ಹನಿಟ್ರ್ಯಾಪ್ ಆರೋಪ; ಸ್ಯಾಂಡಲ್ ವುಡ್ ನಟ ಅರೆಸ್ಟ್

ಸಮಗ್ರ ನ್ಯೂಸ್: ಉದ್ಯಮಿಗೆ ಹನಿಟ್ರಾಪ್ ಆರೋಪದ ಹಿನ್ನೆಲೆಯಲ್ಲಿ ಸ್ಯಾಂಡಲ್ ವುಡ್ ನ ಉದಯೋನ್ಮುಖ ನಟ ಯುವರಾಜ್ ನನ್ನು ಹುಲಸೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.

. Ad Widget . Ad Widget

ನಟ ಯುವರಾಜ್ ಬೆಂಗಳೂರು ಮೂಲದ ಉದ್ಯಮಿಗೆ ಹನಿಟ್ರಾಪ್ ಮಾಡಿದ್ದ ಎನ್ನಲಾಗಿದ್ದು, ಜೆಪಿ ನಗರ ನಿವಾಸಿ ಯುವರಾಜ್ ಅಲಿಯಾಸ್ ಯುವ ಮಿಸ್ಟರ್ ಭೀಮರಾವ್ ಎಂಬ ಸಿನಿಮಾಕ್ಕೆ ಆರೋಪಿ ನಾಯಕನಾಗಿದ್ದ. ಎಲೆಕ್ಟ್ರಾನಿಕ್ ಸಿಟಿ ಮೂಲದ ಉದ್ಯಮಿಗೆ ನಟ ಯುವರಾಜ ಇಬ್ಬರು ಯುವತಿಯರ ಹೆಸರು ಬಳಸಿ ಚಾಟ್ ಮಾಡಿದ್ದ ಎನ್ನಲಾಗುತ್ತಿದೆ.

. Ad Widget . . Ad Widget . Ad Widget

ನಂತರ ಉದ್ಯಮಿಗೆ ಭೇಟಿಯಾಗಿದ್ದ ತಾವು ಕ್ರೈಂ ಪೊಲೀಸರು ಎಂದು ಹೇಳಿ ಹೆದರಿಸಿ ಹಂತ ಹಂತವಾಗಿ ಒಟ್ಟು ಹದಿನಾಲ್ಕು ಲಕ್ಷಕ್ಕೂ ಹೆಚ್ಚಿನ ಹಣ ವಸೂಲಿ ಮಾಡಿದ್ದ. ಉದ್ಯಮಿಗೆ ಅನುಮಾನ ಬಂದು ಹಲಸೂರು ಗೇಟ್ ಠಾಣೆಗೆ ದೂರು ನೀಡಲಾಗಿತ್ತು. ದೂರಿನನ್ವಯ ಆರೋಪಿಯನ್ನು ಅರೆಸ್ಟ್ ಮಾಡಲಾಗಿದೆ.

ಇನ್ನು, ಕೇಸ್ ಮುಂದುವರೆಸದಿರಲು ಹಣ ಕೇಳಿದ್ದು, ಮೊದಲಿಗೆ ಐವತ್ತು ಸಾವಿರ, ನಂತರ ಬ್ಯಾಂಕ್​ನಲ್ಲಿ ಮೂರು ಲಕ್ಷ ಡ್ರಾ ಮಾಡಿಸಿಕೊಂಡಿದ್ದ. ಹಂತ ಹಂತವಾಗಿ ಒಟ್ಟು 14 ಲಕ್ಷಕ್ಕೂ ಹೆಚ್ಚಿನ ಹಣ ವಸೂಲಿ ಮಾಡಿದ್ದ. ಹಲಸೂರು ಗೇಟ್ ಬಳಿ ಸಹ ಒಮ್ಮೆ ಹಣ ಪಡೆದಿದ್ದು, ಉದ್ಯಮಿಗೆ ಡೌಟ್ ಬಂದು ಹಲಸೂರು ಗೇಟ್ ಠಾಣೆಗೆ ದೂರು ನೀಡಲಾಗಿತ್ತು. ದೂರಿನ ಅನ್ವಯ ಆರೋಪಿಯನ್ನು ಅರೆಸ್ಟ್ ಮಾಡಲಾಗಿದೆ.

Leave a Comment

Your email address will not be published. Required fields are marked *