಿದ್ದರು.

Leave a Comment

Your email address will not be published. Required fields are marked *